ಕರ್ನಾಟಕ

ಅಡುಗೆ ಮನೆಯಲ್ಲಿ ಅಡಗಿದೆ ಆರೋಗ್ಯಕರ ಗುಣ.

Pinterest LinkedIn Tumblr

ಬಿಳಿ ಜೋಳ
ಮಂಗಳೂರು: ಬಿಳಿ ಜೋಳದ ರೊಟ್ಟಿ ಮಾಡಿಕೊಂಡು ಚೆನ್ನಾಗಿ ಅಗಿದು ತಿಂದರೆ ಮಲಬದ್ಧತೆ ನಿವಾರಣೆಯಾಗುವುದು
*ಜೋಳದ ಕಾಂಡವನ್ನು ಸುಟ್ಟು ಹರಳೆಣ್ಣೆಯನ್ನು ಕಲಸಿ ಹಚ್ಚುವುದರಿಂದ ಹುಳುಕಡ್ಡಿ ಹೋಗುವುದು.

ಅಲಸಂದೆ ಕಾಳು
*ಅಲಸಂದೆ ಕಾಳನ್ನು ಹುರಿದು ಹಲವು ದಿನಗಳ ಕಾಲ ತಿನ್ನುತ್ತಿದ್ದರೆ ಅಜೀರ್ಣ ಮತ್ತು ಅಂಗಾಂಗಗಳ ನೋವು ನಿವಾರಣೆಯಾಗುವುದು
*ಹಸಿರು ಅಲಸಂದೆ ಕಾಳನ್ನು ಬೆಲ್ಲದೊಂದಿಗೆ ಅಗಿದು ತಿಂದರೆ ಆಲಸ್ಯ ನಿವಾರಣೆಯಾಗುತ್ತದೆ. ಹೆಚ್ಚು ನಿದ್ರೆ ಬರುವುದಿಲ್ಲ
*ಅಲಸಂದೆ ಕಾಳುಗಳನ್ನ ಬೇಯಿಸಿದ ನೀರನ್ನು ಮೂರು ದಿನಗಳ ಕಾಲ ಕುಡಿದರೆ ದುಂಡು ಹುಳು ನಾಶವಾಗುವವು
*ಅಲಸಂದೆ ಕಾಳಿನ ಪಲ್ಯವನ್ನು ತಿನ್ನುವರಿಂದ ಸ್ತ್ರೀಯರಲ್ಲಿ ಎದೆಯ ಹಾಲು ಅಧಿಕವಾಗುವುದು, ಗಂಡಸರಲ್ಲಿ ವೀರ್ಯೋತ್ಪತ್ತಿ ಹೆಚ್ಚುವುದು

ಬಟಾಣಿ ಕಾಳು
*ಚರ್ಮದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಬಟಾಣಿಯ ಹಿಟ್ಟನ್ನು ಬಳಸಬೇಕು. ಆ ಹಿಟ್ಟನ್ನು ಹಾಲಿನಲ್ಲಿ ಕಲಸಿ ತಿಕ್ಕುವುದರಿಂದ ಕಲೆಗಳು ಮಾಯವಾಗುತ್ತವೆ.
*ಹಸಿ ಬಟಾಣಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಹಾಗೆಯೇ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ದೃಢಕಾಯರಾಗಬಹುದು.
*ಬಟಾಣಿಯನ್ನು ಚೆನ್ನಾಗಿ ಬೇಯಿಸಿ ಬಿಸಿ ಆರಿದ ನಂತರ ಟೊಮೆಟೊ ಹಣ್ಣಿನ ಚೂರುಗಳನ್ನು ಸೇರಿಸಿ ಊಟ ಮಾಡಿದರೆ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.

ಹೂಕೋಸು
*ಇದನ್ನು ತುಪ್ಪದಲ್ಲಿ ಹುರಿದು ಕಪ್ಪು ಉಪ್ಪಿನೊಂದಿಗೆ ತಿನ್ನುವುದರಿಂದ ಮೂಲವ್ಯಾಧಿಗೆ ಅನುಕೂಲ
*ಇದರ ಎಲೆಯ ರಸವನ್ನು ಪ್ರತಿದಿನ ಉಪಯೋಗಿಸುವುದರಿಂದ ಚರ್ಮದ ಹಾಗೂ ತಲೆಯ ಕೂದಲು ಹೊಳೆಯುತ್ತದೆ.
*ಪ್ರತಿದಿನ ಬೆಳಿಗ್ಗೆ ಇದರ ರಸವನ್ನು ಒಂದು ಔನ್ಸ್ನಷ್ಟು ಸೇವಿಸುವುದರಿಂದ ಹೊಟ್ಟೆ ಉರಿ ಹಾಗೂ ಹಲ್ಲಿನ ದವಡೆಗಳಲ್ಲಿ ರಕ್ತಸ್ರಾವ ನಿಲ್ಲುತ್ತದೆ.
*ಇದರ ಎಲೆಯ ರಸವನ್ನು ಚರ್ಮದ ಮೇಲೆ ಹಚ್ಚುವುದರಿಂದ ಕಲೆಗಳು ನಿವಾರಣೆಯಾಗುತ್ತದೆ.

ಗೆಡ್ಡೆಕೋಸು
*ಪ್ರತಿದಿನ ಉಪಯೋಗಿಸುವುದರಿಂದ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ.
*ದಿನನಿತ್ಯ ಇದರ ಸೇವನೆಯಿಂದ ಬೊಜ್ಜು ನಿವಾರಣೆಯಾಗುತ್ತದೆ.
*ಇದನ್ನು ಬೇಯಿಸಿ ತಿಂದರೆ ಆರೋಗ್ಯ ವೃದ್ಧಿಯಾಗುತ್ತದೆ.

ಸುವರ್ಣಗೆಡ್ಡೆ
*ಇದನ್ನು ಆಗ್ಗಾಗ್ಗೆ ಉಪಯೋಗಿಸುವುದರಿಂದ ಮೈ ಕೈ ನೋವು ನಿವಾರಣೆಯಾಗುತ್ತದೆ.
*ಇದು ಉಬ್ಬಸಕ್ಕೆ ತಕ್ಕ ಔಷಧ
*ಉಬ್ಬಸ, ಕೆಮ್ಮು, ಮೂಲವ್ಯಾಧಿಗೂ ಇದು ತುಂಬಾ ಒಳ್ಳೆಯದು

ಕೆಸವಿನ ದಂಟು
*ಕೆಸವಿನ ದಂಟು ಸೇವಿಸಿದರೆ ಜೀರ್ಣಶಕ್ತಿ ಹೆಚ್ಚಾಗುವುದು
*ಕೆಸವಿನ ಗಡ್ಡೆಯನ್ನು ತಿನ್ನುವುದರಿಂದ ದೇಹದ ಭಾರ ಹೆಚ್ಚಾಗುವುದು,

ತೊಂಡೆಕಾಯಿ
*ತೊಂಡೆಕಾಯಿಯನ್ನು ಪಲ್ಯ ಮಾಡಿ ತಿಂದರೆ ರಕ್ತವೃದ್ಧಿಯಾಗುವುದು
*ತೊಂಡೆಕಾಯಿಯನ್ನು ಹಸಿರಾಗಿ ತಿಂದರೆ ‘ಎ’ ಮತ್ತು ’ಸಿ’ ವಿಟಾಮಿನ್ಗಳು ಹೇರಳವಾಗಿ ಸಿಗುತ್ತವೆ,

ಬಸಳೆ ಸೊಪ್ಪು
*ಬಸಳೆಸೊಪ್ಪನ್ನು ಸೇವಿಸಿದರೆ ಆರೋಗ್ಯಕ್ಕೆ ತಂಪು. ಸಾರು ತಯಾರಿಸಿ ಅದಕ್ಕೆ ನಿಂಬೆರಸವನ್ನು ಬೆರೆಸಿ ಸೇವಿಸಿದರೆ ಆರೋಗ್ಯ ವೃದ್ಧಿಯಾಗುವುದು
*ಕಬ್ಬಿಣಾಂಶಗಳ ಕೊರತೆಯಿರುವ ಗರ್ಭಿಣಿಯವರು ಮತ್ತು ಮಕ್ಕಳು ಬಸಳೆ ಸೇವಿಸಿದರೆ ಕೊರತೆ ದೂರವಾಗುವುದು.

ಓಮ್‌ ಕಾಳು
*ಹೆಚ್ಚು ಊಟ ಮಾಡಿ ಅಜೀರ್ಣವಾದರೆ ಓಮ ವರದಾನ. ಅಜೀರ್ಣವಾದಾಗ, ಹಸಿವಿಲ್ಲದಾಗ ಉಪಯೋಗಕಾರಿ. ಅರ್ಧ ಟೀ ಚಮಚ ಓಮದ ಪುಡಿಯನ್ನು ಬಿಸಿನೀರಿನಲ್ಲಿ ಸೇವಿಸುವುದರಿಂದ ಅಜೀರ್ಣ ಸಂಬಂಧವಾಗಿ ಬರುವ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತದೆ
*ಓಮಿನ ಕಷಾಯ ಹೆಚ್ಚು ಪರಿಣಾಮಕಾರಿ. ಒಂದು ಹಿಡಿ ಓಮಿನ ಕಾಳನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಅದನ್ನು ಕಾಲು ಭಾಗಕ್ಕೆ ಇಳಿಸಿ ರುಚಿಗೆ ಬೇಕಾದಷ್ಟು ಉಪ್ಪು, ಹಾಕಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವು ಇನ್ನಿಲ್ಲದಂತಾಗುವುದು
*ರಾತ್ರಿ ಮಲಗುವ ವೇಳೆಯಲ್ಲಿ ಓಮ್‌ ಕಾಳಿನ ಪುಡಿ ಎರಡು ಚಮಚವನ್ನು ಮೂರು ದಿನ ಸೇವಿಸಿದರೆ ಅದು ಹೊಟ್ಟೆಯಲ್ಲಿನ ಕ್ರಿಮಿಗಳನ್ನು ಹೊರ ಹಾಕುತ್ತದೆ.

ಮಾಹಿತಿ: MY HOME Medicine

Comments are closed.