ಕರ್ನಾಟಕ

ಹುಡುಗಿ/ಹುಡುಗರನ್ನು ಹೆಚ್ಚು ಕಾಡುವ ಬ್ಲಾಕ್ ಹೆಡ್ಸ್ ಸಮಸ್ಯೆಗೆ ಸುಲಭ ಪರಿಹಾರ

Pinterest LinkedIn Tumblr

ಬ್ಲ್ಯಾಕ್ ಹೆಡ್ಸ್ ಅಂದರೆ ನಿಮ್ಮ ತ್ವಚೆಯಿಂದ ಹೆಚ್ಚುವರಿ ಎಣ್ಣೆ ಅಥವಾ ಸತ್ತ ತ್ವಚೆಯ ಕೋಶಗಳು ಅಥವಾ ಇನ್ನಯಾವುದೇ ವಸ್ತು ಹೊರಬರದೇ ಸಿಲುಕಿಕೊಂಡಾಗ ಆದಾಗ ಆಗುವ ಗಂಟುಗಳೇ ಈ ಬ್ಲಾಕ್ ಹೆಡ್ಸ್. ಇವು ಸಹಜವಾಗಿ ಮುಖದ ಮೇಲೆ ಕಾಣಿಸಿಕೊಳ್ಳುವ ಚಿಕ್ಕ ಚಿಕ್ಕ ಮೊಡವೆಗಳ ರೀತಿಯ ಅಂಶಗಳು. ಇವುಗಳು ಕೇವಲ ಮುಖದ ಮೇಲೆ ಅಷ್ಟೇ ಅಲ್ಲದೆ, ಬೆನ್ನು, ಕುತ್ತಿಗೆ, ಎದೆ, ಕೈ ಮತ್ತು ಭುಜಗಳ ಮೇಲೆಯೂ ಕಾಣಿಸಿಕೊಳ್ಳಬಹುದು. ಇವುಗಳು ಪ್ರಮುಖವಾಗಿ ಹರೆಯದ ಹುಡುಗಿಯರಲ್ಲಿ ಮತ್ತು ಇನ್ನೂ ಹರೆಯಕ್ಕೆ ಕಾಲಿಡಬೇಕಾದ ಹುಡುಗಿಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ.

ಈ ಬ್ಲಾಕ್ ಹೆಡ್ಸ್ ಅನ್ನು ತೆಗೆದು ಹಾಕಲಿಕ್ಕೆ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನ ಬಳಸಬಹದು. ಅವುಗಳು ಯಾವು ಮತ್ತು ಹೇಗೆ ಎಂಬುದು ನಾವು ಹೇಳುತ್ತೇವೆ ಓದಿ :

೧. ಅಡುಗೆ ಸೋಡಾ
ಅಡುಗೆ ಸೋಡಾ ಕೇವಲ ನಿಮ್ಮ ತ್ವಚೆಯಲ್ಲಿನ ಸತ್ತ ಕೋಶಗಳನ್ನ ಹೊರಹಾಕುವುದಷ್ಟೇ ಅಲ್ಲದೆ, ನಿಮ್ಮ ಮುಖದ pH ಅನ್ನೂ ನಿಯಂತ್ರಿಸಿ ಮುಖದ ಮೇಲಿನ ಚರ್ಮವು ಕಡಿಮೆ ಎಣ್ಣೆಯನ್ನು ಉತ್ಪತ್ತಿ ಮಾಡುವಂತೆ ಮಾಡುತ್ತದೆ. ನೀವು ಇದನ್ನು ದಿನ ಬಳಸುವುದರಿಂದ ನಿಮ್ಮ ಮುಖದ ಮೇಲಿನ ಎಣ್ಣೆ ಕಡಿಮೆ ಆಗುತ್ತದೆ ಹಾಗು ಇದರಿಂದ ಕಾಲಕ್ರಮೇಣ ಬ್ಲಾಕ್ ಹೆಡ್ಸ್ ಆಗುವುದು ನಿಲ್ಲುತ್ತವೆ.

ನೀವು ಮಾಡಬೇಕಾಗಿರುವುದು :
ಒಂದು ಬಟ್ಟಲಿನಲ್ಲಿ ಒಂದು ಚಮಚ ಅಡುಗೆ ಸೋಡಾ ಹಾಕಿ ಮತ್ತು ಅದರೊಂದಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ನಂತರ ಅದನ್ನು ನಿಮ್ಮ ಬ್ಲಾಕ್ ಹೆಡ್ಸ್ ಮೇಲೆ ಹಚ್ಚಿ ಹಾಗು 10 ನಿಮಿಷಗಳ ಕಾಲ ಬಿಡಿ. ಅನಂತರ, ಬೆಚ್ಚಗಿನ ನೀರಿನಿಂದ ಮುಖವನ್ನ ತೊಳೆಯಿರಿ. ಇದನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾಡಿರಿ.

೨. ಚಕ್ಕೆ
ಇದರಲ್ಲಿ ಬ್ಯಾಕ್ಟೀರಿಯಾ ತೊಲಗಿಸುವ ಗುಣಗಳಿದ್ದು, ಇದನ್ನು ಒಂದು ಸುಗಂಧಭರಿತ ಫೇಸ್ ಮಾಸ್ಕ್ ಆಗಿ ನಿಮ್ಮ ಬ್ಲಾಕ್ ಹೆಡ್ಸ್ ಅನ್ನು ತೆಗೆಯಲಿಕ್ಕೆ ಉಪಾಯಾಗಿಸಬಹುದು. ಅಲ್ಲದೆ, ಇದು ಒಡೆದ, ಸುಲಿದ ಚರ್ಮವನ್ನ ಹೊರಹಾಕುತ್ತದೆ ಮತ್ತು ಮೊಡವೆಗಳನ್ನೂ ನಿಲ್ಲಿಸುತ್ತದೆ.

ನೀವು ಮಾಡಬೇಕಿರುವುದು :
ಒಂದು ಚಮಚದಷ್ಟು ಚಕ್ಕೆ ಪುಡಿ ಜೊತೆಗೆ ಎರೆಡು ಚಮಚ ಜೇನುತುಪ್ಪ ಬೆರೆಸಿ ಪೇಸ್ಟ್ ಅನ್ನು ತಯಾರು ಮಾಡಿ. ಇದನ್ನು ತಿಳಿಯಾಗಿ ನಿಮ್ಮ ಬ್ಲಾಕ್ ಹೆಡ್ಸ್ ಮೇಲೆ ಹಚ್ಚಿಕೊಳ್ಳಿ ಮತ್ತು 15 ನಿಮಿಷಗಳು ಹಾಗೆಯೇ ಬಿಡಿ. ನಂತರ ನೀರಿನಲ್ಲಿ ಮುಖ ತೊಳೆಯಿರಿ. ತೊಳೆದ ಮೇಲೆ, ಯಾವುದಾದರೂ ತ್ವಚೆಯ ಆರ್ದ್ರಕಾರಿ (moisturizing cream) ಇಂದ ಮುಖವನ್ನ ತೊಳೆಯಿರಿ. ಹೀಗೆ ಪ್ರತಿದಿನ ಮಾಯ್ದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

೩. ನಿಂಬೆ ರಸ
ನಿಂಬೆ ರಸದಲ್ಲಿ ಅಲ್ಫಾ-ಹೈಡ್ರಾಕ್ಸಿ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ ಇದ್ದು, ಇವುಗಳು ನೈಸರ್ಗಿಕವಾಗಿ ತ್ವಚೆಯ ಸತ್ತ ಕೋಶಗಳನ್ನ ಹೊರಹಾಕಲು ಉಪಕಾರಿ. ಹೀಗಾಗಿ ಅವುಗಳು ಸಿಲುಕಿಕೊಂಡು ಬ್ಲಾಕ್ ಹೆಡ್ಸ್ ಹುಟ್ಟಿಕೊಳ್ಳುವ ಪ್ರಮೇಯವೇಇರುವುದಿಲ್ಲ. ಅಷ್ಟೇ ಅಲ್ಲ, ನಿಂಬೆ ರಸವು ಕಾಲಜನ್ ಉತ್ಪತ್ತಿಗೆ ಉತ್ತೇಜನ ನೀಡಿ, ತ್ವಚೆಯು ಆರೋಗ್ಯಕರವಾಗಿ ಇರುವಂತೆ ಮಾಡುತ್ತದೆ.

ನೀವು ಮಾಡಬೇಕಿರುವುದು :
ಮೊದಲು ನೀವು ಬಳಸುವ ಫೇಸ್ ಜೆಲ್ ಅಥವಾ ಸೋಪ್ ಇಂದ ನಿಮ್ಮ ಮುಖವನ್ನ ತೊಳೆಯಿರಿ. ಒಂದು ಲೋಟದ್ದಲ್ಲಿ ಅಥವಾ ಬಟ್ಟಲಿನಲ್ಲಿ ಒಂದು ಚಮಚದಷ್ಟು ನಿಂಬೆ ರಸ ಹಿಂಡಿಕೊಳ್ಳಿ. ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು, ಅದನ್ನು ನಿಂಬೆ ರಸದಲ್ಲಿ ಅದ್ದು, ಬ್ಲಾಕ್ ಹೆಡ್ಸ್ ಇರುವ ಜಾಗಗಳ ಮೇಲೆ ಒತ್ತಿಕೊಳ್ಳಿ. ನಂತರ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನೀರಿನಿಂದ ತೊಳೆಯಿರಿ. ನೀವು ಇದನ್ನು ರಾತ್ರಿ ಹಚ್ಚಿ ಬೆಳಗ್ಗೆ ಬೇಕಾದರೂ ತೊಳೆಯಬಹುದು. ಇದನ್ನು ದಿನಕ್ಕೆ ಒಮ್ಮೆ ಮಾಡಬೇಕು.

೪. ಜೇನುತುಪ್ಪ
ಜೇನುತುಪ್ಪ ಬ್ಯಾಕ್ಟೀರಿಯಾ ವಿನಾಶಕವೂ ಹೌದು, ನಂಜುನಿರೋಧಕ (ಆಂಟಿಸೆಪ್ಟಿಕ್) ಕೂಡ ಹೌದು. ಇದು ಮುಖದಲ್ಲಿನ ಕೀಟಾಣುಗಳನ್ನ ಮತ್ತು ಬೇಡದಿರುವ ತ್ಯಾಜ್ಯ ವಸ್ತುಗಳನ್ನ ಹೊರಹಾಕುವುದರಿಂದ ಬ್ಲಾಕ್ ಹೆಡ್ಸ್ ಅನ್ನು ತಡೆಯಲು ಇದು ತುಂಬಾನೇ ಉಪಕಾರಿ.

ನೀವು ಮಾಡಬೇಕಿರುವುದು :
ಒಂದು ಚಮಚದಷ್ಟು ಶುದ್ಧ ಜೇನುತುಪ್ಪವನ್ನು ಮುಟ್ಟಲಿಕೆ ಬಿಸಿ ಆಗುವಷ್ಟು ತನಕ ಬಿಸಿ ಮಾಡಿ. ಇದನ್ನು ನೀವು ಜೇನುತುಪ್ಪದ ಬಟ್ಟಲನ್ನು ಬಿಸಿನೀರಿನ ತಟ್ಟೆಯಲ್ಲಿ ಇಟ್ಟಿ ಕೂಡ ಬಿಸಿ ಮಾಡಿಕೊಳ್ಳಬಹುದು. ಈ ಬೆಚ್ಚಗಿನ ಜೇನುತುಪ್ಪವನ್ನ ನಿಮ್ಮ ಬ್ಲಾಕ್ ಹೆಡ್ಸ್ ಮೇಲೆ ಒತ್ತಿಕೊಳ್ಳಿ ಹಾಗು ಅದನ್ನ ತ್ವಚೆ ಹೀರಿಕೊಳ್ಳಲು 10 ನಿಮಿಷಗಳ ಕಾಲ ಹಾಗೆಯೆ ಬಿಡಿ. ನಂತರ ಬಿಸಿ ನೀರಿನಿಂದ ವದ್ದೆ ಮಾಡಿದ ಬಟ್ಟೆಯಿಂದ ಅದನ್ನು ಒರೆಸಿಕೊಳ್ಳಿ. ನೀವು ಹೀಗೆ ರಾತ್ರಿ ಹಚ್ಚಿಕೊಂಡು ಬೆಳೆಗ್ಗೆ ಅಷ್ಟೊತ್ತಿಗೆ ತೆಗೆಯಬಹುದು ಕೂಡ. ಇದನ್ನು ಪ್ರತಿದಿನ ಮಾಡಿ.

೫. ಅರಿಶಿಣ
ಅರಿಶಿಣ ಒಂದು ಅದ್ಭುತವಾದ ವೈದ್ಯಕೀಯ ಗುಣಗಳಿರುವ ಮಸಾಲೆ ಪದಾರ್ಥ. ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಕ ಮತ್ತು ಉರಿತ ಶಮನ ಮಾಡುವ ಗುಣಗಳನ್ನ ಹೊಂದಿರುತ್ತದೆ. ನೀವು ಅಡುಗೆ ಅರಿಶಿಣ ಹಚ್ಚಿದರೆ, ನಿಮ್ಮ ಮುಖದ ಮೇಲೆ ಹಳದಿ ಬಣ್ಣ ಆಗಬಹುದು. ಹೀಗಾಗಿ ನೀವು ಅಡುಗೆಗೆ ಬಳಸದ ಇನ್ನೊಂದು ರೀತಿಯ ಅರಿಶಿಣ ಆದ “ಕಸ್ತೂರಿ ಅರಿಶಿಣ” ಬಳಸಿದರೆ, ಉಪಯೋಗವೂ ಆಗುತ್ತದೆ ಮತ್ತು ಕಲೆಯು ಕೂಡ ಆಗುವುದಿಲ್ಲ. ಒಂದು ವೇಳೆ ಇದು ಸಿಗದಿದ್ದರೆ ತೊದರೆ ಏನಿಲ್ಲ. ಮನೆಯಲ್ಲೇ ಸಿಗುವ ಅರಿಶಿಣವನ್ನೇ ಬಳಸಬಹುದು.

ನೀವು ಮಾಡಬೇಕಿರುವುದು :
ನೀರು ಅಥವಾ ಎಳನೀರು ಜೊತೆಗೆ ಸ್ವಲ್ಪ ಪ್ರಮಾಣದ ಕಸ್ತೂರಿ ಅರಿಶಿಣ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಬ್ಲಾಕ್ ಹೆಡ್ಸ್ ಮೇಲೆ ಹಚ್ಚಿ. ಹೀರಿಕೊಳ್ಳಲು 10-15 ನಿಮಿಷಗಳು ಹಾಗೆಯೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.

Comments are closed.