ಕರ್ನಾಟಕ

ನರಹಂತಕ ವೀರಪ್ಪನ್ ಶರಣಾಗಲು ಬಯಸಿದ್ದ: ಮಾಜಿ ಡಕಾಯಿತ ಪಂಚಮ್ ಸಿಂಗ್

Pinterest LinkedIn Tumblr

ಮೈಸೂರು: ಕಾಡುಗಳ್ಳ ವೀರಪ್ಪನ್ ಕೆಲ ಷರತ್ತುಗಳ ಮೇಲೆ ಪೊಲೀಸರಿಗೆ ಶರಣಾಗಲು ಬಯಸಿದ್ದ ಎಂದು ಚಂಬಲ್ ಕಣಿವೆ ಮಾಜಿ ಡಕಾಯಿತ ಪಂಚಮ್ ಸಿಂಗ್ ಹೇಳಿದ್ದಾನೆ.

ಮಂಗಳವಾರ ಮಾತನಾಡಿದ ಆತ, ಒಬ್ಬ ರಾಜಕಾರಣಿಯ ಮನೆಯಲ್ಲಿ ನಾನು ವೀರಪ್ಪನ್ ನನ್ನು ಭೇಟಿ ಮಾಡಿದ್ದೆ, ಚಂಬಲ್ ಕಣಿವೆ ಡಕಾಯಿತರಿಗೆ ನೀಡಿದ ಎಲ್ಲಾ ಸವಲತ್ತುಗಳನ್ನು ನನಗೆ ಮತ್ತು ನನ್ನ ಸಹಚರರಿಗೆ ಸರ್ಕಾರ ನೀಡಿದರೇ ನಾನು ಶರಣಾಗುವ ಆಶಯ ವ್ಯಕ್ತ ಪಡಿಸಿದ್ದ ಎಂದು ತಿಳಿಸಿದ್ದಾರೆ. ಆದರೆ ಯಾವ ರಾಜಕಾರಣಿಯ ಮನೆಯಲ್ಲಿ ಆತನನ್ನು ಭೇಟಿಯಾಗಿದ್ದೆ ಎಂಬ ವಿಷಯವನ್ನು ಮಾತ್ರ ಹೇಳಲಿಲ್ಲ,

ವೀರಪ್ಪನ್ ಜೊತೆ ನಡೆದ ಮಾತುಕತೆಯನ್ನು ನಾನು ಸರ್ಕಾರಕ್ಕೆ ತಿಳಿಸಿದೆ, ಆದರೆ ಸರ್ಕಾರದ ವತಿಯಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ಪಂಚಮ ಸಿಂಗ್ ಹೇಳಿದ್ದಾನೆ.

100 ಮಂದಿಯನ್ನು ಕೊಂದಿದ್ದ ಪಂಚಮ್ ಸಿಂಗ್ ಸದ್ಯ ಬ್ರಹ್ಮ ಕುಮಾರಿ ಸಮಾಜದ ಮಾನವೀಯತೆ ಮತ್ತು ಅಹಿಂಸಾ ಮಿಷನ್ ನ ಬೋಧಕನಾಗಿದ್ದಾನೆ. ಗನ್ ಹಿಡಿದಿದ್ದಾಗ ಅದರಿಂದಾದ ಕ್ರೌರ್ಯ ಮತ್ತು ತಾನು ಮಾಡಿದ ಹಲವು ಕ್ರೂರತನಗಳ ಬಗ್ಗೆ ಹಂಚಿಕೊಂಡಿದ್ದಾನೆ.

ಜೈಲಿನಿಂದ ಬಂದ ಮೇಲೆ ತಾನು ಬದಲಾಗಿದ್ದು, ಮಾನವೀಯತೆ ಮೂಲಕ ದೇವರನ್ನು ಕಾಣುತ್ತಿರುವುದಾಗಿ ಹೇಳಿದ್ದಾನೆ. ತನ್ನಲ್ಲಿರುವ ದ್ವೇಷ, ಅಹಂಕಾರ ಎಲ್ಲವೂ ನಶಿಸಿಹೋಗಿದೆ ಎಂದು ಹೇಳಿರುವ ಆತ, ಜೈಲಿನಲ್ಲಿ ಸುಧಾರಣೆಯಾಗಲು ಹೆಚ್ಚಿನ ಅವಕಾಶ ವಿಲ್ಲ ಎಂದು ಹೇಳಿದ್ದಾನೆ.

ಅತ್ಯಾಚಾರ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಸೇರಿರುವ ಬಾಬಾ ರಾಮ್ ರಹೀಮ್ ತನ್ನ ಹಣದಿಂದ ಕಾರಾಗೃಹದಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ ಎಂದು ಪಂಚಮ್ ಸಿಂಗ್ ಆರೋಪಿಸಿದ್ದಾನೆ.

556 ಸದಸ್ಯರ ಗ್ಯಾಂಗ್ ನ ಮುಖಂಡನಾಗಿದ್ದ ಪಂಚಮ್ ಸಿಂಗ್, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶದ 25 ಜಿಲ್ಲೆಗಳಲ್ಲಿ ಡಕಾಯಿತಿ ನಡೆಸಿದ್ದರ ಬಗ್ಗೆ ತನಗೆ ಯಾವುದೇ ಪಶ್ಚತ್ತಾಪವಿಲ್ಲ ಎಂದು ಹೇಳಿದ್ದಾನೆ.

ಇದ್ದವರ ಬಳಿಯಿದ್ದದ್ದನ್ನು ಲೂಟಿ ಮಾಡಿ ನಾನು ಇಲ್ಲದವರಿಗೆ ಹಂಚುತ್ತಿದ್ದೆ. ಮಹಿಳೆಯರಿಗೆ ರಕ್ಷಣೆ ಮತ್ತು ಮಕ್ಕಳಿಗೆ ಶಾಲೆ ಸ್ಥಾಪಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಜಯಪ್ರಕಾಶ್ ನಾರಾಯಣ ಮೂಲಕ ಶರಣಾದ ನಾನು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ತನ್ನ ಕೃತ್ಯಕ್ಕಾಗಿ ಕ್ಷಮಾಪಣೆ ಕೇಳಿದೆ ಎಂದು ಹೇಳಿದ್ದಾನೆ.

ನನಗೆ 14 ವರ್ಷವಿದ್ದಾಗ, ಹೊಸದಾಗಿ ವಿವಾಹವಾಗಿದ್ದ ನನ್ನ ಪತ್ನಿ ಮತ್ತು ನನ್ನ ಪೋಷಕರ ಜೊತೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ವಾಸವಿದ್ದೆ, ಈ ವೇಳೆ ನಡೆದ ಗ್ರಾಮಪಂಚಾಯಿತಿ ಚುನಾವಣೆ ವೇಳೆ ವಿರೋಧಿ ಗುಂಪು ನನ್ನನ್ನು ಥಳಿಸಿತು, ನನ್ನ ಪೋಷಕರ ಮನವಿಯ ನಡುವೆಯೂ ಅವರು ನನ್ನನ್ನು ಥಳಿಸಿದರು. ಇದರಿಂದ ಕೆರಳಿದ ನಾನು 12 ಮಂದಿಯ ತಂಡದೊಂದಿಗೆ ತೆರಳಿ, ಆರು ಮಂದಿಯನ್ನು ಕೊಂದು ಪ್ರತೀಕಾರ ತೀರಿಸಿಕೊಂಡೆವು. ನಾನು ಜೈಲಿನಿಂದ ಹೊರಬಂದ ನಂತರ ಸಮಾಜ ವಾದಿ ಪಕ್ಷ ತನಗೆ ಟಿಕೆಟ್ ನೀಡುವುದಾಗಿ ಆಫರ್ ನೀಡಿತು, ಆಈದರೆ ರಾಜಕೀಯ ಸೇರುವುದನ್ನು ನಾನು ತಿರಸ್ಕರಿಸಿದೆ ಎಂದು ಹೇಳಿದ್ದಾನೆ.

Comments are closed.