ಕರ್ನಾಟಕ

ನನಗೆ ನೋಟಿಸ್ ನೀಡಲು ಯಾರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ

Pinterest LinkedIn Tumblr


ಕಲಬುರಗಿ(ಜ.10): ನನ್ನನ್ನು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಹೊರ ಹಾಕಲು ಸಾಧ್ಯವಿಲ್ಲ. ಅಲ್ಲದೆ ನನಗೆ ನೋಟಿಸ್ ಕೊಡಲು ಸಹ ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಕಲಬುರಗಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಉದ್ಘಾಟಿಸಿ ಮಾತನಾಡಿ. ಬಿಎಸ್’ವೈ ಬಿಟ್ಟು ಬೇರೆ ಯಾರು ಕೂಡ ಬ್ರಿಗೇಡ್​ನ್ನು ವಿರೋಧಿಸುತ್ತಿಲ್ಲ. ಅವರೊಬ್ಬರೆ ರಾಯಣ್ಣ ಬ್ರಿಗೇಡ್’ಅನ್ನು ವಿರೋಧಿಸುತ್ತಿದ್ದಾರೆ. ರಾಯಣ್ಣ ಬ್ರಿಗೇಡ್ ಸಂಘಟನೆಯ ಉದ್ದೇಶ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿದ್ದ ಈಶ್ವರಪ್ಪ ಈಗ ಪಥ ಬದಲಿಸಿದ್ದಾರೆ. ಬಿಎಸ್’ವೈರನ್ನು ಸಿಎಂ ಮಾಡುವುದು ಬ್ರಿಗೇಡ್’ನ ಉದ್ದೇಶವಲ್ಲ ಎಂದಿದ್ದಾರೆ.
ಈ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಯಣ್ಣ ಬ್ರಿಗೇಡ್’ಗೆ ಬೆಂಬಲ ನೀಡಿರುವ ಮಠ ಮಾನ್ಯರು, ಈ ಸಂಘಟನೆಯನ್ನು ಬಿಜೆಪಿಗೆ ಮಿತಗೊಳಿಸುವುದನ್ನು ವಿರೋಧಿಸಿದ್ದಾರೆ. ತಮ್ಮ ಭಕ್ತರು ಎಲ್ಲಾ ಪಕ್ಷಗಳಲ್ಲೂ ಇರುವುದರಿಂದ ರಾಯಣ್ಣ ಬ್ರಿಗೇಡನ್ನು ಒಂದು ರಾಜಕೀಯ ಸಂಘಟನೆಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಠದ ಸ್ವಾಮಿಗಳು ಹೇಳುತ್ತಾ ಬಂದಿದ್ದರು. ಯಡಿಯೂರಪ್ಪಗೂ ಕೂಡ ತಮಗೆ ಬ್ರಿಗೇಡ್’ನ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ನಾವು ಮಠಗಳು ತೋರಿದ ದಾರಿ ಹಿಡಿದಿದ್ದೇವೆ,” ಎಂದು ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.
ದಲಿತರು, ಹಿಂದುಳಿದವರು ಮತ್ತು ಶೋಷಿತರ ಉದ್ದಾರ ಯಾರು ಮಾಡುತ್ತಾರೋ ಅವರಿಗೆ ರಾಯಣ್ಣ ಬ್ರಿಗೇಡ್’ನ ಬೆಂಬಲವಿರುತ್ತದೆ ಎಂದೂ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

Comments are closed.