ಕರ್ನಾಟಕ

ನನ್ನ ಬಗ್ಗೆ ಕಾಗಿನೆಲೆ ಸ್ವಾಮೀಜಿಗಳಿಗೆ ತಪ್ಪು ಗ್ರಹಿಕೆ: ಯಡಿಯೂರಪ್ಪ

Pinterest LinkedIn Tumblr


ಕಾರವಾರ (ಜ.15): ಕಾಗಿನೆಲೆ ಪೀಠದ ನೀರಂಜನಾನಂದ ಪುರಿ ಮಹಾಸ್ವಾಮಿಗಳು ನಿನ್ನೆ ರಾಯಚೂರಿನಲ್ಲಿ ಹಾಲುಮತ ಸಮಾವೇಶದಲ್ಲಿ ತನ್ನ ವಿರುದ್ಧ ಆಡಿರುವ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನಯವಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಅವರ ಶಿಷ್ಯ. ಅವರಿಗೆ ನನ್ನ ಬಗ್ಗೆ ತಪ್ಪು ಗ್ರಹಿಕೆಯಾಗಿದೆ. ನನ್ನ ಭಾವನೆ ಅವರಿಗೆ ತಿಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಿನ್ನೆ ರಾಯಚೂರಿನಲ್ಲಿ ನಡೆದ ಹಾಲುಮತ ಸಮಾವೇಶದಲ್ಲಿ ಮಾತನಾಡುತ್ತಾ ಕಾಗಿನೆಲೆ ಪೀಠದ ನೀರಂಜನಾನಂದ ಪುರಿ ಮಹಾ ಸ್ವಾಮಿಗಳು, ಸ್ತ್ರೀ ಬುದ್ಧಿ ಪ್ರಳಯಾಂತಕವಂತೆ, ನೀವು ಹೆಣ್ಣಿನ ಮಾತು ಕೇಳಿ ಸರ್ವನಾಶ ಆಗುತ್ತಿದ್ದೀರಿ, ಅದಕ್ಕೆ ಸ್ವಲ್ಪ ಗುರುವಿನ ಮಾತು ಕೇಳಿ ಎಂದು ಯಡಿಯೂರಪ್ಪರಿಗೆ ಎಚ್ಚರಿಕೆ ನೀಡಿದ್ದರು.

Comments are closed.