ಕರ್ನಾಟಕ

ಮಕ್ಕಳ ಉಸಿರಾಟ ಏಕೆ ವೇಗವಾಗಿರುತ್ತದೆ? ಅಸಹಜ ಉಸಿರಾಟವಿದ್ದರೆ ಏನು ಮಾಡಬೇಕು?

Pinterest LinkedIn Tumblr

ನೀವು ಗಮನಿಸಿರಬಹುದು ನಿಮ್ಮ ಮಗು ಮಲಗಿದ್ದಾಗ ತುಂಬಾ ಮುದ್ದು, ಮುದ್ದಾಗಿ ಕಾಣುತ್ತಿರುತ್ತವೆ, ಅದನ್ನು ನೋಡಿ ಅಷ್ಟು ಮುದ್ದಾಗಿ ಕಾಣುವ ಮಗುವನ್ನು ಎಬ್ಬಿಸದೆ ಹಾಗೆ ಮುದ್ದು ಮಾಡುವುದಕ್ಕೂ ಅಥವಾ ಎಬ್ಬಿಸಿ ಆಟವಾಡುವುದಕ್ಕೂ ಹೋಗುತ್ತೀರಿ. ಆಗ ನಿಮಗೆ ನಿಮ್ಮ ಮಗು ಉಸಿರಾಡುತ್ತಿದಂತೆ ಅದರ ಎದೆಯ ಭಾಗವು ವೇಗವಾಗಿ ಏರುತ್ತಿರುವುದು ಮತ್ತು ಇಳಿಯುತ್ತಿರುವುದು ಕಾಣುತ್ತದೆ. ಅದು ಸಹಜವೇ ಆದರೂ ಅವರು ಉಸಿರಾಡುತ್ತಿರುವ ವೇಗ ಕಂಡು ಮಗುವಿಗೆ ಉಸಿರಾಟದ ಸಮಸ್ಯೆ ಏನೋ ಇರಬೇಕೆಂದು ಒಂದೆರಡು ನಿಮಿಷ ದಂಗಾಗುತ್ತೀರಿ. ಅನೇಕ ಬಾರಿ ವೈದ್ಯರು ಸಹ ಪೋಷಕರಿಗೆ ನೀಡುವ ಸಲಹೆ ಏನೆಂದರೆ ಮಕ್ಕಳು ಉಸಿರಾಡುತ್ತೀರುವ ಕ್ರಮದ ಬಗ್ಗೆ ಗಮನಹರಿಸುವುದು.

ಆಗದಾರೆ ಮಕ್ಕಳು ವೇಗವಾಗಿ ಉಸಿರಾಡುವುದಕ್ಕೆ ಕಾರಣವೇನು?
ವೇಗವಾದ ಉಸಿರಾಟ ಮತ್ತು ಮೆಲ್ಲನೆಯ ಉಸಿರಾಟ ಇವೆರಡೂ ಪುಟ್ಟ ಹಸುಗೂಸಿನಲ್ಲಿ ಕಾಣುವ ಪ್ರಮುಖ ಏರಡು ಅಂಶಗಳು. 9 ತಿಂಗಳ ಕಾಲ ತಾಯಿ ಗರ್ಭದಲ್ಲಿ ನಿದ್ರಿಸಿದ್ದ ಕಾರಣ ಹುಟ್ಟ ಮಗು ಆರಂಭದಲ್ಲಿ ತನ್ನ ಸುತ್ತುಮುತ್ತಲಿನ ಜಗತ್ತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ. ಅದರಿಂದಲೇ ಮಗುವಿನ ಉಸಿರಾಟದ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ.

ವಯಸ್ಕರಿಗಿಂತ ಶಿಶುಗಳ ಉಸಿರಾಟದ ವೇಗ ಹೆಚ್ಚಿರುತ್ತದೆ, ಅವರ ಎದೆಯ ಗುಣಿ ಭಾಗವು ಸಂಪೂರ್ಣ ಗಾಳಿಯಿಂದ ತುಂಬಿಕೊಳ್ಳುತ್ತದೆ. ಶಿಶುಗಳ ಎದೆಯಲ್ಲಿ ಗಾಳಿ ಚೀಲ ಇಲ್ಲದಿರುವ ಕಾರಣ ಉಸಿರಾಡಿದರು ಗಾಳಿಯನ್ನು ಶೇಖರಿಸಿಟ್ಟಿಕೊಳ್ಳುಲು ಸಾಧ್ಯವಿಲ್ಲ.ಅದೇ ಕಾರಣದಿಂದ ಶಿಶುಗಳ ಉಸಿರಾಟದ ವೇಗ ಹೆಚ್ಚಗಿರುತ್ತದೆ. ವಯಸ್ಸಾಗುತ್ತಾ ಹೋದಂತೆ ದೇಹವು ಬೆಳೆದು ಗಾಳಿಚೀಲವು ಪಕ್ವಗೊಳ್ಳುತ್ತದೆ ಆಗ ಉಸಿರಾಟದ ಕ್ರಿಯೆ ಸಹ ಕ್ರಮಬದ್ದವಾಗುತ್ತದೆ. ನಿಮ್ಮ ಮಕ್ಕಳು ಖುಷಿಯಿಂದ, ಸಂತೋಷದಿಂದ ನಗುನಗುತ್ತ ಇರುವವರೆಗೂ ನೀವು ಹೆದರುವ ಅವಶ್ಯಕತೆ ಇರುವುದಿಲ್ಲ.

ಮಕ್ಕಳ ರಾತ್ರಿ ಉಸಿರಾಟ ದ ಕ್ರಿಯೆಯ ಬಗ್ಗೆ ಗಮನಿಸಿ!
ಹುಟ್ಟ ಹಸುಳೆಗಳು ಪ್ರತಿ ಬಾರಿಯೂ ವೇಗವಾಗಿ ಉಸಿರಾಡುವ ಪ್ರವೃತ್ತಿಯನ್ನು ಹೊಂದಿರತ್ತವೆ. ಅದರ ಪ್ರತಿ ಉಸಿರಾಟವೂ ಆಳವಾಗುತ್ತ, ನಿಧಾನವಾಗಿ ದೀರ್ಘವಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಶಿಶುಗಳು ರಾತ್ರಿಯ ವೇಳೆ ಉಸಿರಾಡುವ ಸಂದರ್ಭದಲ್ಲಿ ಕೆಲವು ಸೆಂಕಡ್‌ಗಳ ಕಾಲ ಪುಟ್ಟ ವಿರಾಮವನ್ನು ತೆಗೆದುಕೊಳ್ಳುವುದುಂಟು!

 

ನೀವು ಇನ್ನೂ ಚಿಂತಿಸುತ್ತಿದ್ದರೆ ಈ ಕೆಳಗೆ ಹೇಳಿರುವುದನ್ನು ಮಾಡಿ
೧. ಮಗುವಿನ ಬಾಯಿ ಅಥವಾ ಮೂಗಿನ ಬಳಿ ಕಿವಿಯಿರಿಸಿ ನಿಮ್ಮ ಮಗು ಉಸಿರಾಡುವ ಕ್ರಮವನ್ನು, ವೇಗವನ್ನು ಗಮನಿಸಬಹುದು.
೨. ಮಗುವಿನ ಎದೆಯ ಏರಿಳಿತವನ್ನು ಗಮನಿಸಿ ನಿಮ್ಮ ಮಗುವಿನ ಉಸಿರಾಟ ಸರಿಯಾಗಿದೇಯೆ ಎಂದು ಪರೀಕ್ಷಿಸಬಹುದು.
೩. ಮಗುವಿನ ಪುಟ್ಟ ಉಸಿರಾಟ ವನ್ನು ಅನುಭವಿ ಬೇಕಾದರೆ ನಿಮ್ಮ ಕೆನ್ನೆಯನ್ನು ಮಗುವಿನ ಮೂಗಿನ ಬಳಿ ಇರಿಸಿ ಮಗುವಿನ ಬೆಚ್ಚಗಿನ ಉಸಿರಾಟ ವನ್ನು ಆನಂದಿಸಬಹುದು.

 

Comments are closed.