ರಾಷ್ಟ್ರೀಯ

ಬ್ಯಾಂಕ್‌ ಮರು ಬಂಡವಳೀಕರಣ ಐತಿಹಾಸಿಕ ನಿರ್ಧಾರ: ಅಮಿತ್‌ ಶಾ

Pinterest LinkedIn Tumblr


ಹೊಸದಿಲ್ಲಿ : ಬ್ಯಾಂಕ್‌ ಮರು ಬಂಡವಳೀಕರಣಕ್ಕೆ 2.11 ಲಕ್ಷ ಕೋಟಿ ರೂ.ಗಳನ್ನು ಒದಗಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶಂಸಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು, “ಸರಕಾರದ ಈ ಅಭೂತಪೂರ್ವ ಮತ್ತು ಕ್ರಾಂತಿಕಾರಕ ಆರ್ಥಿಕ ಕ್ರಮದಿಂದ ದೇಶದಲ್ಲಿನ ಉದ್ದಿಮೆಗಳಿಗೆ ತುಂಬಾ ಪ್ರಯೋಜನವಾಗುವುದಲ್ಲದೆ ಯುವಕರಿಗೆ ಪರ್ಯಾಪ್ತ ಉದ್ಯೋಗಾವಕಾಶಗಳು ಲಭಿಸುತ್ತವೆ’ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ದೇಶದಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗಾಗಿ 6.92 ಲಕ್ಷ ಕೋಟಿ ರೂ. ವಿನಿಯೋಗಿಸಲು ಕೈಗೊಂಡಿರುವ ನಿರ್ಧಾರವನ್ನು ಕೂಡ ಸ್ವಾಗತಿಸಿದ್ದಾರೆ.

ಬ್ಯಾಂಕ್‌ ಮರು ಬಂಡವಳೀಕರಣ ನಿರ್ಧಾರವು ಕೇಂದ್ರ ಸರಕಾರದ ಐತಿಹಾಸಿಕ ಕ್ರಮ ಎಂದು ಹೇಳಿದ ಅಮಿತ್‌ ಶಾ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರನ್ನು ಅಭಿನಂದಿಸಿದ್ದಾರೆ.

“ಈ ರೀತಿಯ ದಿಟ್ಟ ಹಾಗೂ ಧೀರತನದ ನಿರ್ಧಾರಗಳು ದೇಶದ ಉದ್ಯಮಗಳಿಗೆ ಉತ್ತೇಜನವನ್ನು ನೀಡುವುದಲ್ಲಕ್ಕೆ ಯುವಕರಿಗೆ ಅಪಾರ ಪ್ರಮಾಣದ ಉದ್ಯೋಗಗಳನ್ನು ಒದಗಿಸುತ್ತವೆ’ ಎಂದು ಶಾ ಟ್ವೀಟ್‌ ಮಾಡಿದ್ದಾರೆ.

-ಉದಯವಾಣಿ

Comments are closed.