ರಾಷ್ಟ್ರೀಯ

ಹವಾ ನಿಯಂತ್ರಿತ ರೆಸ್ಟೊರೆಂಟ್ ಗಳಿಗೆ ಹೋಗುವವರಿಗೆ ಖುಷಿಯ ವಿಚಾರ

Pinterest LinkedIn Tumblr


ನವದೆಹಲಿ: ರೆಸ್ಟೋರೆಂಟ್ ಗಳ ಮೇಲೆ ವಿಧಿಸಲಾಗಿದ್ದ ಸರಕು ಮತ್ತು ಸೇವಾ ತೆರಿಗೆ ದರವನ್ನು ಪುನಃ ಪರಿಶೀಲಿಸುವಂತೆ ತೆರಿಗೆ ತಂಡಕ್ಕೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಹವಾ ನಿಯಂತ್ರಿತ ಮತ್ತು ಪವಾ ನಿಯಂತ್ರಿಯೇತರ ರೆಸ್ಟೋರೆಂಟ್ ಗಳ ಮೇಲೆ ಜಿಎಸ್ ಟಿ ದರದಲ್ಲಿನ ವ್ಯತ್ಯಾಸವನ್ನು ತೆಗೆದುಹಾಕಲು ಪರಿಶೀಲನೆ ನಡೆಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಸ್ಸಾಂನ ಹಣಕಾಸು ಸಚಿವ ಹಿಮಂತ ಬಿಸ್ವಾ ಸರ್ಮ ನೇತೃತ್ವದ ಐವರು ಸಚಿವರನ್ನೊಳಗೊಂಡ ಜಿಎಸ್ ಟಿ ತಂಡವು ರೆಸ್ಟೋರೆಂಟ್ ಗಳ ಮೇಲೆ ಶೇಕಡಾ 18ರಷ್ಟು ಜಿಎಸ್ ಟಿ ತೆರಿಗೆಯನ್ನು ತೆಗೆದುಹಾಕಿ ಶೇಕಡಾ 12ರಷ್ಟು ವಿಧಿಸಲು ಮತ್ತು ತಿನಿಸುಗಳ ಮೇಲಿನ ತೆರಿಗೆ ಕ್ರೆಡಿಟ್ ಸೌಲಭ್ಯವನ್ನು ಹಿಂತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಪ್ರಸ್ತುತ ಹವಾ ನಿಯಂತ್ರಿತ ರೆಸ್ಟೊರೆಂಟ್ ಗಳ ಮೇಲೆ ಶೇಕಡಾ 18ರಷ್ಟು ಮತ್ತು ಹವಾ ನಿಯಂತ್ರಿಯೇತರ ರೆಸ್ಟೊರೆಂಟ್ ಗಳ ಮೇಲೆ ಶೇಕಡಾ 12ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗುತ್ತದೆ.

Comments are closed.