ಮಂಗಳೂರು : ಬಂಟರ ಸಂಘ, ಜಪ್ಪಿನ ಮೊಗರು ಇದರ ಬೆಳ್ಳಿ ಹಬ್ಬ ಸಂಭ್ರಮ ಇತ್ತೀಚಿಗೆ ನಡೆಯಿತು, ಬೆಳ್ಳಿ ಹಬ್ಬ ಸಂಭ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್ ಆಳ್ವ ನೆರವೇರಿಸಿದರು.
ಬೊಳ್ಯ ಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಜೆ.ಆರ್. ಲೋಬೋ, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ಆದಾನಿ ಗ್ರೂಪ್‌ನ್ಸ ಕಿಶೋರ್ ಆಳ್ವ, ಸಂಗೀತ ನಿರ್ದೇಶಕ ಗುರುಕಿರಣ್, ಸುರೇಶ್ ಶೆಟ್ಟಿ ಗುರ್ಮೆ, ಕರುಣಾಕರ ಆಳ್ವ, ಕೆ. ಪದ್ಮನಾಭ ಶೆಟ್ಟಿ ಪುಣೆ, ರಮೇಶ್ ಶೆಟ್ಟಿ ಜಪ್ಪು ಗುಡ್ಡೆ ಗುತ್ತು, ಕುತ್ತಾರು ಗುತ್ತು ಕೆ. ಸದಾಶಿವ ಶೆಟ್ಟಿ, ಜೆ. ಸುರೇಂದ್ರ ಹಳೆಮನೆ, ಬದಿಗುಡ್ಡೆ ಉದಯ ಚೌಟ, ಕೇಶವ ಅಂಗಡಿಮಾರ್, ಸಬಿತ ಆರ್. ಶೆಟ್ಟಿ, ಪುಸ್ಪರಾಜ್ ಶೆಟ್ಟಿ,ಬನತಡಿ, ಮಾದವ ನಾಕ್ ಅಡ್ಯಾರ್, ಅಬುಲ್ ರಮಾಫ್ ಪುತ್ತಿಗೆ ಮೊದಲಾದವರು ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷರು ಕುತ್ತಾರು ಗುತ್ತು ಶಶಿಧರ ಶೆಟ್ಟಿ, ನವೀನ್‌ಚಂದ್ರ ರೈ, ಅಧ್ಯಕ್ಷರು ಅನಿಲ್ ಶೆಟ್ಟಿ ಮನ್ಕುತೋಟ, ಸವಿತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ ಪ್ರಸ್ತಾಪಿಸಿ, ಸ್ವಾಗತಿಸಿದರು. ಪ್ರಕಾಶ್ ಮೇಲಾಂಟ ವರದಿ ವಾಚಿಸಿದರು. ಕಾರ್ಯದರ್ಶಿ ಹರೀಶ್ ಶೆಟ್ಟಿ ವಂದಿಸಿದರು. ಪುರುಶೋತ್ತಮ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
‘ಬಂಟ ರಜತ ವೈಭವ’
ಮರುದಿನ ನಡೆದ ‘ಬಂಟ ರಜತ ವೈಭವ’ ಸಮಾರಂಭದ ಉದ್ಘಾಟನೆಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ನೆರವೇರಿಸಿದರು.
ಮಾಲಾಡಿ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದರು. ಸರಕಾರದ ಮುಖ್ಯ ಸಜೇತಕ ಐವನ್ ಡಿ’ಸೋಜ ಮೇಯರ್ ಹರಿನಾಥ್, ಕೆ.ಪಿ. ಶೆಟ್ಟಿ,ಮೊಡಂಕಾಪುಗುತ್ತು. ಜಯರಾಮ ಶೇಖ, ಜಗನ್ನಾಥ ಶೆಟ್ಟಿ ಬಾಳ, ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ಚಂದ್ರಹಾಸ ಅಡ್ಯಂತಾಯ ರೈಲ್ವೆ ಸಲಹಾ ಸದಸ್ಯ, ರಾಜಗೋಪಾಲ ರೈ, ಕೆ. ಜಯರಾಜ್ ಬಿ. ರೈ, ಲಯನ್ ದೇವದಾಸ್ ಭಂಡಾರಿ, ಪ್ರಸಾದ್ ರೈ ಕಲ್ಲಿಮಾರ್ ಮೊದಲಾದವರು ವೇದಿಕೆಯಲ್ಲಿದ್ದರು.
ಸಂಘದ ಮಾಜಿ ಅಧ್ಯಕ್ಷ ಉಮೇಶ್ ಅಜೆಕಾರಿ ಸ್ವಾಗತಿಸಿ, ಹರೀಶ್ ಶೆಟ್ಟಿ ವಂದಿಸಿದರು. ಸುಖೇಶ್ ಚೌಟ ನಿರೂಪಿಸಿದರು.
ಸಮಾರೋಪ ಸಮಾರಂಭ
ಸಂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎ. ಸದಾನಂದ ಶೆಟ್ಟಿ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರುಗಳು ಸ್ಮರಣ ಸಂಚಿಕೆ ಬೊಳ್ಳಿ ತುಡರ್ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಅಭ್ಯಾಗತರಾಗಿ, ಶಾಸಕಿ ಶಕುಂತಲಾ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ಸಾಯಿರಾಥ ಗ್ರೂಪ್, ಸವಣೂರು ಕೆ., ಸೀತಾರಾಮ ರೈ, ಪ್ರವೀಣ್‌ಚಂದ್ರ ಆಳ್ವ, ಸಿ.ಎಸ್. ಭಂಡಾರಿ, ಪಿ. ಪ್ರವೀಣ್ ಆಳ್ವ, ಪ್ರದೀಪ್ ಕುಮಾರ್ ಶೆಟ್ಟಿ ಅಡ್ಯಾರ್, ವಿಠಲ ಆಳ್ವ ಕಾವೂರು, ನಿವೇದಿತಾ ಎನ್. ಶೆಟ್ಟಿ, ಸುರೇಂದ್ರ ಕಾಂಬ್ಳಿ, ಅಡ್ಯಾರ್‌ಗುತ್ತು, ಯಕ್ಷಗಾನ ಭಾಗವತ ಸತೀಶ್ ಶೆಟ್ಟಿಪಟ್ಲ ಮೊದಲಾದವರು ಭಾಗವಹಿಸಿದರು. ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ಮತ್ತು ಪ್ರಸನ್ನ ಬೈಲೂರವರ ಹಾಸ್ಯ ಸನ್ನಿವೇಶ ಜರಗಿತ್ತು. ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗೀತಾ ಮೆಲೋಡಿಯಸ್‌ರವರ ರಸಮಂಜರಿ ಕಾರ್ಯಕ್ರಮ ಜರಗಿತು. ಸರಿಗಮಪದನಿಸ ಖ್ಯಾತಿಯ ನಿಶಾಂತ್ ರೈ ಮಠಂತ ಬೆಟ್ಟುರಿಂದ ಹಾಡುಗಳಿಂದ ರಂಜಿಸಿದರು. ಜರಗಿದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮುಡಿಪು ಬಂಟರ ಸಂಘ (ಪ್ರಥಮ) ಕಂಕನಾಡಿ ಬಂಟರ ಸಂಘ (ದ್ವಿತೀಯ) ಗುರುಪುರ ಬಂಟರ ಸಂಘ (ತೃತೀಯ) ಹಾಗೂ ಜೆಪ್ಪು ಬಂಟರ ಸಂಘ (ಚತುರ್ಥ) ಪಾರಿತೋಷಕ ಪಡೆದರು. ಸಮಾರಂಭದಲ್ಲಿ ಆರು ಮಂದಿ ದಾನಿಗಳಿಗೆ, ಏಳು ಮಂದಿ ಮಾಜಿ ಮತ್ತು ಹಾಲಿ ಅಧ್ಯಕ್ಷರಿಗೆ, ೯ ಮಂದಿ ಮಾಜಿ ಕಾರ್ಯದರ್ಶಿಗಳಿಗೆ, 61 ಮಂದಿ ಸ್ಥಾಪಕ ಸದಸ್ಯರಿಗೆ ಸನ್ಮಾನಿಸಲಾಗಿತ್ತು.
ಪ್ರಕಾಶ್ ಮೇಲಾಂಟ್ ಸ್ವಾಗತಿಸಿ, ಕೃಷ್ಣ ಶೆಟ್ಟಿ ತಾರೇಮಾರು ವಂದಿಸಿದರು. ಕದ್ರಿ ನವನೀತ್ ಶೆಟ್ಟಿ, ನೀತೇಶ್ ಶೆಟ್ಟಿ ಎಕ್ಕಾರು, ಭಾರತಿ ಶೆಟ್ಟಿ ಮತ್ತು ಮಂಜುಳಾ ಶೆಟ್ಟಿ ನಿರೂಪಿಸಿದರು.
Comments are closed.