ಕರ್ನಾಟಕ

ಮನೆ ಮದ್ದಿನ ಬಳಕೆಯಿಂದ ಆರೋಗ್ಯಕರ ಜೀವನ ನಡೆಸಲು ಕೆಲವು ಮಾಹಿತಿ

Pinterest LinkedIn Tumblr

ಮಂಗಳೂರು: ಜೀರಿಗೆ ಅರಿಯದ ಜನರಿಲ್ಲ, ಇದಿಲ್ಲದೆ ರುಚಿರುಚಿಯಾದ ಅಡುಗೆಯಿಲ್ಲ. ಅಜೀರ್ಣದಿಂದ ಭೇದಿ ಆಗುತ್ತಿದ್ದರೆ ಹುರಿದ ಅಕ್ಕಿ , ಜೀರಿಗೆ ಪುಡಿ ಹಾಗೂ ಸಕ್ಕರೆ ಅಥವಾ ಉಪ್ಪು ಹಾಕಿ ಗಂಜಿ ತಯಾರಿಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
2 ಚಮಚ ಹುರಿದ ಜೀರಿಗೆಯನ್ನು 1 ದೊಡ್ಡ ಲೋಟ ನೀರು ಹಾಕಿ ಕುದಿಸಿ, ಅರ್ಧ ಲೋಟಕ್ಕೆ ಇಳಿಸಿ ಅದಕ್ಕೆ ಉಪ್ಪು – ತುಪ್ಪ ಬೆರೆಸಿ ಸೇವಿಸಿದರೆ, ಹೊಟ್ಟೆಉಬ್ಬರ ಹಾಗೂ ನೋವು ಗುಣವಾಗುತ್ತದೆ.
ಹೊಟ್ಟೆ ನೋವು, ವಾಂತಿ ಇದ್ದಾಗ 1 ಚಮಚ ಜೀರಿಗೆ , 1 ಚಮಚ ಏಲಕ್ಕಿ ಪುಡಿಯನ್ನು 1 ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಬೇಕು.ತಣ್ಣಗಾದ ನಂತರ ಅದಕ್ಕೆ ಸಕ್ಕರೆ, ನಿಂಬೆ ಪಾನಕ ಬೆರೆಸಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.
ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರು ಸೇರಿಸಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ.
ನೆನೆಸಿದ ಮೆಂತ್ಯದ ಬೀಜ, ಜೀರಿಗೆ, ಉಪ್ಪು ಹಾಗೂ ಖಾರ ಹಾಕಿ ಚಟ್ನಿ ತಯಾರಿಸಿ ಚಪಾತಿ ಜೊತೆ ಸೇವಿಸಿ, ನಂತರ ಹಾಲನ್ನು ಕುಡಿದರೆ ಒಂದು ವಾರದಲ್ಲಿ ಎದೆ ಹಾಲು ಹೆಚ್ಚಾಗುವುದು.

ಆಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಪರಿಹಾರ :
ಪ್ರಕೃತಿ ಚಿಕಿತ್ಸಾಲಯಗಳಲ್ಲಿ ದೊರೆಯುವ ಬೆಚ್ಚಗಿನ ಬಿಗಿ ಪಟ್ಟಿಯನ್ನು ಎದೆಗೆ ಕಟ್ಟಿಕೊಳ್ಳಿ.
ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ನಿತ್ಯ ಕುಡಿಯಿರಿ.
ಆಗ ತಾನೇ ಕುದಿಸಿದ ನೀರಿಗೆ ಎರಡು ಹನಿ ನೀಲಗಿರಿ ಎಣ್ಣೆ ಹಾಕಿ ಬರುವ ಹವೆಯನ್ನು ತೆಗೆದುಕೊಂಡು ಉಸಿರಾಡಿ.
ಒಂದು ವೇಳೆ ದೀರ್ಘ ಕಾಲದ ಆಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರೆ, ಜಲನೇತಿ,ಸೂರ್ಯ ನೇತಿ ಪ್ರಾಣಾಯಾಮಗಳನ್ನು ಮಾಡಿ.
ಪ್ರಕೃತಿ ಚಿಕಿತ್ಸಕರನ್ನು ಭೇಟಿ ಮಾಡಿ ಆಹಾರ ಕ್ರಮ ರೂಡಿಸಿಕೊಳ್ಳಿ.

ಉತ್ತಮ ಆರೋಗ್ಯಕ್ಕೆ ಬೆಳಗ್ಗೆ 30 ನಿಮಿಷದ ನಡಿಗೆ :
ನಡಿಗೆ ಎಂಬುವುದು ಒಂದು ವ್ಯಾಯಾಮ. ಇದರ ಸಹಾಯದಿಂದ ದೇಹದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು.ಮುಂಜಾನೆ ಪ್ರಶಾಂತತೆ ಇರುವ ವೇಳೆ ಸುಮಾರು 30 ನಿಮಿಷವಾದರೂ ನಡಿಗೆ ಮಾಡಬೇಕು.ನಡಿಗೆ ಆರಂಭಿಸುವ ಮುನ್ನ ಲಿಂಬೆ ರಸ ಬೆರೆಸಿದ ಬಿಸಿ ನೀರನ್ನು ಕುಡಿದು ನಿಮ್ಮನ್ನು ನೀವು ಆಹ್ಲಾದವಾಗಿರಿಸಿಕೊಳ್ಳಿ,ನಡಿಗೆ ವೇಳೆ ವ್ಯಾಯಾಮ,ಓಟ,ಯೋಗ ಮೊದಲಾದವುಗಳನ್ನು ಮಾಡಿದಲ್ಲಿ ಇನ್ನೂ ಉತ್ತಮ.ನಡಿಗೆ ಮಾಡದಿದ್ದಲ್ಲಿ ಕೊಬ್ಬು, ಸ್ತೂಲಕಾಯತೆ,ಸ್ನಾಯು ಸಂಬಂಧಿ ರೋಗಗಳು,. ಆಸಿಡಿಟಿ ನಿಮ್ಮನ್ನು ಕಾಡಲಿದೆ.

ನೆರೆ ಕೂದಲಿಗೆ ಮೆಂತ್ಯೆ ಚೂರ್ಣ :
ಬೆಣ್ಣೆಗೆ ಮೆಂತ್ಯದ ಚೂರ್ಣವನ್ನು ಬೆರೆಸಿ ತಲೆಗೆ ಹಚ್ಚುತಿದ್ದರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು.ಇದನ್ನು ಹಚ್ಚಿಕೊಳ್ಳುವ ದಿನಗಳಲ್ಲಿ ತಣ್ಣೀರಿನಿಂದಲೇ ಸ್ನಾನ ಮಾಡಬೇಕು. ಮೆಂತ್ಯವನ್ನು ಹರಳೆಣ್ಣೆಯೊಂದಿಗೆ ಹಚ್ಚಿಕೊಂಡು ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ. ಹಾಗೂ ಕೂದಲು ಕಪ್ಪು ಬಣ್ಣ ಹೊಂದಿ ಕಾಂತಿಯುತವಾಗಿ ಮತ್ತು ನೀಳವಾಗಿ ಬೆಳೆಯುತ್ತದೆ.
ನೆಲ್ಲಿಕಾಯಿಯನ್ನು ಹಲವಾರು ವಿಧಗಳಲ್ಲಿ ಊಟದಲ್ಲಿ ಸೇವಿಸುತ್ತಿದ್ದರೆ ಕೂದಲು ಉದುರುವುದು ನಿಲ್ಲುತ್ತದೆ.
ನೆಲ್ಲಿಕಾಯಿಯ ರಸದ ತೈಲವನ್ನು ಕೊಬ್ಬರಿ ಎಣ್ಣೆಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದಿಲ್ಲ, ಹಾಗೂ ಕೂಡಲ ಕಾಂತಿ ಹೆಚ್ಚುವುದು, ಜೊತೆಗೆ ತಲೆಹೊತ್ತು ಉದುರುವುದು ಕಡಿಮೆಯಾಗುತ್ತದೆ.
ಅರಿಶಿನ ಪುಡಿಯನ್ನು ತಿಕ್ಕಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲು ಚೆನ್ನಾಗಿ ಬೆಳೆಯುತ್ತದೆ.
ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರೊ ಎಣ್ಣೆಯಲ್ಲಿ ಕಲಸಿ ತಲೆಗೆ ಹಚ್ಚಿ, ಸ್ನಾನ ಮಾಡುತ್ತಿದ್ದರೆ ಕೂದಲು ಉದುರುವುದು, ಹೊತ್ತಿನ ಸಮಸ್ಯೆ ಇನ್ನಿಲ್ಲವಾಗುತ್ತದೆ.

ಕಾಲಿನ ಹಿಮ್ಮಡಿ ಒಡಕು ನಿವಾರಣೆಗೆ :
ಬಿಸಿ ನೀರಿಗೆ ಸ್ವಲ್ಪ ಶಾಂಪೂ ಬೆರೆಸಿ ಅದರಲ್ಲಿ ಪಾದವನ್ನಿಡಿ.
ಅರಿಶಿನ ಪುಡಿಗೆ ಆಲಿವ್ ಆಯಿಲ್ ಸೇರಿಸಿ ಪೇಸ್ಟ್ ಸಿದ್ದಪಡಿಸಿಕೊಳ್ಳಿ, ನಂತರ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಳ್ಳಿ.
ವ್ಯಾಕ್ಸ್ ಮತ್ತು ತೆಂಗಿನಎಣ್ಣೆ ಸೇರಿಸಿ ಮಾಡಿದ ಮಿಶ್ರಣವನ್ನು ನೀವು ಪಾದಗಳಿಗೆ ಹಚ್ಚಬಹುದು. ಇದು ಪಾದಗಳ ಉರಿಯನ್ನು ಕಡಿಮೆ ಮಾಡುತ್ತದೆ.
ಗ್ಲಿಸರಿನ್ ಹಾಗೂ ರೋಸ್ ವಾಟರ್ ಮಿಶ್ರಣವನ್ನು ಸಿದ್ದಮಾಡಿಕೊಳ್ಳಿ, ಪ್ರತಿದಿನ ರಾತ್ರಿ ಪಾದಗಳಿಗೆ ಹಚ್ಚಿ ನಾಲ್ಕೈದು ದಿನದಲ್ಲಿ ಪರಿಣಾಮ ಕಾಣುತ್ತದೆ.

ಜ್ನಾಪಕ ಶಕ್ತಿ ಹೆಚ್ಚಲು.
ಒಂದು ಬಟ್ಟಲು ಮಾವಿನ ಹಣ್ಣಿನ ರಸಕ್ಕೆ ಅಷ್ಟೇ ಪ್ರಮಾಣದ ಹಾಲು ಬೆರೆಸಿ ಜೇನುತುಪ್ಪದೊಂದಿಗೆ ದಿನವೂ ಒಂದು ಸ್ಪೂನಿನಷ್ಟು ಸೇವಿಸುತ್ತಿದ್ದರೆ ಜ್ನಾಪಕ ಶಕ್ತಿ ಹೆಚ್ಚುವುದು.
ಮೆಂತ್ಯದ ಸೊಪ್ಪು ಮತ್ತು ಮೂಲಂಗಿಯನ್ನು ಸಣ್ಣಗೆ ಹೆಚ್ಚಿ,ಮಿಶ್ರಣ ಮಾಡಿ ಸಾಕಷ್ಟು ಉಪ್ಪು ಬೆರೆಸಿ, ಮೆಣಸು ಮತ್ತು ಜೀರಿಗೆಯ ಒಗ್ಗರಣೆ ಹಾಕಿ ಸೇವಿಸುವುದರಿಂದ ಜ್ನಾಪಕ ಶಕ್ತಿ ವೃದ್ದಿಸುವುದು.
ಒಂದು ಟೀ ಚಮಚದಷ್ಟುಕೊತ್ತಂಬರಿ ಸೊಪ್ಪಿನ ರಸಕ್ಕೆ ಇನ್ನೊಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಂಡು ಪ್ರತಿ ರಾತ್ರಿ ಊಟವಾದ ನಂತರ ಸೇವಿಸಬೇಕು.
ಒಂದು ಚೂರು ಹಸಿ ಶುಂಠಿ ಹಾಗೂ ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆಯ ರುಚಿ ಹೆಚ್ಚುವುದರ ಜೊತೆಗೆ ಜ್ನಾಪಕ ಶಕ್ತಿಯೂ ಹೆಚ್ಚುವುದು.
ಸೇಬುಹಣ್ಣನ್ನು ಊಟ ಆದ ನಂತರ ಸೇವಿಸುವುದರಿಂದಲೂ ಜ್ನಾಪಕಶಕ್ತಿ ಹೆಚ್ಚುವುದು.
ಮೂರು ಚಮಚ ನೆಲ್ಲಿಕಾಯಿ ರಸದೊಂದಿಗೆ ಜೇನುತುಪ್ಪ ಬೆರೆಸಿ ದಿನವೂ ಸೇವಿಸುತ್ತಿದ್ದರೆ ಮೆದುಳಿನ ಕಾಯಿಲೆ ದೂರ ಆಗಿ ಜ್ನಾಪಕ ಶಕ್ತಿ ಹೆಚ್ಚುವುದು.

ಸಾಮಾನ್ಯವಾಗಿ ನೀವು ಮಾಡಬಹುದಾದ ವ್ಯಾಯಾಮಗಳು :
ಹಲವು ಮಹಡಿಗಳಲ್ಲಿ ನೀವು ಕೆಲಸ ಮಾಡುವುದಾದರೆ ಆದಷ್ಟು ಎಸ್ಕಾಲಟರ್ ಅಥವಾ ಲಿಫ್ಟ್ ಗಿಂತ ಮೆಟ್ಟಿಲು ಬಳಸಿ.
ತುಂಬಾ ಹೊತ್ತು ಫೋನ್ ಮಾಡುವುದಾದರೆ ಓಡಾಡಿಕೊಂಡು ಮಾತಾಡಿ.
ಕುಳಿತಲ್ಲೆ ಕೆಲಸ ಮಾಡುವಿರಾದರೆ ಆಗಾಗ ಓಡಾಡಿಕೊಂಡು ಬನ್ನಿ.
ಪ್ರತಿ ಒಂದು ಗಂಟೆಗೂ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಸ್ವಲ್ಪ ಜಾಸ್ತಿ ದೂರ ಓಡಾಡಿಕೊಂಡು ಬನ್ನಿ.
ಕಾಲನ್ನು ಸುಮ್ಮನೆ ಮೇಲೆತ್ತಿ ಹಾಗೇ ಸ್ವಲ್ಪ ಹೊತ್ತು ಇರಿ.
ಎರಡು ಕೈಗಳನ್ನು ಹಿಂದಕ್ಕೆ ಕುರ್ಚಿಗೆ ಆಧರಿಸಿ ಹಿಡಿದು ಡಿಪ್ಸ್ ತೆಗೆಯಿರಿ.
ಊಟದ ಬ್ರೇಕ್ ನಲ್ಲಿ ಹೆಚ್ಚೆಚ್ಚು ಓಡಾಡಿ.
ಮನೆಗೆ ವಾಪಸಾಗುವಾಗ ಜಾಗ್ ಮಾಡಿ, ರನ್ ಮಾಡಿ.

ತಳಪಾದಕ್ಕೆ ಈರುಳ್ಳಿ ಕಟ್ಟಿ ಮಲಗಿದರೆ ಏನೆಲ್ಲಾ ಲಾಭಗಳಿವೆ :
ಈರುಳ್ಳಿಯನ್ನು ತಳಪಾದಕ್ಕೆ ವೃತ್ತಾಕಾರವಾಗಿ ಕತ್ತರಿಸಿ ಕಟ್ಟಿಕೊಂಡರೆ ದೇಹದೊಳಗೆ ವಿಷಕಾರಿ ಅಂಶ ಪ್ರವೇಶಿಸುವುದಿಲ್ಲ.
ಈ ಉಪಾಯದಿಂದ ಶೀತ ಕೂಡ ಕಡಿಮೆಯಾಗುತ್ತದೆ.
ರಾತ್ರಿ ಈ ಉಪಾಯ ಮಾಡಿದರೆ ಕಿವಿನೋವು ಶಮನವಾಗುತ್ತದೆ.
ಈ ಉಪಾಯದಿಂದ ಹೊಟ್ಟೆಯೊಳಗಿನ ಆಮ್ಲ ತೆಗೆದು ಹಾಕುತ್ತದೆ.
ಇದರಿಂದ ಊದಿಕೊಂಡಿರುವ ಗ್ರಂಥಿಯು ಮೊದಲಿನ ಸ್ಥಿತಿಗೆ ಬರುತ್ತದೆ.
ಕಾಲಿನ ದುರ್ವಾಸನೆ ನಿವಾರಣೆಗೂ ಇದು ಉತ್ತಮ.
ಹೊಟ್ಟೆ ಸೋಂಕು, ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ.

ಮೂತ್ರ ರೋಗ ನಿವಾರಣೆಗೆ :
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಜೇನುತುಪ್ಪವನ್ನು ಸ್ವಲ್ಪ ಸ್ವಲ್ಪ ಸೇವಿಸುತ್ತಿದ್ದರೆ ಬಹು ಮೂತ್ರ ರೋಗ ಕಡಿಮೆಯಾಗುವುದು.
ಎಳನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಬಹುಮೂತ್ರ ರೋಗ ನಿವಾರಣೆ ಆಗುವುದರ ಜತೆಗೆ ಮೂತ್ರ ವಿಸರ್ಜನೆ ಸಲೀಸಾಗಿ ಆಗುವುದು.
ಬಿಳಿ ದ್ರಾಕ್ಷಿಯನ್ನು ತಿನ್ನುವುದರಿಂದ ಉರಿ ಮೂತ್ರ ರೋಗ ಕಡಿಮೆಯಾಗುವುದು.
ಬಾಳೆಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಸೇರಿಸಿ ಕುಡಿದರೆ ಮೂತ್ರ ವಿಸರ್ಜನೆಯ ಅಡಚಣೆ ನಿವಾರಣೆಯಾಗುವುದು.ಜತೆಗೆ ಮೂತ್ರಕೋಶ, ಮೂತ್ರನಾಳದಲ್ಲಿ ಯಾವ ತೊಂದರೆಯೂ ಉಂಟಾಗದು.
ಚಿಟಿಕೆ ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ, ಎಳನೀರಿನೊಂದಿಗೆ ಕುಡಿದರೆ ಮೂತ್ರ ಕಟ್ಟುವಿಕೆ ಸಡಿಲವಾಗುವುದು.
ಮೊಸರನ್ನಕ್ಕೆ ಬೆಲ್ಲ ಮತ್ತು ಹುರಿದ ಕರಿಮೆಣಸು ಪುಡಿಯನ್ನು ಸೇರಿಸಿ, ಊಟ ಮಾಡುವುದರಿಂದ ಮೂತ್ರ, ಗುದದ್ವಾರದ ಉರಿ ಕಡಿಮೆ ಆಗುವುದಲ್ಲದೆ, ತೊಂದರೆ ಇಲ್ಲದೆ ಮಲ – ಮೂತ್ರ ವಿಸರ್ಜನೆಯಾಗುವುದು.
ಕಬ್ಬಿನ ಹಾಲು, ಎಳನೀರು, ಹಸಿ ಶುಂಠಿ ರಸ, ನಿಂಬೆರಸ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಕುಡಿಯುವುದರಿಂದ ಮೂತ್ರ ಭಾದೆ ಇಲ್ಲದಂತಾಗುವುದು.
ಕುದಿಸಿ ಆರಿಸಿದ ನೀರು ಕುಡಿಯುವುದರಿಂದಲೂ ಉರಿ ಮೂತ್ರ ರೋಗ ನಿವಾರಣೆ ಆಗುವುದು.

ಉತ್ತಮ ಆರೋಗ್ಯಕ್ಕೆ ಸೇಬು :
ಸೇಬಿನ ಹಣ್ಣನ್ನು ಪ್ರತಿನಿತ್ಯ ಊಟವಾದ ನಂತರ ಸೇವಿಸುವುದನ್ನು ರೂಢಿ ಮಾಡಿಕೊಂಡರೆ ನಿಮ್ಮ ಆರೋಗ್ಯ ವೃದ್ದಿಸುತ್ತದೆ.
ಸೇಬಿಗೆ ರಕ್ತವನ್ನು ಶುದ್ದಿಕರಣ ಮಾಡುವ ಗುಣವಿರುವುದರಿಂದ ಮಲಗುವ ಮುನ್ನ ಇದನ್ನು ತಿಂದರೆ ಉತ್ತಮ.
ಸೇಬು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ, ಹಾಗೂ ಹೃದಯವನ್ನು ಗಟ್ಟಿಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.
ಸೇಬು ನಮ್ಮ ದೇಹದಲ್ಲಿರುವ ಮೂಳೆ ಮತ್ತು ಸ್ನಾಯುಗಳನ್ನು ಗಟ್ಟಿಗೊಳಿಸಿ ಶಕ್ತಿಯನ್ನು ನೀಡುತ್ತದೆ,ಇದರಲ್ಲಿ ಉತ್ತಮ ಕ್ಯಾಲ್ಶಿಯಂ ಗುಣವಿರುವುದರಿಂದ ಮಕ್ಕಳು ಮತ್ತು ವಯಸ್ಸಾದವರು ತಪ್ಪದೇ ತಿನ್ನುವುದರಿಂದ ರೂಢಿ ಮಾಡಿಕೊಳ್ಳಬೇಕು.
ಸೇಬನ್ನು ಪ್ರತಿನಿತ್ಯ ಸೇವಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

Comments are closed.