ಕರ್ನಾಟಕ

ಮಾರ್ಚ್ ಎರಡನೇ ವಾರದಲ್ಲಿ ರಾಜ್ಯ ಬಜೆಟ್: ಸಿದ್ದರಾಮಯ್ಯ

Pinterest LinkedIn Tumblr
B

ಮೈಸೂರು: 2017ರ ಕೇಂದ್ರ ಬಜೆಟ್ ಪ್ರಕಟವಾದ ಬೆನ್ನಲ್ಲೇ ಈ ಸಾಲಿನ ರಾಜ್ಯ ಬಜೆಟ್‌ಗೆ ದಿನ ಗಣನೆ ಆರಂಭವಾಗಿದೆ. ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ ಎರಡನೇ ವಾರದಲ್ಲಿ ರಾಜ್ಯ ಬಜೆಟ್‌ ಮಂಡಿಸುವ ಬಗ್ಗೆ ಸುಳಿವು ನೀಡಿದ್ದಾರೆ.

‘ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದ ಸಾಧನೆ ಗಮನಾರ್ಹವಾಗಿದ್ದು, 2016–17ನೇ ಸಾಲಿನಲ್ಲಿ ಯೋಜನೆಯ ಗುರಿಯನ್ನು ಹೆಚ್ಚಿಸಿ, ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ಗೆ ವಿದಾಯ ಹೇಳಿರುವ ಹಿರಿಯ ರಾಜಕಾರಣಿ ಎಸ್‌.ಎಂ ಕೃಷ್ಣ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ಸರ್ಕಾರ ಪಕ್ಷದ ಯಾವ ಹಿರಿಯ ನಾಯಕರನ್ನೂ ಕಡೆಗಣಿಸಿಲ್ಲ. ಕೃಷ್ಣ ಅವರ ಮನವೊಲಿಕೆಗೆ ಹೈಕಮಾಂಡ್‌ ಪ್ರಯತ್ನಿಸುತ್ತಿದ್ದು, ನಾನೂ ಸಹ ಅವರೊಡನೆ ಸಮಾಲೋಚನೆ ನಡೆಸುತ್ತೇನೆ’ ಎಂದು ತಿಳಿಸಿದ್ದಾರೆ.

Comments are closed.