ರಾಷ್ಟ್ರೀಯ

ದೇವರಿಗೆ ಪ್ರದಕ್ಷಿಣೆ ಬರಲು ಹೋಗಿ 2,400 ಅಡಿ ಪ್ರಪಾತಕ್ಕೆ ಬಿದ್ದ!

Pinterest LinkedIn Tumblr


ಚೆನ್ನೈ: ತಮಿಳುನಾಡಿನ ಎತ್ತರದ ಗಿರಿಯಲ್ಲಿರುವ ಥಲೈಮಲೈನ ಪೆರುಮಾಳ್‌ ದೇವಾಲಯದಲ್ಲಿ ಭಕ್ತನೊಬ್ಬ ದೇವರಿಗೆ ಪ್ರದಕ್ಷಿಣೆ ಬರಲು ಹೋಗಿ 2,400 ಅಡಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿದೆ.

ಅತ್ಯಂತ ಆಯಕಟ್ಟಿನ ಸ್ಥಳದಿಂದ ಸುತ್ತು ಬರಲು ಹೋಗಿದ್ದು, ಈ ವೇಳೆ ಕಾಲು ಜಾರಿ ಕೇಳಕ್ಕೆ ಬಿದ್ದೇ ಬಿಟ್ಟಿದ್ದಾನೆ. ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು ಇದೀಗ ವೈರಲ್‌ ಆಗಿ ಹರಿದಾಡುತ್ತಿದೆ.

ಮೃತ ದುರ್ದೈವಿ ಆಟೋ ಚಾಲಕ ಆರ್ಮುಗಂ ಎಂದು ಗುರುತಿಸಲಾಗಿದ್ದು, ಶವವನ್ನು ಭಾನುವಾರ ಮಧ್ಯಾಹ್ನ ಪೊಲೀಸರು ಮೇಲಕ್ಕೆತ್ತಿ ಮನೆಯವರಿಗೆ ನೀಡಿದ್ದಾರೆ.

ಸ್ಥಳದಲ್ಲಿ ಪಾಚಿ ಮತ್ತು ಮಳೆಯ ಕಾರಣ ಕಾಲು ಜಾರಿ ಕೆಳಕ್ಕೆ ಬಿದ್ದಿರುವುದಾಗಿ ಹೇಳಲಾಗಿದೆ. ಆಯಕಟ್ಟಿನ ಸ್ಥಳದಿಂದ ಸುತ್ತು ಬರುವುದಕ್ಕೆ ದೇವಾಲಯದಲ್ಲಿ ನಿಷೇಧ ಹೇರಲಾದ್ದ ಹೊರತಾಗಿಯೂ ಸುತ್ತು ಬರಲು ಮುಂದಾಗಿದ್ದು ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

-ಉದಯವಾಣಿ

Comments are closed.