ಕರ್ನಾಟಕ

ಕುಡಿದ ಮತ್ತಲ್ಲಿ ಯುವತಿಯೊಬ್ಬಳನ್ನು ಹೊತ್ತೊಯ್ದ: ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತದೇ ಕಿರಿಕ್!

Pinterest LinkedIn Tumblr


ಬೆಂಗಳೂರು(ಫೆ.04): ಕುಡಿದ ಮತ್ತಲ್ಲಿ ಯುವತಿಯೊಬ್ಬಳನ್ನು ಹೊತ್ತೊಯ್ದ ಬೆಂಗಳೂರಿನ ಮಾನವನ್ನು ಹರಾಜಾಕಿದ್ದ ಕಾಮುಕ ಅವನು. ಅವನನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದರೆ, ಜಾಮೀನಿನ ಮೇಲೆ ಹೊರಬಂದು ಮತ್ತೆ ಕಿರಿಕಿರಿ ಆರಂಭಿಸಿದ್ದ. ಇಂಥಹ ಕಾಮಾಂಧನನ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಷ್ಟಕ್ಕೂ ಆತ ಯಾರು..? ಅವನ ವಿರುದ್ಧ ಕ್ರಮವೇನು? ಇಲ್ಲಿದೆ ವಿವರ
2016ರ ಏಪ್ರಿಲ್​​​ ತಿಂಗಳಲ್ಲಿ ಯುವತಿ ಅಪಹರಿಸಿದ್ದ ಅಕ್ಷಯ್​​​​
ಕಾಮಾಂಧರ ಕಾಟದಿಂದ ಬೆಂಗಳೂರು ಮಾನ ವಿಶ್ವ ಮಟ್ಟದಲ್ಲಿ ಹರಾಜಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾನೂನು ಬಾಹಿರ ಕೃತ್ಯ ಎಸಗಿರುವ ಹಾಗೂ ಈಗಾಗ್ಲೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ನಿಗಾ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಏಪ್ರಿಲ್​​​ ತಿಂಗಳಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಹೊತ್ತೊಯ್ದ ಪ್ರಕರಣದ ಆರೋಪಿ ವಿರುದ್ಧ ಬೆಂಗಳೂರು ಪೊಲೀಸ್​ ಆಯುಕ್ತರು ಗೂಂಡಾ ಕಾಯ್ದೆ ಜಾರಿ ಮಾಡಿದ್ದಾರೆ.
ಏಪ್ರಿಲ್​​ 23 ರಂದು ಪ್ರಕರಣ ನಡೆದಿದ್ದರೂ ಮಾಧ್ಯಮಗಳಲ್ಲಿ ಈ ಸುದ್ಧಿ ಪ್ರಸಾರ ಆಗುವವರರೆಗೂ ಯಾವುದೇ ಕ್ರಮ ಜಾರಿಯಾಗಿರಲಿಲ್ಲ. ನಂತರ ಆರೋಪಿ ಅಕ್ಷಯ್​’ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಪೊಲೀಸರು. ಆದರೆ, ಕೇವಲ ಎರಡೇ ತಿಂಗಳಲ್ಲಿ ಕಾಮಪಿಶಾಚಿ ಬಿಡುಗಡೆಯಾಗಿದ್ದ. ಹೀಗಾಗಿ ಪೊಲೀಸರು ಅಕ್ಟೋಬರ್’​ನಲ್ಲಿ ಆತನ ವಿರುದ್ಧ ದರೋಡೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಿದರೂ, ಕೆಲವೇ ದಿನಗಳಲ್ಲಿ ಹೊರಗೆ ಬಂದಿದ್ದ. ಬಿಡುಗಡೆಯಾಗಿ ಬಂದ ಅಕ್ಷಯ್​ ಏರಿಯಾದಲ್ಲಿ ಮತ್ತೆ ಕಿರಿಕಿರಿ ಶುರುಮಾಡಿದ್ದ. ಹೀಗಾಗಿ ಪೊಲೀಸರು ಈತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ಮುದಾಗಿದ್ದಾರೆ..
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲೇ 5 ಕೇಸ್​
ಇತ್ತ, ಅಕ್ಷಯ್​ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ 5 ಪ್ರಕರಣಗೂ ದಾಖಲಾಗಿವೆ. ಅಕ್ಷಯ್​​​ ಮದ್ಯಪಾನ ಮಾಡಿದರೆ, ಏರಿಯಾದಲ್ಲಿ ಅವಾಂತರವನ್ನೇ ಸೃಷ್ಟಿಸಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಇಂಥಹ ಆರೋಪಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಇದ್ದರೆ ಪೊಲೀಸರಿಗೆ ತಲೆನೋವು ತಪ್ಪಿದ್ದಲ್ಲ. ಹೀಗಾಗಿ ಈತನ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ.

Comments are closed.