ಕರ್ನಾಟಕ

5 ವರ್ಷದ ಬಾಲಕಿಯ ಸ್ಕರ್ಟ್ ಬಿಚ್ಚಿಸಿ ವಿದ್ಯಾರ್ಥಿಗಳ ಎದುರಲ್ಲೇ ಅವಮಾನ

Pinterest LinkedIn Tumblr


ಬೆಂಗಳೂರು(ಫೆ.11): ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ 5 ವರ್ಷದ ಬಾಲಕಿ ಮೇಲೆ ಶಾಲಾ ಶಿಕ್ಷಕಿ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ.
ಹಲಸೂರಿನ ಕೇಂಬ್ರಿಜ್ಙ್ ಬಡಾವಣೆಯಲ್ಲಿರುವ ಶಾಲೆಯೊಂದರಲ್ಲಿ ಹೆಣ್ಣು ಮಗುವಿನ ಸ್ಕರ್ಟ್​ ಬಿಚ್ಚಿಸಿದ ಶಿಕ್ಷಕಿ, ವಿದ್ಯಾರ್ಥಿಗಳ ಎದುರಲ್ಲೇ ಶೇಮ್​ ಶೇಮ್​ ಅಂತ ಅವಮಾನ ಮಾಡಿದ್ದಾಳೆ ಅಂತ ಆರೋಪಿಸಲಾಗಿದೆ. ಈ ಸಂಬಂಧ ಮಗುವಿನ ತಾಯಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರಿನನ್ವಯ ಶಾಲೆಗೆ ನೋಟಿಸ್​ ನೀಡಲಾಗಿದ್ದು ಶೀಘ್ರವೇ ಉತ್ತರ ನೀಡುವಂತೆ ಸೂಚಿಸಲಾಗಿದೆ ಅಂತ ಹೇಳಲಾಗಿದೆ. ಇನ್ನು ಈ ಹಿಂಸೆಯಿಂದ ಹೆಸರಿದ ಮಗು ಶಾಲೆಗೆ ಹೋಗಲು ಹಿಂಜರಿಯುತ್ತಿದೆ ಅಂತ ಮಗುವಿನ ತಾಯಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Comments are closed.