ಕರ್ನಾಟಕ

ಸೀತಾಫಲ ಹಣ್ಣಿನಲ್ಲಿರುವ ಮೆಗ್ನಿಷಿಯಂನಿಂದ ಹಲವು ಕಾಯಿಲೆ ನಿವಾರಣೆ

Pinterest LinkedIn Tumblr

ಮಂಗಳೂರು: ಸೀತಾಫಲ, ಈ ಸೀಜನ್’ನಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಒಂದು. ಇದರಲ್ಲಿ ವಿಟಮಿನ್ A, ಮೆಗ್ನಿಷಿಯಂ, ಪೊಟಾಷಿಯಂ, ಫೈಬರ್, ವಿಟಮಿನ್ ಬಿ6, ಕಾಲ್ಸಿಯಂ, ವಿಟಮಿನ್ ಸಿ, ಐರನ್ ನಂತಹ ಅನೇಕ ಪೋಷಕಾಂಶಗಳಿವೆ. ಇದನ್ನು ನಿತ್ಯ ಆಹಾರದ ಒಂದು ಭಾಗವಾಗಿ ಮಾಡಿಕೊಳ್ಳುವುದ್ದರಿಂದ ಎಷ್ಟೋ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಹಣ್ಣು ಮಾತ್ರವಲ್ಲದೆ ಇದರ ಎಲೆಗಳು, ಬೇರು, ಕಾಂಡದಿಂದಲ್ಲೂ ಅನೇಕ ಉಪಯೋಗಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೊಣ ಬನ್ನಿ….

ಸೀತಾ ಫಲದ ಎಲೆಗಳಿಂದ ತೆಗೆದ ರಸವನ್ನು ನಿತ್ಯ ಬೆಳಿಗ್ಗೆ ಒಂದು ಟೀ ಸ್ಪೂನ್ ಅಳತೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ತೂಕವನ್ನು ಸಹ ಕಡಿಮೆ ಮಾಡುತ್ತದೆ.
ಸೀತಾ ಫಲ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ದಂತೆ ಕಾಯಿಸಿಕೊಂಡ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.
ಸೀತಾ ಫಲವನ್ನು ಬೆಳಿಗ್ಗೆ ಉಪಹಾರವಾಗಿ ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ. ಶರೀರಕ್ಕೆ ಬೇಕಾದ ಶಕ್ತಿ ದೊರೆಯುತ್ತದೆ .
ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೃಷ್ಟಿ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಸೀತಾ ಫಲ ಹಣ್ಣಿನಲ್ಲಿರುವ ಮೆಗ್ನಿಷಿಯಂ ಹೃದಯ ಸಂಬಂಧಿ ಕಾಯಿಗಳು ಬರದಂತೆ ತಡೆಯುತ್ತದೆ. ಇವುಗಳಲ್ಲಿ ಇರುವ ಪೋಷಕಾಂಶಗಳು ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.
ಸೀತಾ ಫಲ ಹಣ್ಣನ್ನು ಪ್ರತಿದಿನ ತಿನ್ನುವುದರಿಂದ ಅಲ್ಸರ್ ವಾಸಿಯಾಗುತ್ತದೆ. ಗ್ಯಾಸ್, ಅಸಿಡಿಟಿ, ಅಜೀರ್ಣ, ಬಲಬದ್ದತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಗಲಾಡಿಸುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಿರುವವರು ಸೀತಫಲ ಹಣನ್ನು ತಿನ್ನುವುದು ಒಳ್ಳೆಯದು. ಇದರಿಂದ ರಕ್ತ ಉತ್ಪತ್ತಿಯಾಗುತ್ತದೆ.
ಶರೀರದಲ್ಲಿ ಉಷ್ಣಾಂಶ ಹೆಚ್ಚು ಇರುವವರು ಸೀತಾ ಫಲ ತಿನ್ನುವುದು ಒಳ್ಳೆಯದು. ಇದರಿಂದ ದೇಹದಲ್ಲಿನ ಉಷ್ಣತೆ ನಿಯಂತ್ರಣಕ್ಜೆ ಬರುತ್ತದೆ.

ಚಿಕ್ಕ ಮಕ್ಕಳು, ಬಾಣಂತಿ ತಾಯಿಯರಿಗೆ ಸೀತಾ ಫಲ ಒಳ್ಳೆಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅವರಿಗೆ ಶಕ್ತಿಯನ್ನು ಕೊಡುತ್ತದೆ.
ಬೆಳೆಯುವ ಮಕ್ಕಳಿಗೆ ನಿತ್ಯ ಸೀತಾ ಫಲ ಹಣ್ಣನ್ನು ತಿನ್ನುವುದರಿಂದ ಕ್ಯಾಲಿಯಂನಂತಹ ಪೋಷಕಾಂಶಗಳು ಹೆಚ್ಚಾಗಿ ಲಬಿಸುತ್ತವೆ. ಇದರಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ.

ಶರೀರದಲ್ಲಿನ ವ್ಯರ್ಥ ಪದಾರ್ಥಗಳನ್ನು ಹೊರ ಹಾಕುವಲ್ಲಿ ಸೀತಾ ಫಲ ಸಹಾಯ ಮಾಡುತ್ತದೆ. ಇದು ರಕ್ತ ಶುದ್ಧ ಕೂಡ ಮಾಡುತ್ತದೆ.
ಸೀತಾ ಫಲ ಎಲೆಗಳನ್ನು ನುಣ್ಣಗೆ ಅರಿದು ಹಚ್ಚುವುದರಿಂದ ಗಾಯ ಮುಂತಾದ ಚರ್ಮ ರೋಗಗಳನ್ನು ವಾಸಿಮಾಡುತ್ತದೆ.

ಸೀತಾ ಫಲ ಹಣ್ಣನ್ನು ಗರ್ಭಿಣಿ ಸ್ತ್ರೀಯರು ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ಅದರ ಬೀಜಗಳು ಹೊಟ್ಟೆ ಒಳಗೆ ಹೋದರೆ ಗರ್ಭಪಾತವಾಗಬಹುದು. ಅತಿಯಾದರೆ ಅಮೃತನೂ ವಿಷವಾಗುತ್ತದೆ ಎಂದು ಹಿರಿಯರು ಹೇಳುವಂತೆ ಸೀತಾ ಫಲವನ್ನು ಮಿತವಾಗಿ ಸೇವಿಸಿದರೆ ಒಳ್ಳೆಯದು.

Comments are closed.