ರಾಷ್ಟ್ರೀಯ

ಆ್ಯಪ್‌ ಬಳಕೆದಾರರಿಗೆ ‘ಭೀಮ್’ ಬಲ

Pinterest LinkedIn Tumblr


ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಭೀಮ್ (Bharat Interface for Money) ಆ್ಯಪ್‍ಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೆಲವೊಂದು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.

ಆ ಆ್ಯಪ್ ರೆಫರ್ ಮಾಡುವವರಿಗೆ ಬೋನಸ್ ನೀಡುವುದಾಗಿ ರೆಫರಲ್ ಬೋನಸ್ (referral bonus) ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ ಮಾಡಿದ ಜೇಟ್ಲಿ ಹೇಳಿದ್ದಾರೆ.

ವ್ಯಾಪಾರಿಗಳಿಗಾಗಿ ಕ್ಯಾಶ್ ಬ್ಯಾಕ್ ಯೋಜನೆಯನ್ನೂ ಈ ಬಜೆಟ್‍ನಲ್ಲಿ ಪ್ರಸ್ತಾಪ ಮಾಡಿದ್ದು, ಆಧಾರ್ ಕಾರ್ಡ್ ಬಳಸಿ ನಡೆಸುವ ವಹಿವಾಟುಗಳಿಗೆ ಈ ಪದ್ದತಿ ಸೀಮಿತವಾಗಿರುತ್ತದೆ.

ಗರಿಷ್ಠ ಮುಖಬೆಲೆಗಳ ನೋಟು ರದ್ದು ಮಾಡಿದ ನಂತರ ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಯವರು ಭೀಮ್ ಆ್ಯಪ್ ಬಿಡುಗಡೆ ಮಾಡಿದ್ದರು.

ಪ್ರಸ್ತುತ ಭೀಮ್ ಆ್ಯಪ್ ಬಳಸುವವರ ಸಂಖ್ಯೆ 1. 25 ಕೋಟಿ ಇದೆ ಎಂದು ಜೇಟ್ಲಿ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ,

Comments are closed.