ಕರಾವಳಿ

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ದಾಖಲೆಯನ್ನು ಬರೆಯಲಿದೆ- ಗಿರಿಧರ್ ಶೆಟ್ಟಿ

Pinterest LinkedIn Tumblr

ಮಂಗಳೂರು : ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತಾ ಅವರ ಕೃತಿಗಳನ್ನು ಪಲ್ಲಂಕಿಯಲ್ಲಿ ಇಟ್ಟು ಅದನ್ನು ಯುವಕರು ಹೊರುವ ಮೂಲಕ ನಿಜವಾದ ಅರ್ಥದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ ಎಂದು ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಸಂಚಾಲಕ ಗಿರಿಧರ್ ಶೆಟ್ಟಿ ತಿಳಿಸಿದ್ದಾರೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರು ಫೆಬ್ರವರಿ 11 ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಪಲ್ಲಂಕಿ ಮೆರವಣಿಗೆಗೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಬಳಿ ಚಾಲನೆ ನೀಡಲಿದ್ದಾರೆ. ಪಲ್ಲಂಕಿ ಉತ್ಸವ ಅಲ್ಲಿಂದ ಕೇಂದ್ರ ಮೈದಾನದವರೆಗೆ ವಿಜೃಂಭಣೆಯಿಂದ ಸಾಗಲಿದೆ.

ನಂತರ 10.15ಕ್ಕೆ ಪಶ್ಚಿಮದಲ್ಲಿ ವಿವೇಕಾನಂದ ಪೂರ್ವದಲ್ಲಿ ನಿವೇದಿತಾ ಪ್ರದರ್ಶನ ಮಳಿಗೆಗಳನ್ನು ತರಂಗ, ತುಷಾರ, ರೂಪತಾರ ನಿವರ್ಾಹಕ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 10.30 ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋದರಿ ನಿವೇದಿತಾ ಅವರ ಕೃತಿಗಳ ಮೇಲೆ ಆಳವಾದ ಅಧ್ಯಯನ ನಡೆಸಿ, ಸಂಶೋಧನಾ ಪ್ರಬಂಧ ಮಂಡಿಸಿ ಗೌರವ ಡಾಕ್ಟರೇಟ್ ಪಡೆದಿರುವ, 20 ವರ್ಷಗಳಿಂದ ತಿರುನಲ್ವೇಲಿಯ ಶಾರದಾ ಮಹಿಳೆಯರ ಕಾಲೇಜಿನ ಪ್ರಾಂಶುಪಾಲರಾಗಿರುವ ಮಾತಾಶ್ರೀ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ ಅವರು ವಹಿಸಲಿದ್ದಾರೆ. ನಿವೇದಿತಾ ಅವರ ಸಕಲ ಸಾಹಿತ್ಯವನ್ನು ಅನುವಾದಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಶಾರದಾ ಆಶ್ರಮ ತಿರುವಣ್ಣಾಮಲೈಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಎರಡು ವಿಶೇಷ ದಾಖಲೆಗಳು ನಿಮರ್ಾಣವಾಗಲಿದೆ. ಮುಲ್ಕಿಯ ಪಂಜಿನಡ್ಕ ಕೆಪಿಎಸ್ ಕೆ ಸ್ಮಾರಕ ಪ್ರೌಢಶಾಲೆಯ ಕಲಾ ಶಿಕ್ಷಕ ವೆಂಕಿ ಫಲಿಮಾರ್ ಹಾಗೂ ವಿದ್ಯಾಥರ್ಿಗಳು ಸೇರಿ ರಚಿಸಿದ 21 ಅಡಿ ಉದ್ದ 16 ಅಡಿ ಅಗಲದ ಸ್ವಾಮಿ ವಿವೇಕಾನಂದರ ವರ್ಣಚಿತ್ರ ಕೊಲಾಜ್ ಅನಾವರಣಗೊಳ್ಳಲಿದೆ.

ಹಳೆಯ ಮ್ಯಾಗಜೀನ್ ಗಳನ್ನು ಸೇರಿಸಿ 12 ದಿನಗಳೊಳಗೆ ಸುಮಾರು ಹತ್ತು ವಿದ್ಯಾಥರ್ಿಗಳ ಕೈಚಳಕದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸೃಷ್ಟಿಯಾಗಿರುವ ಅದ್ಭುತ ಕಲಾಕೃತಿ ದಾಖಲೆಯನ್ನು ಸೇರಲಿದೆ. ಇನ್ನು ಹತ್ತು ನಿಮಿಷದಲ್ಲಿ 108 ಬಾರಿ ಸೂರ್ಯ ನಮಸ್ಕಾರ ಹಾಕುವ ಮೂಲಕ ವಿಶ್ವದಾಖಲೆಯನ್ನು ಬರೆಯಲಿರುವ ಬೆಂಗಳೂರಿನ ನಿರಂಜನ್ ಅವರು ಪ್ರಾತ್ಯಕ್ಷಿತೆ ತೋರಿಸಲಿದ್ದಾರೆ.

ಫೆಬ್ರವರಿ 11 ರಂದು ಶನಿವಾರ ಸಂಜೆ 5.30 ಕ್ಕೆ ಯುವ ಬ್ರಿಗೇಡಿನ ಮಾರ್ಗದರ್ಶಕರಾಗಿರುವ ಚಕ್ರವತರ್ಿ ಸೂಲಿಬೆಲೆಯವರ ನೇತೃತ್ವದಲ್ಲಿ ನರೇಂದ್ರ ಭಾರತ ವಿಶೇಷ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರು ಉಪಸ್ಥಿತರಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಸಿನೆಮಾ ತಾರೆ ರಕ್ಷಿತ್ ಶೆಟ್ಟಿಯವರು ಭಾಗವಹಿಸಲಿದ್ದಾರೆ.

ಫೆಬ್ರವರಿ 12 ರಂದು ಸಂಜೆ 5.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗುಜರಾತಿನ ರಾಜ್ ಕೋಟ್ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಸರ್ವಸ್ಥಾನಂದಜಿ ಮಹಾರಾಜ್ ಸಹಿತ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಗಿರಿಧರ್ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Comments are closed.