ಕರ್ನಾಟಕ

ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕಾಗಿ ವಿವಾಹಿತೆಯೋರ್ವಳ ಪತಿಯನ್ನೇ ಅಪಹರಿಸಿದ ಕಾಮುಕರು !

Pinterest LinkedIn Tumblr

ಬೆಂಗಳೂರು: ಲೈಂಗಿಕ ಕ್ರಿಯೆಗೆ ಒಪ್ಪದ ವಿವಾಹಿತ ಮಹಿಳೆಯ ಪತಿಯನ್ನು ಅಪಹರಿಸಿದ್ದ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಬಾಣಸವಾಡಿಯ ಸಂಜಯ್ ಮತ್ತು ಮುಜುಂದಾರ್ ಬಂಧಿತ ಆರೋಪಿಗಳಾಗಿದ್ದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಬಾಬುಸಾಬ್ ಪಾಳ್ಯದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೋಲ್ಕತ್ತ ಮೂಲದ ಮಹಿಳೆಯು ತಾನು ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ತನ್ನ ಪತಿಯನ್ನು ಬಿಲ್ಡಿಂಗ್ ಕಾಂಟ್ರಾಕ್ಟರ್ ಮತ್ತು ೬ ಜನರ ತಂಡ ಅಪಹರಿಸಿದ್ದಾರೆ ಎಂದು ದೂರು ನೀಡಿದ್ದರು.

ಪತಿಯನ್ನು ಕಳೆದ ಜ.೧೦ ರಂದು ಅಪಹರಿಸಲಾಗಿದ್ದು ಅಲ್ಲಿಂದ ಪತಿ ಕಾಣದಾಗಿರುವುದರಿಂದ ಮಗುವಿನೊಂದಿಗೆ ಅನಾಥವಾಗಿರುವ ನನಗೆ ದಿಕ್ಕಿಲ್ಲದಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಪತಿಯು ನಾಪತ್ತೆಯಾಗಿರುವುದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಸ್ಥಳೀಯರು ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

Comments are closed.