ಕರ್ನಾಟಕ

ಬೆಂಗಳೂರು: ಮಂತ್ರಿಮಾಲ್​`ನ ಹಿಂಭಾಗದ ಗೋಡೆ ಕುಸಿತ

Pinterest LinkedIn Tumblr


ಬೆಂಗಳೂರು(ಜ.16): ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್​`ನಲ್ಲಿ ಅವಘಢ ಸಂಭವಿಸಿದೆ. ಎಸಿ ಪೈಪ್​ ತುಂಡಾಗಿ 1ರಿಂದ 3ನೇ ಮಹಡಿ ತನಕ ನೀರು ಹರಿದಿದೆ. ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿತದಿಂದ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್`​ನಲ್ಲಿದ್ದ ಜನರನ್ನ ಸ್ಥಳಾಂತರಗೊಳಿಸಲಾಗಿದ್ದು, ಸಿನಿಮಾ ಶೋ ಸ್ಥಗಿತಗೊಳಿಸಲಾಗಿದೆ.

ಮಂತ್ರಿ ಮಾಲ್’ನ ಗೋಡೆ ಕುಸಿತದ ಘಟನೆ ಶಾಕ್ ತಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಪದ್ಮಾವತಿ, ಮಾಲ್’ನ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ. “ಕಟ್ಟಡದಲ್ಲಿ ದೋಷ ಇದ್ದಂತಿದೆ. ಮಾಲ್’ನ ಆಕ್ಯುಪೆನ್ಸಿ ಸರ್ಟಿಫಿಕೇಟ್’ನ್ನು ಹಿಂಪಡೆದುಕೊಳ್ಳುತ್ತಿದ್ದೇವೆ. ಇಲ್ಲಿಯ ಬ್ಯುಸಿನೆಸ್ ನಿಲ್ಲಿಸಲು ಸೂಚಿಸಿದ್ದೇವೆ” ಎಂದು ಮೇಯರ್ ಹೇಳಿದ್ದಾರೆ.
ಗೋಡೆ ಬಿರುಕು ಬಿಟ್ಟಿದೆ. ಕುಸಿಯುವ ಅಪಾಯವಿದ್ದಂತಿದೆ. ಕಟ್ಟಡದ ಗುಣಮಟ್ಟದಲ್ಲಿ ದೋಷ ಕಂಡುಬಂದಿದೆ ಎಂದು ಹೇಳಿರುವ ಪದ್ಮಾವತಿ, ಸಂಪೂರ್ಣ ತನಿಖೆ ಆದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Comments are closed.