ಕರ್ನಾಟಕ

ಮಜಾಸ್‌ ಪಾರ್ಲರ್‌ಲ್ಲಿ ವೇಶ್ಯಾವಾಟಿಕೆ; 6 ಮಂದಿ ಬಂಧನ

Pinterest LinkedIn Tumblr

ಬೆಂಗಳೂರು: ಸದಾಶಿವನಗರ ಸಮೀಪ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದ ಆರೋಪ ಮೇಲೆ ‘ಸ್ಪಾ’ದಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ​ಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೆನ್ನಿ (25), ಸಿರಾಜುದ್ದೀನ್‌(38), ಅಂಗ್‌ಚುಕುಲ್‌(28), ಹಸನ್‌ ಬಾವೂರ್‌(38), ಸೆಂಥಿಲ್‌ ಕುಮಾರ್‌(41) ಹಾಗೂ ಅಭಿಜಿತ್‌ (44) ಬಂಧಿತರು. ಮೂವರು ವಿದೇಶಿಯರು ಸೇರಿದಂತೆ 6 ಮಂದಿ ಯುವತಿಯರನ್ನು ರಕ್ಷಿಸಲಾಗಿದೆ. . 1,28,405 ನಗದು, 8 ಮೊಬೈಲ್‌, ಎರಡು ಸ್ವೈಪಿಂಗ್‌ ಮಿಷನ್‌, ಕಂಪ್ಯೂಟರ್‌ ಡಿವಿಆರ್‌, ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಆರ್‌’ಎಂವಿ ಎಕ್ಸ್‌’ಟೆನ್ಷನ್‌’ನಲ್ಲಿ ‘ಶಿವಾಯಿ ತಾಹಿ ಸ್ಪಾ’ ಹೆಸರಿನ ಮಜಾಸ್‌ ಪಾರ್ಲರ್‌ಲ್ಲಿ ಥೈಲ್ಯಾಂಡ್‌ ಮತ್ತು ನಾಗ​ಲ್ಯಾಂಡ್‌’ನಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ಚಟುವಟಿಕೆ ನಡೆಸು​ತ್ತಿ​ದ್ದರು. ಈ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮಸಾಜ್‌ ಪಾರ್ಲರ್‌ನ ಮಾಲೀಕ ಮಧು​ಸೂದನ್‌ ಮತ್ತು ಪ್ರಿನ್ಸ್‌ ಗುಪ್ತಾ ಪರಾರಿಯಾಗಿ​ದ್ದಾರೆ.

Comments are closed.