ರಾಷ್ಟ್ರೀಯ

ಬಜೆಟ್-2017: ಕವನಗಳಿಂದ ವಿಪಕ್ಷಗಳಿಗೆ ಉತ್ತರ ಕೊಟ್ಟ ಜೇಟ್ಲಿ

Pinterest LinkedIn Tumblr

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಕೇಂದ್ರ ಬಜೆಟ್ ಮಂಡನೆ ಮಾಡುತ್ತಾ ಕೆಲವೊಂದು ಕವನಗಳನ ಸಾಲುಗಳನ್ನು ವಾಚಿಸಿ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

ನೋಟುರದ್ದತಿ ಮತ್ತು ನಗದು ರಹಿತ ವಹಿವಾಟಿನ ಬಗ್ಗೆ ಬಜೆಟ್‍ನಲ್ಲಿ ಉಲ್ಲೇಖಿಸಿ ಮಾತನಾಡಿದ ಸಚಿವರು ಹಿಂದಿ ಕವನದ ಸಾಲುಗಳನ್ನು ವಾಚಿಸಿದಾಗ ಲೋಕಸಭಾ ಸದಸ್ಯರು ಕರತಾಡನದೊಂದಿಗೆ ಮೆಚ್ಚುಗೆ ಸೂಚಿಸಿದರು.

ಇಸ್ ಮೋಡ್ ಪರ್ ಗಬರಾಕರ್ ಥಮ್ ಜಾಯಿಯೇ ಆಪ್ , ಜೋ ಬಾತ್ ನಯೀ ಹೈ ಉಸೇ ಅಪ್‍‌ನಾಯಿಯೇ ಆಪ್ (ನೀವು ಇಂಥಾ ಪರಿಸ್ಥಿತಿ ಬಂದಾಗ ಹೆದರಬೇಡಿ, ಹೊಸತನ್ನು ನೀವು ನಿಮ್ಮದಾಗಿಸಿಕೊಳ್ಳಿ )

ಡರ್‍‍ತೇ ಹೈ ನಯೀ ರಾಹ್ ಪೇ ಕ್ಯೂ ಚಲ್ ನೇ ಸೇ, ಹಮ್ ಆಗೇ ಆಗೇ ಚಲ್ತೇಹೈ ಆಯಿಯೇ ಆಪ್ (ಹೊಸ ದಾರಿಯಲ್ಲಿ ನಡೆವಾಗ ನೀನೇಕೆ ಹೆದರುತ್ತೀ, ನಾವು ಮುಂದೆ ಮುಂದೆ ಹೋಗುವಾಗ ಜತೆಗೆ ನೀವೂ ಬನ್ನಿ)

ಈ ಸಾಲುಗಳು ನೋಟು ರದ್ದತಿ ನಿರ್ಧಾರವನ್ನು ವಿರೋಧಿಸಿದ ವಿಪಕ್ಷಗಳಿಗೆ ಟಾಂಗ್ ಕೊಟ್ಟದ್ದಾಗಿತ್ತು.

ನಯೀ ದುನಿಯಾ ಹೈ, ನಯಾ ದೋರ್ ಹೈ, ನಯೀ ಹೈ ಉಮಂಗ್ . ಕುಚ್ ಥಾ ಪೆಹಲೇ ಕೆ ತರೀಕೆ, ತೋ ಕುಚ್ ಹೈ ಆಜ್ ಕೆ ರಂಗ್ ಡಂಗ್ ( ಇದೊಂದು ಹೊಸ ಲೋಕ, ಹೊಸ ನಡೆ, ಹೊಸ ಉತ್ಸಾಹ. ಕೆಲವು ಹಳೇ ರೀತಿಗಳಿದ್ದವು, ಇನ್ನು ಕೆಲವು ಈಗಿನ ಹೊಸ ರೀತಿಗಳಾಗಿವೆ)

ರೋಷ್ನಿ ಜೋ ಯೇ ನಿಕಲ್ ಆಯೀ ಹೈ, ಕಾಲೇ ಧನ್ ಕೋ ಭೀ ಬದಲ್ನಾ ಪಡಾ ಅಪ್‍ನಾ ರಂಗ್ (ಹೊಸ ಬೆಳಕೊಂದು ಬಂದು, ಕಪ್ಪು ಹಣಕ್ಕೆ ಕೂಡಾ ತನ್ನ ಬಣ್ಣ ಬದಲಾಯಿಸಬೇಕಾಗಿ ಬಂತು).

ಜೇಟ್ಲಿ ಈ ರೀತಿ ಕವನ ವಾಚನ ಮಾಡಿದ್ದು ಇದೇ ಮೊದಲ ಬಾರಿಯೇನೂ ಅಲ್ಲ. ಕಳೆದ ವರ್ಷ ಬಜೆಟ್ ಭಾಷಣ ಮಾಡುವಾಗಲೂ ಇವರು ಕವನ ವಾಚನ ಮಾಡಿದ್ದರು.

Comments are closed.