ಕರ್ನಾಟಕ

ಮಗುವಿಗೆ ತಾಯಿಯ ಎದೆಹಾಲಿನ ಬಳಿಕ ಸ್ಥಾನ ಪಡೆದ ಪೌಷ್ಠಿಕಾಂಶ ಅಹಾರ ಯಾವುದು ಗೊತ್ತೇ..?

Pinterest LinkedIn Tumblr

ಮಂಗಳೂರು: ಹೌದು ನೀವು ಕೇಳುತ್ತಿರುವುದು ನಿಜ. ಸ್ಪಿರುಲಿನಾ(Spirulina) ಎಂಬ ಹೆಸರಿನ ಈ ಸಸ್ಯದ ಎಲೆಗಳನ್ನು ಪುಡಿ ಮಾಡಿ, ಪ್ರತಿನಿತ್ಯ ಸ್ವಲ್ಪಪ್ರಮಾಣದಲ್ಲಿ ಸೇವಿಸಿದರೆ ಸಾಕು ಅದರಿಂದ ಉತ್ತಮ ಆರೋಗ್ಯನಿಮ್ಮದಾಗುತ್ತದೆ. ಅಷ್ಟೇ ಅಲ್ಲ ಅದನ್ನು ಕ್ರಮಾವಾಗಿ ತೆಗೆದುಕೊಳ್ಳುತ್ತಿದ್ದರೆ, ಇತರೆ ಯಾವ ಪೋಷಕ ಪದಾರ್ಥಗಳನ್ನು ಸೇವಿಸುವ ಅಗತ್ಯವಿರುವುದಿಲ್ಲ. ಏಕೆಂದರೆ ಇದರಲ್ಲಿ ಇರುವ ಪೋಷಕಾಂಶಗಳು ಅಂತಹ ಗುಣವನ್ನೊಂದಿರುತ್ತವೆ. ತಾಯಿಯ ಹಾಲಿನಲ್ಲಿರುವಷ್ಠು ಪೌಷ್ಠಿಕತೆ ಇದರಲ್ಲಿರುತ್ತದೆ. ಹೌದು ಅದಕ್ಕಾಗಿಯೇ WHO (ವಿಶ್ವ ಆರೋಗ್ಯ ಸಂಘಟನೆ) ಇದನ್ನು ಅತ್ಯಧಿಕ ಪೌಷ್ಠಿಕಾಂಶಗಳಿರುವ ಅಹಾರದಲ್ಲಿ ತಾಯಿಯ ಹಾಲಿನ ನಂತರದ ಸ್ಥಾನ ಪಡೆದಿದೆ. 1975 ರಲ್ಲಿಯೇ ಆ ಸಂಸ್ಥೆಯು ಈ ಸಸ್ಯದ ಎಲೆಗಳ ಪುಡಿಯು ಅಧಿಕ ಪೋಷಕಾಂಶಗಳನ್ನೊಂದಿದೆ ಎಂದು ನಿರ್ಧರಿಸಿತ್ತು.

ಆದರೆ ನಿಮಗೆ ಆಶ್ಚರ್ಯಮೂಡಿಸುವ ವಿಷಯ ಮತ್ತೊಂದಿದೆ. ಈ ಗಿಡದ ಉತ್ಫತ್ತಿಯು ನಮ್ಮ ದೇಶದಲ್ಲೇ ಅಧಿಕವಾಗಿರುವುದು. ಹಾಗಿದ್ದರೂ ಇದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ ಈ ಗಿಡದ ಎಲೆಗಳ ಪುಡಿಯನ್ನು ನಿತ್ಯವೂ ಸೇವಿಸುವುದರಿಂದ ನಮಗೆ ಎಂತಹ ಲಾಭಗಳು ಬರುತ್ತವೆ ಎಂದು ತಿಳಿಯೋಣ…

ಸ್ಪಿರುಲಿನಾ ಸಸ್ಯದ ಎಲೆಗಳ ಪುಡಿಯಲ್ಲಿ ಕ್ಯಾಲ್ಷಿಯಂ ಅಧಿಕವಾಗಿರುತ್ತದೆ. ಎಷ್ಟೆಂದರೆ ಸಾಧಾರಣ ಹಾಲಿಗಿಂತ 26 ಪಟ್ಟು ಅಧಿಕವಾಗಿರುತದೆ. ಆದ್ದರಿಂದ ಇದು ಮೂಳೆಗಳಿಗೆ ಬಲವನ್ನೊದಗಿಸುತ್ತದೆ.

ದೇಹದ ನಿರ್ಮಾಣಕ್ಕೆ, ಕಣಗಳ ಪುನರುತ್ಪಾದನೆ, ಹೊಸಕಣಗಳ ಬೆಳವಣಿಗೆಗೆ ಪ್ರೋಟೀನ್’ಗಳು ಅವಶ್ಯಕವಾಗಿರುತ್ತವೆ ಎಂದು ಎಲ್ಲರಿಗೂ ತಿಳಿದಿದ್ದೆ. ಆದರೆ ಸ್ಪಿರುಲಿನಾ ಪುಡಿಯಲ್ಲಿ ಸುಮಾರು 60% ರಷ್ಟು ಪ್ರೋಟಿನ್’ಗಳಿದ್ದು ನಮಗೆ ಲಭಿಸುತ್ತವೆ. ಎಲ್ಲಾ ಆಹಾರಪದಾರ್ಥಗಳಲ್ಲಿಯೂ ಅತ್ಯಂತ ಗರಿಷ್ಠ ಪ್ರೋಟೀನ್’ಗಳನ್ನೊಂದಿರುವ ಆಹಾರ ಇದೆ. ನಾನ್ ವೆಜ್(ಮಾಂಸಾಹಾರ) ತಿನ್ನದಂತವರಿಗೆ ಇದನ್ನು ತಿಂದರೆ ಸಾಕು ಎಷ್ಟೋ ಪ್ರೋಟಿನ್’ಗಳು ಲಭಿಸುತ್ತವೆ.

ಶರೀರದ ಬೆಳವಣಿಗೆಗೆ ಅವಶ್ಯಕವಾದ ಅಮೈನೊಯಾಸಿಡ್’ಗಳು, ಐರನ್, ಯಾಂಟಿ ಆಕ್ಸಿಡೇಂಟ್’ಗಳು, ಕ್ಲೋರೊಫಿಲ್ ಸಮೃದ್ದಿಯಾಗಿರುತ್ತವೆ. ರಕ್ತವನ್ನು ಶುದ್ದಿಮಾಡುವುದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಕ್ಲೊರಿಫಿಲ್ ಚೆನ್ನಾಗಿ ಕೆಲಸ ಮಾಡುತ್ತದೆ.

ಕೆಲವು ತರಹದ ಕ್ಯಾನ್ಸರ್ ಗಳು ಬರದಂತೆ ನೊಡಿಕೊಳ್ಳಬಹುದು. ನರಗಳ ಬಲಹೀನತೆ ಹೋಗುತ್ತದೆ.ಲಿವರನ್ನು ಶುದ್ದಿ ಮಾಡುತ್ತದೆ. ಮಧುಮೇಹವಿದ್ದವರಿಗೆ ಒಳಿತು ಮಾಡುತ್ತದೆ. ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುವುದಿಲ್ಲ. ಎಲ್ಲಾ ರೀತಿಯ ನೋವುಗಳು ಕಡಿಮೆಯಾಗುತ್ತವೆ.ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀರ್ಣಕ್ರಿಯೆಯು ಉತ್ತಮ ವಾಗುತ್ತವೆ. ಶರೀರದಲ್ಲಿನ ಹಾರ್ಮೋನ್’ಗಳ ಕಾರ್ಯ ಉತ್ತಮಗೊಳಿಸುತ್ತದೆ.

ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಅಧಿಕವಾಗಿರುವ ಕೊಬ್ಬಿನ್ನು ಕರಗಿಸುತ್ತದೆ. ಇದು ಅಧಿಕ ಭಾರವನ್ನು ಕಡಿಮೆ ಮಾಡಿಕೊಳ್ಳು ವವರಿಗೆ ಉತ್ತಮವಾದ ಔಷಧವಾಗಿ ಕೆಲಸ ಮಾಡುತ್ತದೆ.ಶರೀರದಲ್ಲಿರುವ ವ್ಯರ್ಥ ಪದಾರ್ಥಗಳು ಹೊರಗೆ ಹೋಗುತ್ತವೆ.ವಿಟಮಿನ್ ಎ, ಕೆ1, ಕೆ2, ಬಿ12, ಐರನ್, ಮೆಗ್ನಿಷಿಯಂ ಕ್ರೋಮಿಯಂ, ಪೈಟೋ ನ್ಯೂಟ್ರಿಯೆಂಟ್’ಗಳು, ಕೆರೋಟಿನಾಯಿಡ್ಸ್, ಜಿ ಎಲ್ ಎ, ಎಸ್ ವೊ ಡಿ, ಹೀಗೆ ಹೇಳುತ್ತಾ ಹೋದರೆ ಎಷ್ಟೋ ತರಹದ ಪೋಷಕಾಂಶಗಳು ಸ್ಫಿರುಲಿನಾದಲ್ಲಿವೆ.

ಕ್ಯಾರೆಟ್’ಗಿಂತ 2800 ರಷ್ಟು ಬೀಟಾಕೆರೋಟಿನ್, ಪಾಲಕ್’ಸೊಪ್ಪುಗಿಂತ 3900 ರಷ್ಟು ಅಧಿಕ ಐರನ್, ಬ್ಲೂಬೆರ್ರಿಗಳಿಗಿಂತ 280 ರಷ್ಟು ಅಧಿಕ ಯಾಂಟಿಮಕ್ಸಿಡೇಂಟ್’ಗಳು ಸ್ಫಿರುಲೀನಾದಲ್ಲಿರುತ್ತವೆ .ಆದ್ದರಿಂದ ಮೇಲೆ ಹೇಳಿದ್ದು, ಇದನ್ನು ನಿತ್ಯವೂ ಸ್ವಲ್ಪ ಪುಡಿಯ ರೂಪದಲ್ಲಿ ತೆಗೆದುಕೊಂಡರೆ ಸಾಕು ಅದರಿಂದ ಎಂತಹ ಪೋಷಕಾಂಶಗಳು ಅವಶ್ಯಕತೆ ಇಲ್ಲದಂತೆಯೇ. ಸ್ಫಿರುಲೀನಾ ಪುಡಿ, ಟ್ಯಾಬ್ಲೆಟ್ಸ್ ರೂಪದಲ್ಲಿ ಮಾರುಕಟ್ಟೆಯಲ್ಲಿ ನಮಗೆ ದೊರೆಯುತ್ತವೆ. ಅದನ್ನು ಹೇಗಾದರೂ ಬಳಸಬಹುದು.

Comments are closed.