ಕ್ರೀಡೆ

‘ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೋ ರೊನಾಲ್ಡೋ’

Pinterest LinkedIn Tumblr


ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫುಟ್ ಬಾಲ್ ದಂತಕತೆ ಕ್ರಿಸ್ಟಿಯಾನೋ ರೊನಾಲ್ಡೋ ಅವರಿದ್ದಂತೆ ಎಂದು ಇಂಗ್ಲೆಂಡ್ ನ ಮಾಜಿ ನಾಯಕ ನಾಸಿರ್ ಹುಸೇನ್ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 63 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಹೀನಾಯ ಪರಿಸ್ಥಿತಿಯಲ್ಲಿದ್ದ ಟೀಂ ಇಂಡಿಯಾವನ್ನು 350 ರನ್ ಗಳ ಅಸಾಧ್ಯ ಮೊತ್ತ ಬೆನ್ನತ್ತಿ ಜಯ ಕೊಡಿಸಿದ ನಾಯಕನ ಆಟವನ್ನು ನೋಡಿ ಹುಸೇನ್ ಈ ಅಭಿಪ್ರಾಯಪಟ್ಟಿದ್ದಾರೆ.

“ನಾಯಕನಾಗಿ ಅವರಿಗೆ ಮೂರೂ ಮಾದರಿಯ ಕ್ರಿಕೆಟ್ ನ ಜವಾಬ್ದಾರಿ ಭಾರ ಎನಿಸುತ್ತದೆಯೇ ಎಂದರೆ ಯಾರೂ ಅವರನ್ನು ನೋಡಿ ಹೌದು ಎನ್ನಲಾರರು. ಅಷ್ಟು ಅದ್ಭುತವಾಗಿ ಆಡುತ್ತಿದ್ದಾರೆ” ಎಂದು ಹುಸೇನ್ ಹೊಗಳಿದ್ದಾರೆ.

ಇಂಗ್ಲೆಂಡ್ ನ ಇನ್ನೊಬ್ಬ ಮಾಜಿ ನಾಯಕ ಮೈಕಲ್ ವಾನ್ ಕೂಡಾ ಕೊಹ್ಲಿಯನ್ನು ಅನ್ಯ ಗ್ರಹದಿಂದ ಬಂದ ಆಟಗಾರ ಎಂದು ಮೆಚ್ಚುಗೆಯ ಸರಮಾಲೆ ಸುರಿಸಿದ್ದಾರೆ. ಟೆಸ್ಟ್, ಏಕದಿನ, ಟಿ-ಟ್ವೆಂಟಿ ಮೂರೂ ಮಾದರಿಯ ಅದ್ಭುತ ಆಟಗಾರ ಕೊಹ್ಲಿ ಎಂದು ಅವರು ಹೊಗಳಿದ್ದಾರೆ.

Comments are closed.