ಅಂತರಾಷ್ಟ್ರೀಯ

ಅಮೆರಿಕಾ ಆರ್ಥಿಕ ದುಸ್ಥಿತಿಗೆ ದುಬಾರಿ ಯುದ್ಧಗಳು ಕಾರಣ: ಜ್ಯಾಕ್ ಮಾ

Pinterest LinkedIn Tumblr


ಬೀಜಿಂಗ್ (ಜ.22): ದೇಶದ ಆರ್ಥಿಕ ದುಸ್ಥಿತಿಗೆ ಅಮೆರಿಕಾವು ತನ್ನ ‘ದುಬಾರಿ ಯುದ್ಧ’ಗಳನ್ನು ದೂಷಿಸಬೇಕೇ ಹೊರತು, ಚೀನಾವನ್ನಲ್ಲವೆಂದು ಇ-ಕಾಮರ್ಸ್ ದೈತ್ಯ ಅಲಿಬಾಬಾ ಕಂಪನಿಯ ಸ್ಥಾಪಕ ಜ್ಯಾಕ್ ಮಾ ಹೇಳಿದ್ದಾರೆ.
ಚೀನಾ ಮತ್ತು ಅಮೆರಿಕಾ ನಡುವೆ ವ್ಯಾಪಾರ-ಯುದ್ಧ ನಡೆಯುವ ಸಾಧ್ಯತೆಯನ್ನು ಅಲ್ಲಗಳೆದ ಜ್ಯಾಕ್ ಮಾ, ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತವಾಗಿ ಯೋಚಿಸುವವರು ಎಂದು ಹೇಳಿದ್ದಾರೆ.
ಟ್ರಂಪ್ ಅವರನ್ನು ಭೇಟಿಯಾಗಿರುವ ಜ್ಯಾಕ್ ಮಾ, ಅಮೆರಿಕಾದಲ್ಲಿ ಮಿಲಿಯನ್ನ’ಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹಾಗೂ ಅಮೆರಿಕನ್ ಉತ್ಪನ್ನಗಳಿಗೆ ವಿಶಾಲವಾದ ಮಾರುಕಟ್ಟೆ ಒದಗಿಸುವುದಾಗಿ ಹೇಳಿದ್ದಾರೆ.
ಅಮೆರಿಕಾದ ಆರ್ಥಿಕ ಸಮಸ್ಯೆಗಳಿಗೆ ಚೀನಾವನ್ನು ಹೊಣೆ ಮಾಡುವುದು ಸಮಂಜಸವಲ್ಲವೆಂದು ಜ್ಯಾಕ್ ಮಾ ಹೇಳಿದ್ದಾರೆ

Comments are closed.