ಕರ್ನಾಟಕ

ಪಟಾಕಿ ಅವಘಡ : ಬೆಂಗಳೂರಿನಲ್ಲಿ 11 ಮಂದಿ ಆಸ್ಪತ್ರೆಗೆ ದಾಖಲು; ಯಾರೋ ಬಿಟ್ಟ ರಾಕೆಟ್‌ ಕಣ್ಣೇ ತೆಗೆಯಿತು!!

Pinterest LinkedIn Tumblr


ಬೆಂಗಳೂರು: ನಗರದ ವಿವಿಧೆಡೆ ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು , ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ 8 ಮಂದಿ ದಾಖಲಾಗಿದ್ದು 6 ಮಕ್ಕಳು ಮತ್ತು ಇಬ್ಬರು ಯುವಕರು ಆ ಪೈಕಿ ಸೇರಿದ್ದಾರೆ.

ಮಿಂಟೋ ಆಸ್ಪತ್ರೆಗೆ 3 ಜನ ಮಕ್ಕಳು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನವರಿಗೆ ಕಣ್ಣೀಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಆಡುಗೋಡಿ ಯಲ್ಲಿ ಶಾರುಖ್‌ ಎಂಬ ಯುವಕ ಯಾರೋ ಹಚ್ಚಿದ ರಾಕೆಟ್‌ ತಗುಲಿ ಎಡಗಣ್ಣನ್ನೇ ಕಳೆದುಕೊಂಡಿದ್ದಾನೆ.

-ಉದಯವಾಣಿ

Comments are closed.