ಕರ್ನಾಟಕ

ಬಹಿರಂಗ ಸಭೇಲಿ ಪುರುಷತ್ವಕ್ಕೆ ಸವಾಲ್! ನಾಲಿಗೆ ಹರಿಬಿಟ್ಟ JDS ಶಾಸಕ

Pinterest LinkedIn Tumblr


ತುಮಕೂರು: ಮಾತನಾಡುವಾಗ ಮಾತಿನಲ್ಲಿ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಇನ್ನೊಬ್ಬರನ್ನು ಅವಹೇಳನಕಾರಿಯಾಗಿ ಮಾತನಾಡಬಾರದು ಎಂದು ಟೀಕಿಸುವ ಭರದಲ್ಲಿಯೇ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ನಾನು ಗಂಡಸು ಅನ್ನೋ ಡೌಟ್ ಇದೆಯಾ? ನಾನು ಗಂಡಸು ಅನ್ನೋದಕ್ಕೆ ಇಲ್ಲೇ ನನ್ನ ಮಕ್ಕಳಿವೆ. ಇನ್ನೂ ಅನುಮಾನವಿದ್ರೆ ಮನೆಗೆ ಬಂದು ತೋರಿಸ್ತೀನಿ ಎಂದು ಹೇಳುವ ಮೂಲಕ ತಮ್ಮ ನಾಲಿಗೆಯನ್ನೇ ಹರಿಬಿಟ್ಟಿದ್ದಾರೆ!!

ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತ, ಅವನ್ಯಾವನೋ ರಾಜಣ್ಣ ಅಂತೆ, ಆತ ಅಪ್ಪನಿಗೆ ಹುಟ್ಟಿದ್ರೆ ನನ್ನ ಮುಂದೆ ಬಂದು ಮಾತನಾಡಬೇಕು. ನಾನು ಗಂಡಸು ಅನ್ನೋದಕ್ಕೆ ನನಗೆ ಇಬ್ಬರು ಮಕ್ಕಳಿದ್ದಾರೆ. ಇನ್ನೂ ಅನುಮಾನವಿದ್ರೆ ಮನೆಗೆ ಬಂದು ತೋರಿಸ್ತೀನಿ ಎಂದು ಹೇಳಿದ್ದಾರೆ.

ಬಹಿರಂಗ ಸಭೆಯಲ್ಲಿ ಶಾಸಕರ ಪುರುಷತ್ವ ಪರೀಕ್ಷೆಯ ಮಾತಿಗೆ ನೆರೆದಿದ್ದ ಜನರೂ ಕೂಡಾ ಶಿಳ್ಳೆ ಹೊಡೆಯುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ.

-ಉದಯವಾಣಿ

Comments are closed.