ರಾಷ್ಟ್ರೀಯ

ವಿಮಾನ ಹೈಜಾಕ್‌ ಬೆದರಿಕೆ ಪತ್ರ ದೊರೆತ ಹಿನ್ನೆಲೆ; ದಿಕ್ಕು ಬದಲಿಸಿದ ಮುಂಬೈ–ದೆಹಲಿ ಜೆಟ್‌ ಏರ್‌ವೇಸ್‌ ವಿಮಾನ

Pinterest LinkedIn Tumblr

ಅಹಮದಾಬಾದ್‌: ಮುಂಬೈನಿಂದ ದೆಹಲಿಗೆ ಹೊರಟಿದ್ದ ಜೆಟ್‌ ಏರ್‌ವೇಸ್‌ ವಿಮಾನ ಹೈಜಾಕ್‌(ಅಪಹರಿಸುವ) ಮಾಡುವ ಬೆದರಿಕೆ ಪತ್ರ ದೊರೆತ ಹಿನ್ನೆಲೆಯಲ್ಲಿ ದಿಕ್ಕು ಬದಲಿಸಿದ ವಿಮಾನ ಅಹಮದಾಬಾದ್‌ಗೆ ಹೊರಟಿತು.

122 ಪ್ರಯಾಣಿಕರು, ಏಳು ಮಂದಿ ಸಿಬ್ಬಂದಿ ಒಳಗೊಂಡ ವಿಮಾನವು ಸುರಕ್ಷಿತವಾಗಿ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ.

ಬೋಯಿಂಗ್‌ 797–900 ಜೆಟ್‌ ಏರ್‌ವೇಸ್‌ 9ಡಬ್ಲ್ಯು–339 ವಿಮಾನ ಸೋಮವಾರ ಮುಂಜಾನೆ 2:55ಕ್ಕೆ ಮುಂಬೈನಿಂದ ದೆಹಲಿಗೆ ಪ್ರಯಾಣ ಆರಂಭಿಸಿದೆ. ಶೌಚಗೃಹದಲ್ಲಿ ಹೈಜಾಕ್‌ ಮಾಡುವ ಬೆದರಿಕೆ ಪತ್ರ ದೊರೆತಿದ್ದು, ಈ ಕುರಿತು ವಿಮಾನದ ಪೈಲಟ್‌ ಅಹಮದಾಬಾದ್‌ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಭದ್ರತಾ ತುರ್ತು ಕಾರಣ 3:45ಕ್ಕೆ ಅಹಮದಾಬಾದ್‌ನಲ್ಲಿ ವಿಮಾನ ಇಳಿಸಲಾಗಿದೆ.

‘ವಿಮಾನದಲ್ಲಿ 12 ಮಂದಿ ಹೈಜಾಕರ್‌ಗಳಿದ್ದು ದೆಹಲಿಯಲ್ಲಿ ಇಳಿಸದೆ ನೇರವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗಬೇಕು. ಕಾರ್ಗೊದಲ್ಲಿ ಬಾಂಬ್‌ ಅಡಗಿಸಿದ್ದು, ಸಿಡಿಸಲಾಗುತ್ತದೆ’ ಎಂದು ಬೆದರಿಕೆ ಪತ್ರದಲ್ಲಿದೆ.

Comments are closed.