ಕರ್ನಾಟಕ

ಉಗುರಿನ ಚಂದ್ರಾಕೃತಿಯ ಮಹತ್ವ ಬಗ್ಗೆ ತಿಳಿಯಿರಿ….

Pinterest LinkedIn Tumblr

ಮಂಗಳೂರು: ನಮ್ಮ ಪರಿಸರದಲ್ಲಿ ನಾವೂ ಯಾವಾಗಳೂ ವಿಚಿತ್ರವಾದ ಆಕಾರಗಳನ್ನು ನೋಡುತ್ತಿರುತ್ತೇವೆ… ಆಗಸದಲ್ಲಿರುವ ಮೋಡಗಳನ್ನು ನೋಡಿದರೆ,ಮನುಷ್ಯ,ದೇವರು,ಮರಗಳನ್ನು ಹೋಲುವ ಆಕಾರಗಳನ್ನು, ನೀರು,ಮಣ್ಣು,ಮರಗಳು,ಎಲೆಗಳು ಮುಂತಾದುವುಗಳಲ್ಲಿ ಕೆಲವು ವಿಶಿಷ್ಟ ಆಕಾರಗಳನ್ನು ನೋಡಿ ಅಚ್ಚರಿಗೊಳ್ಳುತ್ತೇವೆ. ಈ ಆಕಾರಗಳು ತಾತ್ಕಾಲಿಕವಾಗಿ ಮೂಡಿಬಂದಿದ್ದರೂ ಅಚ್ಚರಿಯಾಗುತ್ತದೆ. ಆದರೆ, ನಮ್ಮ ಶರೀರದ ಭಾಗವಾದ ಉಗುರುಗಳಲ್ಲೂ ಆಕೃತಿಗಳಿರುತ್ತವೆ. ಅವು ಯಾವ ಆಕಾರದಲ್ಲಿರುತ್ತವೆ ?ಅದರಿಂದಾಗುವ ಪರಿಣಾಮಗಳೇನು ? ಎಂಬ ನಿಮ್ಮ ಅನುಮಾನಗಳಿಗೆ ಉತ್ತರ ಇಲ್ಲಿದೆ.

ಕೈಬೆರಳುಗಳ ಉಗುರುಗಳ ಕೆಳಭಾಗದಲ್ಲಿ ಚಂದ್ರನನ್ನು ಹೋಲುವ ಅರ್ಧ ಚಂದ್ರಾಕೃತಿ ಇರುತ್ತದೆ .ಇದನ್ನು ‘ಲುನುಲಾ’ (Lunula) ಎಂದು ಕರೆಯುತ್ತಾರೆ.ಈ ಲುನುಲಾ ನಮ್ಮ ಶರೀರದ ಸೂಕ್ಷ್ಮ ಭಾಗಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಲುನುಲಾ ಎಂದರೆ, ಚಿಕ್ಕಚಂದ್ರ ಎಂಬ ಅರ್ಥವಿದೆ. ಅಂದರೆ,ಚಂದ್ರ,ಚಂದಮಾಮ ಎಂದರ್ಥ. ಆದರೆ ಈ ಲುನುಲಾ ಗಾಯಗೊಂಡರೆ ಉಗುರು ಪೂರ್ತಿ ನಾಶವಾಗುತ್ತದೆ. ಒಂದು ವೇಳೆ ಶಸ್ತ್ರ ಚಿಕಿತ್ಸೆ ಮಾಡಿ ಉಗುರನ್ನು ತೆಗೆದರೂ ಲುನುಲಾ ಮಾತ್ರ ಹಾಗೆಯೇ ಇರುತ್ತದಂತೆ. ಈ ಕಾರಣಗಳಿಂದಾಗಿ ಲುನುಲಾದ ಆಕಾರ,ಬಣ್ಣಗಳ ಮೂಲಕ ನಮಗೆದುರಾಗಿರುವ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ತಿಳಿದುಕೊಳ್ಳುವುದು ಹೇಗೆಂದು ನೋಡೋಣ.

ಒಂದುವೇಳೆ ಉಗುರಿನ ಮೇಲೆ ಲುನುಲಾ ಇಲ್ಲದಿದ್ದರೆ,ಅಂತಹವರು ರಕ್ತ ಹೀನತೆ,ಪೌಷ್ಟಿಕ ಆಹಾರದ ಲೋಪಗಳಿಂದ ನರಳುತ್ತಿರುತ್ತಾರೆ.
ಲುನುಲಾ ನೀಲಿ ಬಣ್ಣವಿದ್ದರೆ ಅಥವ ಬಿಳಿಚಿಕೊಂಡಿದ್ದರೆ, ಅಂತಹವರಿಗೆ ಸಕ್ಕರೆಕಾಯಿಲೆ ಬರುವ ಸಾಧ್ಯತೆಯಿದೆಯೆಂದು ತಿಳಿಯಬೇಕು.
ಲುನುಲಾ ಬಹಳ ಚಿಕ್ಕದಾಗಿದ್ದು,ಕಾಣದಂತಿದ್ದರೆ ಅಂತಹವರಿಗೆ ಅಜೀರ್ಣ ಸಮಸ್ಯೆ ಇರುತ್ತದೆ.
ಅವರ ಶರೀರದಲ್ಲಿ ಅನೇಕ ವಿಷ ಪದಾರ್ಥಗಳು ಸೇರಿಕೊಂಡಿರುತ್ತವೆ.ಕೊನೆಯದಾಗಿ ಮತ್ತೊಂದು ವಿಷಯ. ಆದರೆ ಇದು ಆರೋಗ್ಯಕ್ಕೆ ಸಂಬಂಧಿಸಿದ್ದಲ್ಲ.
ಅಲಂಕಾರಕ್ಕೆ ಸಂಬಂದಿಸಿದ್ದು. ಉಗುರುಗಳಿಗೆ ಬಣ್ಣ ಹಚ್ಚುವವರು, ಪೂರ್ತಿ ಉಗುರಿಗೆ ಬಣ್ಣ ಹಚ್ಚದೆ, ಲುನುಲಾ ವರೆಗೆ ಮಾತ್ರ ಬಣ್ಣ ಹಚ್ಚಿದಲ್ಲಿ ಆಕರ್ಷಕವಾಗಿರುತ್ತದಂತೆ.

Comments are closed.