
ಬೆಂಗಳೂರು,ಜ.7-ಕಾಡುಗೊಂಡನಹಳ್ಳಿಯ ಗೋವಿಂದಪುರದ ಬಳಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿಯು ಕೃತ್ಯದ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ಗೋವಿಂದಪುರ ಮುಖ್ಯರಸ್ತೆಯಲ್ಲಿ ನಿನ್ನೆ ಮುಂಜಾನೆ 6.30ರ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬಾಲಿಸಿದ ದುಷ್ಕರ್ಮಿ ನನ್ನನ್ನು ತಬ್ಬಿಕೊಂಡಿದ್ದ ಆತನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನಾನೇ ನನ್ನ ನಾಲಿಗೆ ಕಚ್ಚಿಕೊಂಡಿದ್ದೇನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ನಿನ್ನೆ ಯುವತಿ ದುಷ್ಕರ್ಮಿಯೇ ನನ್ನನ್ನು ಬಿಗಿದಪ್ಪಿ ಚುಂಬಿಸಿ ನಾಲಿಗೆಕಚ್ಚಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದರು ಇಂದು ಹೇಳಿಕೆ ಬದಲಿಸಿ ಗೊಂದಲ ಸೃಷ್ಠಿಸಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಅಜಯ್ ಹಿಲೋರಿ ತಿಳಿಸಿದ್ದಾರೆ.
ದುಷ್ಕರ್ಮಿಯ ಪತ್ತೆಗೆ ಎಸಿಪಿ ರವಿ ಕುಮಾರ್ ನೇತೃತ್ವದಲ್ಲಿ ಎರಡು ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಲಾಗಿದ್ದು ಮೊಬೈಲ್ ಟವರ್ ಲೊಕೇಶನ್ ಹಾಗೂ ಯುವತಿಯ ಹೇಳಿಕೆ ಅಧಾರದ ಮೇಲೆ ತನಿಖೆ ತೀವ್ರ ಗೊಳಿಸಲಾಗಿದ್ದು ಅದಷ್ಟು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದರು.
ಸಂತ್ರಸ್ಥ ಯುವತಿಯು ನಿನ್ನೆ ಮುಂಜಾನೆ ಗೋಂವಿಂದಪುರದ ಅಕ್ಕನ ಮನೆಗೆ ಬಂದು ಕೆಲಸಕ್ಕೆ ವಾಪಸ್ ಹೋಗುತ್ತಿದ್ದಾಗ ಈ ಕೃತ್ಯ ನಡೆದಿದೆ ಯುವತಿಗೂ ದುಷ್ಕರ್ಮಿಗೂ ಹಿಂದೆ ಪರಿಚಯವಿರುವ ಬಗ್ಗೆ ಮಾಹಿತಿ ದೊರೆತಿಲ್ಲ ಕೃತ್ಯದ ಕೂಲಂಕುಶ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ
Comments are closed.