ಕರ್ನಾಟಕ

ಮೇಲ್ಛಾವಣಿಯಿಲ್ಲದ ಶಾಲೆ!

Pinterest LinkedIn Tumblr


ಹಾಸನ(ಜ.11): ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಹೇಳುವ ಮಾತು, ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಕನ್ನಡವನ್ನು ಉಳಿಸಬೇಕು ಅಂತಾ.. ಆದ್ರೆ ಅದೆಲ್ಲಾ ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಅನ್ನೋದನ್ನ ಸಾಬೀತುಪಡಿಸಿದೆ ಹಾಸನ ಜಿಲ್ಲೆಯ ಬೇಲೂರಿನ ಮಲದೇವಿಹಳ್ಳಿ ಸರ್ಕಾರಿ ಶಾಲೆ ದು:ಸ್ಥಿತಿ. ವಿದ್ಯಾರ್ಥಿಗಳು ಕಣ್ಣೀರಿಟ್ಟು ನಮಗೊಂದು ಶಾಲಾ ಕಟ್ಟಡ ಕಟ್ಟಿಕೊಡಿ ಎಂದು ಗೋಗರೆಯುತ್ತಿದ್ದಾರೆ. ಇನ್ನು ಆ ಮಕ್ಕಳು ಪಾಠ ಕಲಿಯುತ್ತಿರುವ ಪರಿಸ್ಥಿತಿ, ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳ ಬಗ್ಗೆ ಹೊಂದಿರುವ ಕಾಳಜಿ ಇಂದು ಸುವರ್ಣ ನ್ಯೂಸ್’ನಲ್ಲಿ ಅನಾವರಣಗೊಂಡಿದೆ. ಈ ಕುರಿತಾದ ಒಂದು ವರದಿ ಹೀಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಲದೇವಿಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಎದುರಾಗಿದೆ. ಕಳೆದ ವರ್ಷ ಮೇನಲ್ಲಿ ಬಿರುಗಾಳಿ ಮಳೆಗೆ ಶಾಲೆಯ 2 ಕೊಠಡಿಗಳ ಮೇಲ್ಛಾವಣಿ ಹಾರಿ ಹೋಗಿದೆ. ಅಂದಿನಿಂದಲೂ ಬಯಲಲ್ಲೇ ಪಾಠ.
ಇಂಥಹ ಪರಿಸ್ಥಿತಿಗೆ ಭಯಗೊಂಡ ಮಕ್ಕಳು ಕೂಡ ಬೇರೆಡೆಗೆ ಹೋಗುತ್ತಿದ್ದು 60 ಇದ್ದ ಮಕ್ಕಳ ಸಂಖ್ಯೆ ಈಗ 26ಕ್ಕೆ ಇಳಿದಿದೆ ಅಂತಾರೆ ಶಿಕ್ಷಕರು. ಮಾತೆತ್ತಿದ್ರೆ ಸಮಾಜೋದ್ದಾರದ ಮಾತಾಡೋ ಜನಪ್ರತಿನಿಧಿಗಳೇ ಮಕ್ಕಳ ಕಣ್ಣೀರಿಗೂ ನಿಮ್ಮ ಹೃದಯ ಕರಗೋದಿಲ್ವೇ? ಅಷ್ಟಕ್ಕೂ ಇವರು ಕೇಳ್ತಿರೋದು ಅಕ್ಷರಭ್ಯಾಸಕ್ಕೆ ಒಂದು ಸೂರನ್ನ ಅದನ್ನೂ ಒದಗಿಸಿಕೊಡೋ ತಾಕತ್ತು ನಿಮಗಿಲ್ವಾ. ಮಾಜಿ ಪ್ರಧಾನಿಗಳ ತವರು ಜಿಲ್ಲೆಯಲ್ಲೇ ಇಂಥ ದುಸ್ಥಿತಿ ಇರೋದು ನಿಜಕ್ಕೂ ಬೇಸರದ ಸಂಗತಿ.

Comments are closed.