ಕರ್ನಾಟಕ

ವಿಧಾನಸೌಧ ವಜ್ರಮಹೋತ್ಸವ:ಸಾಧಕರ ಪಟ್ಟಿಯಲ್ಲಿ ಟಿಪ್ಪು ಹೆಸರು!!

Pinterest LinkedIn Tumblr


ಬೆಂಗಳೂರು : ವಿಧಾನಸೌಧ ವಜ್ರ ಮಹೋತ್ಸವ ಅಂಗವಾಗಿ ಬುಧವಾರ ರಾಜ್ಯ ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನ ನಡೆಯುತ್ತಿದ್ದು,ರಾಷ್ಟ್ರಪತಿ ರಾಮಾನಾಥ್‌ ಕೋವಿಂದ್‌ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.

‘ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರ್ನಾಟಕದ ಪಾಲಿಗೆ ಇದೊಂದು ಅವಿಸ್ಮರಣೀಯ ದಿನ’ ಎಂದ ರಾಷ್ಟ್ರಪತಿ ಕೋವಿಂದ್‌ ಕರ್ನಾಟಕ್ಕೆ ಕೊಡುಗೆ ನೀಡಿದ ಸ್ಮರಣಿಯರ ಕೊಡುಗೆಗಳನ್ನು ನೆನಪಿಸಿದರು.

‘ರಾಷ್ಟ್ರಪತಿಯಾಗಿ 3 ತಿಂಗಳ ಹಿಂದೆ ನಾನು ಅಧಿಕಾರ ಸ್ವೀಕರಿಸಿದ್ದೇನೆ. ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದೇನೆ’ ಎಂದರು.

‘ಕರ್ನಾಟಕ ಕಲೆ ಸಂಸ್ಕೃತಿಯ ಬೀಡು. ಶಿಕ್ಷಣ, ತಂತ್ರಜ್ಞಾನದಲ್ಲಿ ಕ್ರಾಂತಿ ನಿರ್ಮಿಸಿದ ಹಲವರು ಇಲ್ಲಿಯವರು. ಸರ್‌ ಎಂ.ವಿಶ್ವೇಶ್ವರಯ್ಯ ಅವರು ನವ ಕರ್ನಾಟಕದ ನಿರ್ಮಾತೃರು’ ಎಂದರು.

ದೇವೇಗೌಡರ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ
ಮುಖ್ಯಮಂತ್ರಿಗಳ ಹೆಸರುಗಳನ್ನು ಹೇಳುವ ವೇಳೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಹೆಸರು ಲಿಖಿತ ಭಾಷಣದಲ್ಲಿ ಬಿಟ್ಟು ಹೋಗಿತ್ತು. ಕೂಡಲೇ ರಾಷ್ಟ್ರಪತಿಗಳೇ ದೇವೇಗೌಡರ ಹೆಸರು ಪ್ರಸ್ತಾವಿಸಿ ‘ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ಅವರು ನನಗೆ ಆತ್ಮೀಯ ಮಿತೃ.ನಾನಿಲ್ಲಿ ಕೆಲವರ ಹೆಸರುಗಳನ್ನು ಮಾತ್ರ ಹೇಳುತ್ತಿದ್ದೇನೆ’ ಎಂದು ನಗುತ್ತಲೇ ಉತ್ತರಿಸಿದರು..

‘ಕರ್ನಾಟಕ್ಕೆ ಮತ್ತು ದೇಶಕ್ಕೆ ಉತ್ತಮ ಭವಿಷ್ಯಕ್ಕಾಗಿ ಆಶೀಸುತ್ತೇನೆ’ ಎಂದು ಭಾಷಣ ಮುಗಿಸಿದರು.

ರಾಕೆಟ್‌ ತಂತೃಜ್ಞಾನದ ಜನಕನಾಗಿದ್ದ ಟಿಪ್ಪು ಸುಲ್ತಾನ್‌

ನಾಡು ನುಡಿಗೆ ಕೊಡುಗೆ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ಸ್ವಾತಂತ್ರ್ಯ ಸೇನಾನಿಗಳ ಹೆಸರುಗಳನ್ನು ಸ್ಮರಿಸುವ ವೇಳೆ ಟಿಪ್ಪು ಸುಲ್ತಾನ್‌ ಹೆಸರನ್ನು ಉಲ್ಲೇಖಿಸಿದರು.’ಸ್ವಾತಂತ್ರ್ಯ ಸೇನಾನಿಯಾಗಿದ್ದ ಟಿಪ್ಪು ಸುಲ್ತಾನ್‌ ಮೈಸೂರಿನಲ್ಲಿ ರಾಕೆಟ್‌ ತಂತ್ರಜ್ಞಾನದ ಜನಕನಾಗಿದ್ದ. ಆ ತಂತ್ರಜ್ಞಾನಗಳನ್ನು ಯುರೋಪ್‌ ದೇಶಗಳೂ ಅಳವಡಿಸಿಕೊಂಡಿದ್ದವು’ ಎಂದು ಬಣ್ಣಿಸಿದರು.

ಟಿಪ್ಪು ಜಯಂತಿ ವಿಚಾರವಾಗಿ ತೀವ್ರ ವಿರೋಧ ವ್ಯಕ್ತ ಪಡಿಸುವಾಗಲೇ ಈ ವಿದ್ಯಮಾನ ನಡೆದದ್ದು ಬಿಜೆಪಿ ನಾಯಕರಿಗೆ ತೀವ್ರ ಇರಿಸು ಮುರಿಸು ತಂದಿಟ್ಟಿತು. ಟಿಪ್ಪು ಹೆಸರು ರಾಷ್ಟ್ರಪತಿಗಳು ಹೇಳುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಜೋರಾಗಿ ಮೇಜು ತಟ್ಟಿ ಸಂಭ್ರಮಿಸಿದರು.

-ಉದಯವಾಣಿ

Comments are closed.