ಕರ್ನಾಟಕ

ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ ಆನಂದ್ ಸಿಂಗ್; ‘ನನಗೆ ನನ್ನ ಕ್ಷೇತ್ರವೇ ಮುಖ್ಯ, ಎಲ್ಲ ಧರ್ಮೀಯರು ನನಗೆ ಬೇಕು’

Pinterest LinkedIn Tumblr

ಹೊಸಪೇಟೆ: ‘ಟಿಪ್ಪು ಜಯಂತಿ ಆಚರಣೆ ಕುರಿತು ರಾಜ್ಯದಲ್ಲಿ ಪರ ವಿರೋಧ ನಡೆಯುತ್ತಿದೆ. ನಾನು ಪ್ರತಿನಿಧಿಸುವ ಪಕ್ಷ ಸಹ ವಿರೋಧಿಸುತ್ತಿದೆ. ಆದರೆ, ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಕ್ಷೇತ್ರದ ಜನತೆ ಮುಖ್ಯ. ಯಾವ ಪಕ್ಷದವರೇ ಆಗಲಿ ಸಮುದಾಯಗಳನ್ನು ಒಡೆದು ರಾಜಕೀಯ ಮಾಡುವುದು ಸರಿಯಲ್ಲ. ಧರ್ಮಗಳಿಗಿಂತ ಮನುಷ್ಯ ಧರ್ಮ ಎಲ್ಲಕ್ಕಿಂತ ಮುಖ್ಯವಾದುದು’ ಎಂದು ಬಿಜೆಪಿ ಶಾಸಕ ಆನಂದ್ ಸಿಂಗ್ ಟಿಪ್ಪು ಜಯಂತಿ ಉದ್ಘಾಟಿಸಿ ಹೇಳಿದರು.

ಇದೇ ವೇಳೆ ‘ರಾಜ್ಯದಲ್ಲಿ, ದೇಶದಲ್ಲಿ ಏನು ನಡೆಯುತ್ತಿದೆ ಅದು ನನಗೆ ಸಂಬಂಧಿಸಿದ್ದಲ್ಲ. ನನಗೆ ನನ್ನ ಕ್ಷೇತ್ರವೇ ಮುಖ್ಯ. ಎಲ್ಲ ಧರ್ಮೀಯರು ನನಗೆ ಬೇಕು’ ಎಂದು ಆನಂದ್ ಸಿಂಗ್ ತಿಳಿಸಿದರು.

ಚಿತ್ರದುರ್ಗ: ನಗರದ ತರಾಸು ರಂಗಮಂದಿರದಲ್ಲಿ ನಡೆಯುತ್ತಿರುವ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು.

ಟಿಪ್ಪು ಜಯಂತಿಗೆ ಚಾಲನೆ: ಬಿಗಿ ಪೊಲೀಸ್‌ ಭದ್ರತೆ
ತುಮಕೂರು: ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆಯುತ್ತಿರುವ ಟಿಪ್ಪು ಜಯಂತಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಾಲನೆ ನೀಡಿದರು. ಸಂಸದ ಮುದ್ದಹನುಮೇಗೌಡ, ಶಾಸಕ ರಫೀಕ್ ಅಹಮದ್ ಇದ್ದರು. ಅಹಿತಕರ ಘಟನೆ ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋ ಬಸ್ತ್ ಕಲ್ಪಿಸಲಾಗಿದೆ.

ಟಿಪ್ಪು ಜಯಂತಿ: ಮೈಸೂರಿನಲ್ಲಿ 16 ಸಿಸಿಟಿವಿ ಕಣ್ಗಾವಲು
ಮೈಸೂರು: ನಗರದ ಕಲಾ ಮಂದಿರದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದು, ಇಲ್ಲಿಗೆ ಬರುವ ಸಾರ್ವಜನಿಕರನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಜತೆಗೆ, ಕಲಾ ಮಂದಿರ ಆವರಣದಲ್ಲಿ 16 ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಪ್ಪು ಜಯಂತಿ ಬಹಿರಂಗ ಆಚರಣೆಗೆ ವಿರೋಧಿಸಿ ಪ್ರತಿಭಟನೆ: 10 ಜನರ ಬಂಧನ
ಕಲಬುರ್ಗಿ: ಟಿಪ್ಪು ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ಮುಂದಾದ ಹಾಗೂ 144 ನಿಷೇದಾಜ್ಞೆ ಉಲ್ಲಂಘಿಸಿದ ಆರೋಪ ಮೇಲೆ ಪಾಲಿಕೆ ಸದಸ್ಯ ಪರಶುರಾಮ ನಸಲವಾಯಿ ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.