ಕರ್ನಾಟಕ

13 ವರ್ಷಗಳ ಬಳಿಕ ತುಂಬಿದ ಅಮಾನಿಕೆರೆ: ಸಿದ್ದಗಂಗಾ ಶ್ರೀ ವೀಕ್ಷಣೆ

Pinterest LinkedIn Tumblr


ತುಮಕೂರು: 13 ವರ್ಷಗಳ ಬಳಿಕ ನೀರು ಕಂಡ ತುಮಕೂರಿನ ಅಮಾನಿಕೆರೆಗೆ ಬುಧವಾರ ಸಿದ್ದಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳು ಭೇಟಿ ನೀಡಿ ವೀಕ್ಷಿಸಿದರು.

ತಮ್ಮ ಸಹಾಯಕರೊಂದಿಗೆ ಕಾರಿನಲ್ಲಿ ಅಮಾನಿಕೆರೆಗೆ ಆಗಮಿಸಿದ ಅವರು ಕೆಲ ಕಾಲ ಕೆರೆಯ ಅಂಗಳದಲ್ಲಿ ಕಾಲ ಕಳೆದರು.

ತುಮಕೂರು ನಗರದ ಹೃದಯ ಭಾಗದಲ್ಲಿ ಇರುವ ಅಮಾನಿಕೆರೆ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಕಳೆದ 13 ವರ್ಷಗಳಿಂದ ಬರಡಾಗಿತ್ತು.

ಕಳೆದೊಂದು ತಿಂಗಳಿನಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆಗೆ ನೀರು ಹರಿದು ಬಂದಿದ್ದು, ಹಳೆಯ ವೈಭವ ಮರುಕಳಿಸಿದೆ.

ನಿತ್ಯ ನೂರಾರು ಮಂದಿ ಸಾರ್ವಜನಿಕರು ಕೆರೆಯ ವೀಕ್ಷಣೆಗೆ ಬರುತ್ತಿದ್ದಾರೆ.

Comments are closed.