ಕರ್ನಾಟಕ

ರಾತ್ರಿ ಮಹಿಳೆಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದ ಎಎಸ್‍ಐಗೆ 15 ಸಾವಿರ ಬಹುಮಾನ

Pinterest LinkedIn Tumblr


ಬೆಂಗಳೂರು,ಜ.28- ಪೆಟ್ರೋಲ್ ಖಾಲಿ ಆಗಿದ್ದರಿಂದ ರಾತ್ರಿ ವೇಳೆ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿಕೊಂಡು ನಿಂತಿದ್ದ ಮಹಿಳೆಯನ್ನು ತಮ್ಮ ಸ್ಕೂಟರ್ ಕೊಟ್ಟು ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದ ಕೆ.ಜಿ.ಹಳ್ಳಿ ಸಂಚಾರ ಠಾಣೆಯ ಎಎಸ್‍ಐ ಕೆ.ನಾರಾಯಣಸ್ವಾಮಿ ಅವರ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು 15 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ನಾರಾಯಣಸ್ವಾಮಿ ಅವರ ಈ ಕಾರ್ಯವೈಖರಿಗೆ ನಗರ ಪೆÇಲೀಸ್ ಕಮಿಷನರ್ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಅಲ್ಲದೆ, ಎಎಸ್‍ಐ .ನಾರಾಯಣಸ್ವಾಮಿ ಅವರು ಸಹಾಯ ಮಾಡಿದ್ದನ್ನು ನಿರ್ಮಲಾ ರಾಜೇಶ್ ಎಂಬುವರು ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ಅದಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು.
ಎಎಸ್‍ಐ ನೆರವಾಗಿದ್ದು ಹೇಗೆ.!
ಖಾಸಗಿ ಕಂಪೆನಿ ಉದ್ಯೋಗಿಯಾದ ನಿರ್ಮಲಾ ಎಎಸ್‍ಐ ಕೆ.ನಾರಾಯಣಸ್ವಾಮಿ ನೆರವಾಗಿದ್ದನ್ನು ಫೇಸ್‍ಬುಕ್‍ನಲ್ಲಿ ಜ.26 ರಂದು ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಗುರುವಾರ ಮನೆಗೆ ಮರಳುತ್ತಿದ್ದೆ. ಜೆ.ಸಿ.ನಗರದ ಟಿ.ವಿ ಟವರ್ ಬಳಿ ಸಾಗುವಾಗ ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಿತು. ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಿಲ್ಲ. ಪತಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಪೆಟ್ರೋಲ್ ತೆಗೆದುಕೊಂಡು ಬರುವುದಾಗಿ ಅವರು ಹೇಳಿದ್ದರಿಂದ ರಸ್ತೆ ಬದಿ ನಿಂತು ಕಾಯುತ್ತಿದ್ದೆ’
ಈ ಸಮಯದಲ್ಲಿ ಅಲ್ಲಿಗೆ ಬಂದ ಎಎಸ್‍ಐ ನಾರಾಯಣಸ್ವಾಮಿ, ಒಂಟಿಯಾಗಿ ನಿಂತಿರುವುದನ್ನು ಪ್ರಶ್ನಿಸಿದರು. ಪೆಟ್ರೋಲ್ ಖಾಲಿಯಾಗಿರುವುದಾಗಿ ಹೇಳಿದಾಗ, `ಈ ಕತ್ತಲಲ್ಲಿ ಇಲ್ಲಿ ನಿಲ್ಲುವುದು ಸರಿಯಲ್ಲ. ನಾನು ಆರ್‍ಎಂಸಿ ಯಾರ್ಡ್ ಕಡೆಗೆ ಹೋಗುತ್ತಿದ್ದೇನೆ. ನೀವು ನನ್ನ ಸ್ಕೂಟರ್ ತೆಗೆದುಕೊಂಡು ಹೋಗಿ ಮೇಕ್ರಿ ವೃತ್ತದಲ್ಲಿರಿ. ಪತಿಗೂ ಅಲ್ಲಿಗೆ ಬರಲು ಹೇಳಿ. ನಾನು ನಿಮ್ಮ ಸ್ಕೂಟರ್ ತಳ್ಳಿಕೊಂಡು ಬರುತ್ತೇನೆ’ ಎಂದು ಹೇಳಿ ಕಳುಹಿಸಿದರು.
ಅದರಂತೆ ನಾನು ಪತಿಗೆ ಕರೆ ಮಾಡಿ ಮೇಕ್ರಿ ವೃತ್ತಕ್ಕೆ ಹೋದೆ. ನಾರಾಯಣಸ್ವಾಮಿ ಅವರು ಸುಮಾರು 1 ಕಿ.ಮೀ ದೂರ ಸ್ಕೂಟರ್ ತಳ್ಳಿಕೊಂಡು ಬಂದರು. ನಾನು ಹಾಗೂ ಪತಿ ಎಎಸ್‍ಐಗೆ ತುಂಬು ಹೃದಯದ ಧನ್ಯವಾದ ಹೇಳಿದೆವು.
ಪೆÇಲೀಸ್ ಇಲಾಖೆಯಲ್ಲಿ ಇಂಥ ನಿಷ್ಠಾವಂತರೂ ಇದ್ದಾರೆ ಎಂಬುದು ನನಗೆ ಮನವರಿಕೆಯಾಯಿತು’`ಬಳಿಕ ಪತಿ ತಂದಿದ್ದ ಪೆಟ್ರೋಲನ್ನು ಸ್ಕೂಟರ್‍ಗೆ ಹಾಕಿಕೊಂಡು, ಸುರಕ್ಷಿತವಾಗಿ ಮನೆ ಸೇರಿದೆ. ಎಎಸ್‍ಐ ಅವರ ಈನೆರವನ್ನು ಜೀವ ಇರುವವರೆಗೂ ಮರೆಯುವುದಿಲ್ಲ ಎಂದು ಬರೆದುಕೊಂಡಿದ್ದರು.

Comments are closed.