ಕರ್ನಾಟಕ

ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ ಹೊರಗೋಡೆ ಕುಸಿತ: ಭಕ್ತರಿಗೆ  ಒಳಹೋಗಲು ಭಯ

Pinterest LinkedIn Tumblr


ಮಂಡ್ಯ(ಜ.22): ಜಿಲ್ಲೆಯ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥನ ಭಕ್ತರು ಆತಂಕಗೊಂಡಿದ್ದಾರೆ. ದೇವಾಲಯದ ಒಳಗಡೆ ಹೋಗಲು ಪೂಜೆ ಸಲ್ಲಿಸಲು ಕೂಡ ಭಯಪಡುವಂತಾಗಿದೆ. ಯಾಕಂದರೆ ಇತ್ತೀಚೆಗೆ ದೇವಾಲಯದ ಹೊರಗೋಡೆಯ ಒಂದೊಂದು ಭಾಗ ದಿನೇ ದಿನೇ ಕುಸಿಯುತ್ತಿದೆ. ಹೀಗೆ ದೇಗುಲ ಗೋಡೆ ಕುಸಿಯುತ್ತಿದ್ದು ಶ್ರೀರಂಗನ ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಏಕಾಏಕಿ ಶ್ರೀರಂಗನಾಥ ದೇವಾಲಯ ಗೋಡೆ ಕುಸಿಯಲು ದೇಗುಲದ ಹಿಂಭಾಗ ರೈಲ್ವೆ ಡಬ್ಲಿಂಗ್ ಟ್ರ್ಯಾಕ್ ನಿರ್ಮಾಣ ಹಾಗೂ ಮದ್ದಿನ ಮನೆಯ ನಿರ್ಮಾಣಕ್ಕಾಗಿ ನೆಲದಲ್ಲಿ ಡ್ರಿಲ್ಲಿಂಗ್ ಯಂತ್ರ ಬಳಸಿ ಕಾಮಗಾರಿ ಆರಂಭಿಸಿದ್ದಾರೆ. ಇದರ ಸದ್ದಿಗೆ ದೇವಾಲಯದ ಗೋಡೆ ಕುಸಿಯುತ್ತಿರಬಹುದೆಂದು ಸ್ಥಳೀಯರ ಆರೋಪವಾಗಿದೆ.
ರೈಲ್ವೆ ಡಬ್ಲಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಯಿಂದ ಶ್ರೀರಂಗನಾಥನಿಗೆ ಕಂಟಕ ಬಂದೊದಗಿದೆ. ಈಗಾಗಲೇ ದೇವಾಲಯದ ಗೋಪುರ ಕಳಸ ಬಿದ್ದಿದೆ. ಜೊತೆಗೆ ದೇವಾಲಯದ ರಕ್ಷಣಾ ಗೋಡೆ ಕುಸಿಯುತ್ತಿರೋದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ದೇವಾಲಯ ಕುಸಿತಕ್ಕೆ ರೈಲ್ವೆ ಡಬ್ಲಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಯೋ ಅಥವಾ ಇನ್ನಾವುದೋ ಕಾರಣ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪತ್ತೆ ಮಾಡಿ ಭಕ್ತರ ಆತಂಕವನ್ನು ದೂರ ಮಾಡಬೇಕಾಗಿದೆ.

Comments are closed.