ಕರ್ನಾಟಕ

ವಯಸ್ಸಿಗೆ ತಕ್ಕಂತೆ ನಿದ್ದೆ ಮಾಡದ್ದಿದರೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ

Pinterest LinkedIn Tumblr

ಈ ಜಗತ್ತಿನಲ್ಲಿ ಯಾವುದೇ ಜೀವಿಗಾದರೂ ನಿದ್ದೆ ಎಂಬುದು ಕಡ್ಡಾಯ. ಇಂದಿಗೂ ಶೇ.40ರಷ್ಟು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಆರೋಗ್ಯವಾಗಿರಬೇಕು ಎಂದರೆ ಸರಿಯಾದ ಸಮಯಕ್ಕೆ, ನಿಮ್ಮ ವಯಸ್ಸಿಗೆ ತಕ್ಕಂತೆ ನಿದ್ದೆ ಮಾಡುವುದು ಅಗತ್ಯ. ಸದ್ಯಕ್ಕೆ ನಿಮ್ಮ ವಯಸ್ಸಿಗೆ ಕಡ್ಡಾಯವಾಗಿ ಎಷ್ಟು ಸಮಯ ನಿದ್ದೆ ಮಾಡಿದರೆ ಒಳ್ಳೆಯದು ಎಂದು “ನ್ಯಾಶನಲ್ ಸ್ಲೀಪ್ ಫೌಂಡೇಷನ್” ತಿಳಿಸಿದೆ. ಅದೇನು ಅಂತ ಈಗ ತಿಳಿದುಕೊಳ್ಳೋಣ.

0-3 ತಿಂಗಳ ಮಕ್ಕಳು 14-17 ಗಂಟೆಗಳ ಕಾಲ ನಿದ್ರಿಸಬೇಕು.
4-11 ತಿಂಗಳ ಮಕ್ಕಳು 12-15 ಗಂಟೆಗಳ ಕಾಲ ನಿದ್ರಿಸಬೇಕು.
1-2 ವರ್ಷದ ಮಕ್ಕಳು 11-14 ಗಂಟೆಗಳ ಕಾಲ ನಿದ್ರಿಸಬೇಕು.
3-5 ವರ್ಷದ ಮಕ್ಕಳು 10-13 ಗಂಟೆಗಳ ಕಾಲ ನಿದ್ರಿಸಬೇಕು.
6-13 ವರ್ಷದ ಮಕ್ಕಳು 10-13 ಗಂಟೆಗಳ ಕಾಲ ನಿದ್ರಿಸಬೇಕು.
14-17 ವರ್ಷದ ಮಕ್ಕಳು 8-10 ಗಂಟೆಗಳ ಕಾಲ ನಿದ್ರಿಸಬೇಕು.
18-25 ವರ್ಷದವರು 7-9 ಗಂಟೆಗಳ ಕಾಲ ನಿದ್ರಿಸಬೇಕು.
26-64 ವಯಸ್ಸಿನವರು 7-9 ಗಂಟೆಗಳ ಕಾಲ ನಿದ್ರಿಸಬೇಕು.
64 ವರ್ಷ ದಾಟಿದವರು 7-8 ಗಂಟೆಗಳ ಕಾಲ ನಿದ್ರಿಸಬೇಕು.

ನಮ್ಮಲ್ಲಿ ಬಹಳಷ್ಟು ಮಂದಿ ನಿದ್ದೆಯನ್ನು ಹಗುರವಾಗಿ ಪರಿಗಣಿಸುತ್ತಾರೆ. ಒಂದು ದಿನ ನಿದ್ದೆ ಮಾಡಲಿಲ್ಲ ಎಂದರೆ ಏನಾಗುತ್ತದೆ…ಎಂಬ ನಿರ್ಲಕ್ಷ್ಯ ಧೋರಣೆ. ಕಡೆಗೆ ಇದೇ ಅಭ್ಯಾಸವಾಗುತ್ತದೆ. ಬರಬರುತ್ತಾ ಆ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ತೋರುತ್ತದೆ. ಧೂಮಪಾನ, ಮದ್ಯಪಾನದಂತಹ ದುರಭ್ಯಾಸಗಳಿಂದ ನಿಮ್ಮ ಆರೋಗ್ಯಕ್ಕೆ ಯಾವ ರೀತಿ ನಷ್ಟ ಸಂಭವಿಸುತ್ತದೋ….ನಿಮ್ಮ ದೇಹಕ್ಕೆ ಸಾಕಷ್ಟು ನಿದ್ದೆ ಕೊಡದಿದ್ದರೂ ಅಷ್ಟೇ ನಷ್ಟ ಸಂಭವಿಸುತ್ತದೆ.

ಸೂಕ್ತ ಸಮಯಕ್ಕೆ ಸಾಕಷ್ಟು ನಿದ್ದೆ ಇಲ್ಲದಿದ್ದರೆ…. ತೂಕ ಹೆಚ್ಚಾಗುವುದು, ರೋಗನಿರೋಧಕ ಶಕ್ತಿ ಕುಂದುವುದು, ಹೈಪರ್ ಟೆನ್ಷನ್, ಹೈ ಬ್ಲಡ್ ಪ್ರೆಶರ್, ಮೆಮರಿ ಲಾಸ್, ಸ್ಟ್ರೋಕ್, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು….ಹೀಗೆ ಇನ್ನೆಷ್ಟೋ ಸಮಸ್ಯೆಗಳು ಬರುತ್ತವೆ.

Comments are closed.