ಕರ್ನಾಟಕ

ಅನ್ನ ದಾನಕ್ಕಿಂತ ಶ್ರೇಷ್ಠ ದಾನ ರಕ್ತದಾನ ಇದು ಈಗಿನ ಮಾತು, ಅದರೆ ಇದರ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆ ತಿಳಿಯಿರಿ.

Pinterest LinkedIn Tumblr

ಮಂಗಳೂರು: ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ ಎಂಬುದು ಹಳೆಯ ಮಾತು. ಇಂದಿನ ಪರಿಸ್ಥಿತಿಯಲ್ಲಿ ರಕ್ತದಾನಕ್ಕಿಂತ ದೊಡ್ಡ ದಾನ ಮತ್ತೊಂದು ಇಲ್ಲ ಎಂದು ಹೇಳಬಹುದು. ಅನ್ನ ಬೇಕಾದರೆ ಯಾರಾದರೂ ನೀಡುತ್ತಾರೆ. ಆದರೆ ರಕ್ತ ನೀಡಲು ಯಾರೂ ಮುಂದೆ ಬರುವುದಿಲ್ಲ. ಕಾರಣ ರಕ್ತದಾನದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯ ಭಯ, ತಪ್ಪು ತಿಳುವಳಿಕೆಗಳೇ ಹೆಚ್ಚು. ಅಂತಹ ತಪ್ಪು ಕಲ್ಪನೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

1.ಒಬ್ಬ ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತವಿದ್ದು, ರಕ್ತದಾನಕ್ಕೆ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರವೇ ದಾನಿಯಿಂದ ಸ್ವೀಕರಿಸಲಾಗುತ್ತದೆ. ಇದರಿಂದ ದಾನಿಗೆ ಯಾವುದೇ ಅಪಾಯವಿಲ್ಲ.
2.ರಕ್ತದಾನದಿಂದ ಏಡ್ಸ್ ಸೊಂಕು ತಗಲುತ್ತದೆ ಎಂಬ ಭಯ ಕೆಲವರಲ್ಲಿ. ಇಲ್ಲಿ ರಕ್ತದಾನದಿಂದ ಅಲ್ಲ ಸೂಜಿಯನ್ನು ಹೊಸದು ಬಳಸದೇ ಇದ್ದರೆ ಸೊಂಕು ಬರಬಹುದು. ಇಂದು ಬಹಳಷ್ಟು ಕಡೆ ಹೊಸ ಸೂಜಿಗಳನ್ನು ಬಳಸುತ್ತಾರೆ.
3.ಮಹಿಳೆಯರು ರಕ್ತದಾನ ಮಾಡಬಾರದು ಎಂದು ಹೇಳುತ್ತಾರೆ. ಪೀರಿಯಡ್ಸ್ ಸಮಯದಲ್ಲಿ ರಕ್ತವನ್ನು ಕಳೆದುಕೊಳ್ಳುತ್ತಾರೆ. ರಕ್ತಹೀನತೆ ಸಮಸ್ಯೆ ಇಲ್ಲದ, ಆರೋಗ್ಯವಂತ ಯಾವ ಮಹಿಳೆ ಬೇಕಾದರೂ ರಕ್ತದಾನ ಮಾಡಬಹುದು.
4.40 ವರ್ಷದ ನಂತರ ರಕ್ತದಾನ ಮಾಡಬಾರದು ಎಂದು ಕೆಲವರ ನಂಬಿಕೆ. ಆದರೆ ಅರವತ್ತು ವರ್ಷದವರಗೂ ಅರೋಗ್ಯವಾಗಿರುವ ಯಾರೋ ಆದರೂ ತಮ್ಮ ರಕ್ತವನ್ನು ದಾನ ಮಾಡಬಹುದು.
5.ರಕ್ತದಾನ ಮಾಡಿದರೆ ತುಂಬಾ ನೋವಾಗುತ್ತದೆ. ಎಂದು ಭಯ ಪಡುತ್ತಾರೆ. ಆದರೆ ಯಾವುದೇ ಭಯ ಪಡಬೇಕಾಗಿಲ್ಲ. ಸ್ವಲ್ಪ ಸಮಯದ ವಿಶ್ರಾಂತಿ ಪಡೆದರೆ ಸಾಕು.
6.ರಕ್ತದಾನ ಮಾಡಿದರೆ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ ಎಂಬುದು ತುಂಬಾ ಜನರ ಭಾವನೆ. ಆದರೆ 48 ಗಂಟೆಗಳಲ್ಲಿ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನದಿಂದ ದೇಹದಲ್ಲಿ ಹಳೆಯ ರಕ್ತ ಹೋಗಿ ಹೊಸ ರಕ್ತ ಉತ್ಪಾದನೆಯಾಗುತ್ತದೆ.
7.ವರ್ಷಕ್ಕೆ ಒಂದು ಬಾರಿ ಮಾತ್ರ ರಕ್ತದಾನ ಮಾಡಬೇಕು ಎಂಬುದು ಕೆಲವರ ವಾದ. ಆದರೆ ಆರೋಗ್ಯವಂತ ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
8.18ರಿಂದ 60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು. ವ್ಯಕ್ತಿಯ ತೂಕ 45 ಕಿ.ಗ್ರಾಂ. ಗಿಂತ ಹೆಚ್ಚಿರುವವರು ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ.ಗಿಂತ ಹೆಚ್ಚಿರುವವರು ರಕ್ತದಾನಕ್ಕೆ ಅರ್ಹರು.
9.ರಕ್ತದಾನದಿಂದ ರಕ್ತದ ಅವಶ್ಯಕತೆಯಿರುವವರಿಗೆ ಮಾತ್ರ ಲಾಭವಾಗುವುದಿಲ್ಲ ಜೊತೆಗೆ ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳ ಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ. ಹೃದಯಾಘಾತದ ಸಂಭವ ಕಡಿಮೆ ಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ ಮತ್ತು ಆತ ಇನ್ನಷ್ಟು ಆರೋಗ್ಯ ವಂತನಾಗಿರಲು ಸಾಧ್ಯವಾಗುತ್ತದೆ. ಹಾಗಾಗಿ ರಕ್ತದಾನ ಮಾಡಿ ಆರೋಗ್ಯವಂತರಾಗಿ…

ಕೃಪೆ : ap2tg.com

Comments are closed.