ಕರ್ನಾಟಕ

ರೋಹಿತ್ ವೇಮುಲ ಸಾವಿಗೆ ದೇಶಾದ್ಯಂತ ಕಣ್ಣೀರು..!, ಅಭಿಷೇಕ್ ಸಾವು ಮಾತ್ರ ಅನಾಥ..!:

Pinterest LinkedIn Tumblr


ಚಿಕ್ಕಮಗಳೂರು(ಜ.18): ಬಲಪಂಥಿಯರ ಪ್ರಾಣಕ್ಕೆ ಬೆಲೆ ಇಲ್ವಾ? ಯಾಕಂದ್ರೆ ಹೈದ್ರಾಬಾದ್ ವಿವಿಯಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಾಗ, ದೇಶದ ಗಣ್ಯಾತಿಗಣ್ಯರೆಲ್ಲ ಬಂದು ಸಾಂತ್ವನ ಹೇಳಿದ್ದರು. ಸಿದ್ದರಾಮಯ್ಯ ಕೂಡ ಕಂಬಿನಿ ಮಿಡಿದಿದ್ದರು. ಆದರೆ ಶೃಂಗೇರಿಯ ಜೆ ಸಿ ಬಿ ಎಂ ಕಾಲೇಜ್​ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣಕ್ಕೂ ಸಣ್ಣ ಪ್ರತಿಕ್ರಿಯೆಯೂ ಇಲ್ಲ. ದೊಡ್ಡ ನಾಯಕರ ದಿವ್ಯ ಮೌನಕ್ಕೆ ಏನು ಕಾರಣ ಏನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಅಭಿಷೇಕ್, ವಯಸ್ಸು 21. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಜೆ ಸಿ ಬಿ ಎಂ ಕಾಲೇಜ್’​ನಲ್ಲಿ ಬಿಕಾಂ ಫೈನಲ್ ಇಯರ್ ಓದುತ್ತಿದ್ದ ಹುಡುಗ. ಈತನ ಮೇಲೊಂದು ಎಫ್​’ಐಆರ್ ಆದ ಕಾರಣಕ್ಕೇ, ತನ್ನ ಇಡೀ ಜೀವನ ಹಾಳಾಯಿತು ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿಬಿಟ್ಟ. ಅಭಿಷೇಕ್, ಹೆತ್ತವರಿಗೆ ಒಬ್ಬನೇ ಮಗ.
ಸಾವಿಗೆ ಮುನ್ನುಡಿ ಬರೆದಿದ್ದು ಸೈನಿಕರ ಸ್ಮರಣೆ ಕಾರ್ಯಕ್ರಮ
ಆತನ ಸಾವಿಗೆ ಮುನ್ನುಡಿ ಬರೆದಿದ್ದು ನಿವೃತ್ತ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ. ಆ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆಯವರನ್ನು ಭಾಷಣಕಾರರನ್ನಾಗಿ ಆಹ್ವಾನಿಸಲಾಗಿತ್ತು. ಆದರೆ, ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಎನ್’​ಎಸ್’​ಯುಐ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಪ್ರತಿಭಟನೆಗಳೂ ಜರುಗಿದ್ದವು. ಆ ಪ್ರತಿಭಟನೆ ಕೊನೆಗೆ ಗಲಾಟೆಗೆ ತಿರುಗಿತು. ಕೊನೆಗೂ ಆ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಬರಲಿಲ್ಲ.
ಅಭಿಷೇಕ್​ ವಿಚಾರಣೆ ನಡೆಯದೆ ದಾಖಲಾಯ್ತು ಎಫ್​’ಐಆರ್
ಸಾವಿಗೆ ಕಾರಣವಾಗಿದ್ದು ಇದೇ ಅಂಶ. ಪ್ರತಿಭಟನೆಯ ವೇಳೆ ನಡೆದ ಗಲಾಟೆಯಲ್ಲಿ ಎನ್​ಎಸ್​ಯುಐ ಕಾರ್ಯಕರ್ತರು ಗಾಯಗೊಂಡಿದ್ದರು. ದೂರು ಕೊಟ್ಟಿದ್ದರು. ಆ ದೂರಿನ ಪ್ರಕಾರ, ಅಭಿಷೇಕ್ ಸೇರಿದಂತೆ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಯ್ತು. ಎಫ್​ಐಆರ್ ದಾಖಲಾದ ದಿನವೇ ಅಭಿಷೇಕ್ ಆತ್ಮಹತ್ಯೆಗೆ ಶರಣಾಗಿದ್ದ.
ವೇಮುಲ ಸಾವಿಗೆ ದೇಶಾದ್ಯಂತ ಕಣ್ಣೀರು: ಅಭಿಷೇಕ್ ಸಾವು ಮಾತ್ರ ಅನಾಥ..!
ಇದು ವಿಚಿತ್ರವಾದರೂ ಸತ್ಯ. ಕ್ಯಾಂಪಸ್’​ನಲ್ಲಿನ ರಾಜಕೀಯಕ್ಕೆ ಹೈದರಾಬಾದ್’​ನಲ್ಲಿ ರೋಹಿತ್ ವೇಮುಲ ಬಲಿಯಾದಾಗ ದೇಶದ ಗಣ್ಯಾತಿಗಣ್ಯರೆಲ್ಲ ಬಂದು ಸಾಂತ್ವನ ಹೇಳಿದ್ದರು. ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಮೇಧಾ ಪಾಟ್ಕರ್, ಅಖಿಲೇಶ್ ಯಾದವ್, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಂಬನಿ ಮಿಡಿದಿದ್ದರು. ಆದರೆ, ಅಭಿಷೇಕ್ ಸಾವಿಗೆ ನಮ್ಮದೇ ರಾಜ್ಯದ ಮುಖ್ಯಮಂತ್ರಿ ಸಣ್ಣದೊಂದು ಪ್ರತಿಕ್ರಿಯೆಯನ್ನೂ ಕೊಡಲಿಲ್ಲ.
ದೊಡ್ಡ ನಾಯಕರ ದಿವ್ಯ ಮೌನಕ್ಕೆ ಏನು ಕಾರಣ? ಅಭಿಷೇಕ್ ಬಲಪಂಥೀಯನಾಗಿದ್ದೇ ಕಾರಣಾನಾ..? ಅಭಿಷೇಕ್ ಕೂಡಾ ಎಡಪಂಥೀಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದರೆ, ದೊಡ್ಡದೊಡ್ಡವರೆಲ್ಲ ಮಿಡಿಯುತ್ತಿದ್ದರಾ..? ಉತ್ತರ ಕಣ್ಣೆದುರೇ ಇದೆ. ಈಗ ಅಭಿಷೇಕ್ ಸಾವಿಗೆ ನ್ಯಾಯ ಕೇಳುತ್ತಿರುವುದು ಎಬಿವಿಪಿ ಮಾತ್ರ.
ಈಗ ಎಬಿವಿಪಿ ಚಿಕ್ಕಮಗಳೂರಿನಲ್ಲಿ ಕಾಲೇಜ್ ಬಂದ್​ಗೆ ಕರೆ ಕೊಟ್ಟಿದೆ. ರೋಹಿತ್ ವೇಮುಲ ಸಾವಿಗೆ ಮಿಡಿದವರ ಮನಸ್ಸು, ಕನ್ನಯ್ಯ ಬಂಧನಕ್ಕೆ ತಲ್ಲಣಿಸಿದವರ ಹೃದಯ ಅಭಿಷೇಕ್ ಸಾವಿಗೆ ಅದ್ಯಾಕೋ ಮಿಡಿಯುತ್ತಲೇ ಇಲ್ಲ. ಸತ್ತವರು ಯಾವ ಕಡೆ ಅನ್ನೋದರ ಮೇಲೆ ಎಷ್ಟು ಕಣ್ಣೀರು ಸುರಿಸಬೇಕು ಎನ್ನುವುದು ನಿರ್ಧಾರವಾಗುತ್ತೆ. ಏಕೆಂದರೆ, ಇದು ರಾಜಕೀಯ.

Comments are closed.