ಕರ್ನಾಟಕ

ಅತ್ಯಾಚಾರ ಪ್ರಕರಣ: ಬಿಜೆಪಿಯ ವೆಂಕಟೇಶ್ ಮೌರ್ಯ ಬಂಧನವಾಗಿಲ್ಲ

Pinterest LinkedIn Tumblr


ಕಲಬುರಗಿ (ಜ.21): ಕಲಬುರಗಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಾಕಾರಿಣಿಯಲ್ಲಿ ಬಿಜೆಪಿ ಎಸ್’ಸಿ ಮೋರ್ಚಾದ ಸದಸ್ಯ ವೆಂಕಟೇಶ್ ಮೌರ್ಯ ಬಂಧನವಾಗಿದೆ ಎಂದು ಹೇಳಲಾಗಿತ್ತು. ಆದರೆ ಬಿಜೆಪಿ ಮುಖಂಡ ವೆಂಕಟೇಶ್ ಬಂಧನವಾಗಿಲ್ಲ ಎಂದು ಪೊಲೀಸರು ಸುವರ್ಣ ನ್ಯೂಸ್’ಗೆ ತಿಳಿಸಿದ್ದಾರೆ.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ಸ್ಪಷ್ಟನೆ ನೀಡಿದ್ದಾರೆ. ಕೋರ್ಟ್ ಡೈರೆಕ್ಷನ್ ಕಾಪಿ ತೋರಿಸಿದ ಹಿನ್ನೆಲೆ ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
2010ರಲ್ಲಿ ಮಹಿಳೆಯೊಬ್ಬರನ್ನು ವಂಚಿಸಿದ್ದ ಆರೋಪದ ಅಡಿಯಲ್ಲಿ ವೆಂಕಟೇಶ್ ಮೌರ್ಯ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅನುದಾನದ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಧ ಮೇಲೆ ವೆಂಕಟೇಶ್ ಮೌರ್ಯ ಬಿಎಸ್ಪಿಯಿಂದ ಬಿಜೆಪಿಗೆ ಸೇರಿದ್ದರು.

Comments are closed.