ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಿಸಿಟಿವಿ ಕ್ಯಾಮೆರಾದಲ್ಲಿ ಹಂತಕರ ಸೆರೆ, ಹಂತಕನ ಮುಖ ಚಹರೆ ಮತ್ತಷ್ಟು ಸ್ಪಷ್ಟ

Pinterest LinkedIn Tumblr


ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿ ಪರ ಚಿಂತಕಿ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಹಂತಕರ ಚಿತ್ರಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಯಲ್ಲಿರುವ ಚಿತ್ರವೊಂದರಲ್ಲಿ ಹಂತಕನೊಬ್ಬನ ಮುಖಚಹರೆ ಸ್ಪಷ್ಟವಾಗಿ ಕಾಣುತ್ತಿರುವುದಾಗಿ ತಿಳಿದುಬಂದಿದೆ.
ಕ್ಲೋಸ್ ಅಪ್’ನ್ನು ಹಿಗ್ಗಿಸಿ ಪಡೆಯಲಾಗಿರು ಹಂತಕನ ಚಿತ್ರವು ಆತನ ಮುಖ ಚಹರೆಗಳನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಸಿಸಿಟಿವಿ ಕ್ಯಾಮೆರಾದಿಂದ ಪಡೆಯಲಾದ 2 ವಿಡಿಯೋ ಕ್ಲಿಪ್ ಗಳಲ್ಲಿ ಒಂದರಿಂದ ಈ ಚಿತ್ರವನ್ನು ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಚಿತ್ರದಲ್ಲಿ ಹಂತಕ ಹೆಲ್ಮೆಟ್ ಧರಿಸಿದ್ದು, ಫೋಟೋವನ್ನು ವಿಸ್ತಾರವಾಗಿಸಿ ಆತನ ಚಹರೆ ಕಾಣುವ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಘಟನೆ ನಡೆದ ಸಂದರ್ಭ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ಚಿತ್ರ ಇದಾಗಿದ್ದು, ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುತ್ತಿರುವ ಹಂತಕನ ಅಸ್ಪಷ್ಟ ಚಿತ್ರಣವಿದೆ.
ಚಿತ್ರವನ್ನು ಇನ್ನಷ್ಟು ವಿಸ್ತರಿಸಿ ಹಂತಕನ ಸ್ಪಷ್ಟ ಚಹರೆಯನ್ನು ಪಡೆಯಲು ತನಿಖಾಧಿಕಾರಿಗಳು ಸಾಕಷ್ಟು ಶ್ರಮಗಳನ್ನು ಪಡುತ್ತಿದ್ದು, ಇದೀಗ ವಿಧಿವಿಜ್ಞಾನ ತಜ್ಞರ ನೆರವು ಪಡೆಯಲು ತನಿಖಾ ತಂಡ ಮುಂದಾಗಿದೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಆಧಾರದ ಮೇಲೆ ಈಗಾಗಲೇ ಅಧಿಕಾರಿಗಳು ಮೂವರು ಶಂಕಿತರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ನಗರದ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ನಿವಾಸದಲ್ಲಿಯೇ ಸೆ.5 ರಂದು ಗೌರಿಯವರನ್ನು ಹಂತಕರ ತಂಡವೊಂದು ಗುಂಡಿಟ್ಟು ಹತ್ಯೆ ಮಾಡಿತ್ತು. ಹಂತಕರ ಬಂಧನಕ್ಕೆ ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.
ತನಿಖಾ ತಂಡ(SIT) ಹಗಲು ರಾತ್ರಿ ಹಂತಕರ ಶೋಧ ಕಾರ್ಯದಲ್ಲಿ ತೊಡಗಿದೆ. ಇದೀಗ ಲಭ್ಯವಾಗಿರುವ ಹಂತನ ಸ್ಪಷ್ಟ ಚಿತ್ರದಿಂದ ಗೌರಿ ಹಂತಕರ ಕುರಿತು ಸಣ್ಣ ಕುರುಹುಗಳು ಸಿಗದೆ ಹರಸಾಹಸಪಡುತ್ತಿದ್ದ ಎಸ್ಐಟಿ ಅಧಿಕಾರಿಗಳಿಗೆ ಇದೀಗ ತುಸು ನೆಮ್ಮದಿ ಸಿಕ್ಕಂತಾಗಿದೆ.

Comments are closed.