ಕರ್ನಾಟಕ

ಕರಕುಶಲ ವಸ್ತುಗಳ ಮೇಲೆ ತೆರಿಗೆ ವಿರೋಧಿಸಿ ರಂಗಕರ್ಮಿ ಪ್ರಸನ್ನ ಪ್ರತಿಭಟನೆಗೆ ಸಾಥ್ ನೀಡಿದ ನಟ ಪ್ರಕಾಶ್ ರೈ

Pinterest LinkedIn Tumblr

ಬೆಂಗಳೂರು: ಹಿರಿಯ ರಂಗಕರ್ಮಿ ಪ್ರಸನ್ನ ಅವರು ಕರಕುಶಲ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಮಾಡುತ್ತಿರುವ ಪ್ರತಿಭಟನೆಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಕೈಜೋಡಿಸಿದ್ದಾರೆ.

ಪ್ರಸನ್ನ ಅವರು ಕಳೆದ 5 ದಿನಗಳಿಂದ ಈ ಕುರಿತು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ಅದಕ್ಕೆ ಪ್ರಕಾಶ್ ರೈ ಸಾಥ್ ನೀಡಿದ್ದಾರೆ. ಕರಕುಶಲ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸಿದರೆ ಅದು ಗ್ರಾಮೀಣ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಸನ್ನ ಹೇಳುತ್ತಾರೆ.

ಪ್ರತಿಭಟನೆ ನಡೆಸುತ್ತಿರುವ ವೇದಿಕೆ ಬಳಿ ಖಾಸಗಿ ಚಾನೆಲ್ ವೊಂದಕ್ಕೆ ಮಾತನಾಡಿದ ಪ್ರಕಾಶ್ ರೈ, ಬುಡಕಟ್ಟು ಜನಾಂಗದವರು, ಬಡವರು, ಅರಣ್ಯದಲ್ಲಿ ಬದುಕುವವರು ತಯಾರಿಸಿದ ವಸ್ತುಗಳಿಗೆ ಸರಕು ಮತ್ತು ಸೇವಾ ತೆರಿಗೆ ವಿಧಿಸುವುದು ನ್ಯಾಯವಲ್ಲ. ಜಿಎಸ್ ಟಿ ಬಹು ರಾಷ್ಟ್ರೀಯ ಕಂಪೆನಿಗಳಿಗೆ ಸಮವಾಗಿದೆ. ಇದರಿಂದ ಅವರ ಮೇಲೆ ಆರ್ಥಿಕ ಹೊರೆ ಹೊರಿಸಿದಂತಾಗುತ್ತದೆಯಲ್ಲದೆ ಸಾಮಾಜಿಕ ಚೌಕಟ್ಟಿಗೆ ಭಂಗ ತಂದಾಗುತ್ತದೆ ಎಂದರು.

ಕರಕುಶಲ ವಸ್ತುಗಳಿಗೆ ತೆರಿಗೆ ವಿಧಿಸುವ ಮೂಲಕ ಸರ್ಕಾರ ಅವರ ನೈತಿಕತೆಯನ್ನು ಮುರಿದು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದೀರಿ. ಮೇಕ್ ಇನ್ ಇಂಡಿಯಾ ಮತ್ತು ಉದ್ಯೋಗ ಸೃಷ್ಟಿ ಮಾಡಿಕೊಡುವುದಾಗಿ ಹೇಳಿದ ಸರ್ಕಾರ ಮಾಡಿರುವ ನಿರ್ಧಾರವಿದು ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದರು.

Comments are closed.