ರಾಷ್ಟ್ರೀಯ

600ಕ್ಕೂ ಹೆಚ್ಚು ಬಾಲಕಿಯರ ಅತ್ಯಾಚಾರವೆಸಗಿದಾತನ ಬಂಧನ!

Pinterest LinkedIn Tumblr


ನವದೆಹಲಿ(ಜ. 16): ನೂರಾರು ಬಾಲಕಿಯರನ್ನು ಅತ್ಯಾಚಾರಗೈದ ಉತ್ತರಪ್ರದೇಶ ಮೂಲದ 38 ವರ್ಷದ ಸುನೀಲ್ ರಸ್ತೋಗಿ ಎಂಬ ಸೀರಿಯಲ್ ರೇಪಿಸ್ಟ್’ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ವಿಚಾರಣೆ ವೇಳೆ ಪೊಲೀಸರಿಗೆ ಈತನ ಬಗ್ಗೆ ಇನ್ನಷ್ಟು ಬೆಚ್ಚಿಬೀಳಿಸುವ ಮಾಹಿತಿ ಸಿಕ್ಕಿದೆ. 500ಕ್ಕೂ ಹೆಚ್ಚು ಬಾಲಕಿಯರು ಈತನ ಕಾಮತೃಷೆಗೆ ಬಲಿಯಾಗಿದ್ದಾರೆ.
ಯಾರು ಈತ?
ಉತ್ತರಪ್ರದೇಶದ ರಾಮಪುರ್’ನವರಾದ ಸುನೀಲ್ ರಸ್ತೋಗಿ ವೃತ್ತಿಯಲ್ಲಿ ಟೈಲರ್. 1990ರಲ್ಲಿ ಅಪ್ಪನ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡಲು ಈತ ದಿಲ್ಲಿಗೆ ಬಂದಿರುತ್ತಾನೆ. ರಸ್ತೋಗಿಗೆ ಇಬ್ಬರು ಬಾಲಕಿಯರು ಸೇರಿದಂತೆ ಐವರು ಮಕ್ಕಳಿದ್ದಾರೆ.
ಹಿಂದೆಯೂ ಸಿಕ್ಕಿಬಿದ್ದಿದ್ದ:
2004ರಲ್ಲಿ ಮಯೂರ್ ವಿಹಾರ್ ಪ್ರದೇಶದಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುತ್ತಾನೆ. ಆದರೆ, ಸ್ಥಳೀಯರು ಈತನನ್ನು ಹಿಡಿದು ಚೆನ್ನಾಗಿ ತದುಕಿ ಏರಿಯಾದಿಂದ ಹೊರಗೆ ಓಡಿಸುತ್ತಾರೆ. 2006ರಲ್ಲಿ ಉತ್ತರಾಖಂಡ್’ನ ರುದ್ರಾಪುರ್’ನಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಸಿಕ್ಕಿಬಿದ್ದು 6 ತಿಂಗಳು ಜೈಲು ಪಾಲಾಗಿರುತ್ತಾನೆ.
ಹೇಗೆ ಬಲೆ ಬೀಳಿಸುತ್ತಿದ್ದ?
ಶಾಲೆಯಿಂದ ಮರಳುತ್ತಿರುವ ಬಾಲಕಿಯರ ಗುಂಪನ್ನು ಈತ ಹಿಂಬಾಲಿಸುತ್ತಿದ್ದ. ಗುಂಪಿನಿಂದ ಬೇರೆಯಾಗುವ ಹುಡುಗಿಯೇ ಈತನ ಟಾರ್ಗೆಟ್ ಆಗಿರುತ್ತಿತ್ತು. ಅವರಿಗೆ ಚಾಕೊಲೇಟ್ ಕೊಡುವುದೋ, ಅಥವಾ ಅಪ್ಪ ಬಟ್ಟೆ ಕೊಡಿಸಿದ್ದಾರೆಂದು ಪುಸಲಾಯಿಸಿಯೋ ಈತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದ. ಘಟನೆಯಾದ ಬಳಿಕ ಈತ ನಗರದಿಂದ ಆಚೆ ಹೊರಟುಹೋಗುತ್ತಿದ್ದನೆನ್ನಲಾಗಿದೆ.
ವಿಲಕ್ಷಣ ಸಂಗತಿಗಳು:
* ಪೊಲೀಸ್ ವಿಚಾರಣೆ ವೇಳೆ ಸುನೀಲ್ ರಸ್ತೋಗಿಯೇ ಬಾಯಿಬಿಟ್ಟಿರುವ ಪ್ರಕಾರ ಈತ ರೇಪ್ ಮಾಡಿದ ಬಾಲಕಿಯರ ಸಂಖ್ಯೆ ಹೆಚ್ಚೂಕಡಿಮೆ 600.
* ದಿಲ್ಲಿ, ಘಾಜಿಯಾಬಾದ್ ಮತ್ತು ರುದ್ರಾಪುರ್’ನಲ್ಲಿ ಈತನ ಕಾಮ ಕೃತ್ಯ
* 7-11 ವರ್ಷದ ಶಾಲಾ ಬಾಲಕಿಯರೇ ಈತನ ಟಾರ್ಗೆಟ್
* ಈತ ರೇಪ್ ಮಾಡುವಾಗೆಲ್ಲಾ ರೆಡ್ ಜ್ಯಾಕೆಟ್ ಧರಿಸುತ್ತಿದ್ದ. ಅತ್ಯಾಚಾರಕ್ಕೆ ಈ ಬಟ್ಟೆ ಅದೃಷ್ಟ ಎಂಬುದು ಈತನ ನಂಬಿಕೆ.
* ರೇಪ್ ಮಾಡಲು ಈತ ಉತ್ತರಪ್ರದೇಶದಿಂದ ದಿಲ್ಲಿಗೆ ಬೆಸ ಸಂಖ್ಯೆಯ ದಿನಾಂಕಗಳಂದು ಮಾತ್ರ ಬರುತ್ತಿದ್ದ.
* ರೇಪ್ ಮಾಡಲು ಬರುವಾಗ ಈತ ಸಂಪರ್ಕ್ ಕ್ರಾಂತಿ ಎಕ್ಸ್’ಪ್ರೆಸ್ ರೈಲನ್ನು ಮಾತ್ರ ಏರುತ್ತಿದ್ದ.

Comments are closed.