ಕರ್ನಾಟಕ

ಶಶಿಕಲಾ ಶಿಕ್ಷೆಗೆ ಸುಪ್ರೀಂ ಕೋರ್ಟ್ ನೀಡಿರುವ ಕಾರಣಗಳೇನು?

Pinterest LinkedIn Tumblr


ಬೆಂಗಳೂರು(ಫೆ.14): ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಕೆ ಶಶಿಕಲಾ ನಟರಾಜನ್ ಸೇರಿದಂತೆ ಮೂವರಿಗೆ 4 ವರ್ಷ ಜೈಲು ಹಾಗೂ 10 ಕೋಟಿ ದಂಡ ವಿಧಿಸಿದೆ. ಶಿಕ್ಷೆಗೆ ನೀಡಿದ ಕಾರಣಗಳು ಇಂತಿವೆ.
ಕಾರಣಗಳು 01
1) ಶಶಿಕಲಾ ನಟರಾಜನ್ ಹೆಸರಿನಲ್ಲಿ 32 ಕಂಪನಿಗಳಿದ್ದವು
2) ಯಾವ ಕಂಪನಿಯೂ 1991- 1996 ರವರೆಗೆ ವಹಿವಾಟು ನಡೆಸಿರಲಿಲ್ಲ
3) ಯಾವ ಕಂಪೆನಿಯೂ ಟ್ಯಾಕ್ಸ್ ಕಟ್ಟಿರಲಿಲ್ಲ
4) ಟ್ಯಾಕ್ಸ್ ಕಟ್ಟಬೇಕಾದ ಅನಿರ್ವಾಯತೆ ಸೃಷ್ಟಿಯಾಯ್ತು
5) ಈ ವೇಳೆ ಹಣವನ್ನು ಕ್ಯಾಶ್‌ನಲ್ಲಿ ಸ್ವೀಕರಿಸಿದ್ದಾಗಿ ತೋರಿಸಿದರು
6) ಡೆಪಾಸಿಟ್ ಮಾಡಿದವರಿಗೆ ಹಣ ಕೊಟ್ಟಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ
7) ಅವರಿಗೆ ತಾವು ಹಣ ಡೆಪಾಸಿಟ್ ಮಾಡಿದ್ದ ರಸೀದಿಯಷ್ಟೇ ಇತ್ತು
8) ಹಣ ಎಲ್ಲಿಂದ ಬಂತು ಎನ್ನುವ ದಾಖಲೆಯೇ ಇಲ್ಲ
9) ಯಾವ ಆಸ್ತಿ ತೋರಿಸಿ, ಬ್ಯಾಂಕುಗಳಿಂದ ಸಾಲ ಪಡೆದಿದ್ದರೂ ಅದೇ ಆಸ್ತಿಯನ್ನು ನಂತರ ಖರೀದಿಸಿದ್ದಾರೆ
ಕಾರಣಗಳು 02
1) ಶಶಿಕಲಾ, ಸುಧಾಕರನ್, ಇಳವರಸಿ ಜಯಾ ಮನೆಯಲ್ಲೇ ಠಿಕಾಣಿ ಹೂಡಿದ್ದರು
2) ಜಯಲಲಿತಾ ಜೊತೆ ಇವರಿಗೂ ರಕ್ತ ಸಂಬಂಧ ಇರಲಿಲ್ಲ
3) ಜಯಾ ನಿವಾಸದಿಂದ ಒಂದೇ ದಿನ 10 ಕಂಪೆನಿಗಳು ಉದ್ಭವವಾದವು
4) ಅಕ್ರಮ ಹಣ ಹೂಡುವ ಸಲುವಾಗಿಯೇ ಮನೆಯಲ್ಲಿದ್ದರು
5) ಶಶಿಕಲಾ ಮತ್ತು ಇಳವರಸಿ ಕೇವಲ ಆಸ್ತಿ ಖರೀದಿ ಮಾಡುತ್ತಿದ್ದರು
6) ಶಶಿಕಲಾ, ಇಳವರಸಿ ಯಾವುದೇ ವ್ಯಾಪಾರ ವಹಿವಾಟು ನಡೆಸುತ್ತಿರಲಿಲ್ಲ
7) ಜಯಲಲಿತಾ, ಶಶಿಕಲಾಗೆ ಜಯಾ ಪಬ್ಲಿಕೇಷನ್ಸ್​ನಲ್ಲಿ ಜಿಪಿಎ ಕೊಟ್ಟಿದ್ದರು
8) ಜಿಪಿಎ ಕೊಟ್ಟಿರುವುದು ಜಯಲಲಿತಾ ಬಚಾವ್ ಆಗುವ ತಂತ್ರದ ಭಾಗ
9) ಶಶಿಕಲಾ ಮತ್ತವರ ಸಂಬಂಧಿಗಳ ಅಕ್ರಮ ಎಲ್ಲವೂ ಜಯಲಲಿತಾಗೆ ಗೊತ್ತಿತ್ತು

Comments are closed.