
ಬೆಂಗಳೂರು, ಜ. ೭- ಪರಸ್ತ್ರಿಯ ಸಂಗದಲ್ಲಿದ್ದ ಪತಿಯನ್ನು ಕಣ್ಣಾರೆ ಕಂಡು ಆಘಾತಗೊಂಡ ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಸವೇಶ್ವರ ನಗರದ ಕಮಲಾನಗರದಲ್ಲಿ ನಡೆದಿದೆ.
ಕಮಲಾನಗರದ ಎನ್‌ಜಿಒ ಕಾಲೋನಿಯ ಅನುಸೂಯ (35) ಮೃತಪಟ್ಟವರು. ಪತಿ ದೇವರಾಜ್ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪೀಣ್ಯದ ಮಲ್ಲಸಂದ್ರದ ಮನೆಯಲ್ಲಿ ಇರುವುದನ್ನು ತಿಳಿದು ಅಲ್ಲಿಗೆ ನಿನ್ನೆ ಬೆಳಿಗ್ಗೆ 11.30ರ ವೇಳೆ ಹೋಗಿ ಜಗಳ ತೆಗೆದಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿದಾಗ ಜೊತೆಯಲ್ಲೇ ತೆಗೆದುಕೊಂಡು ಹೋಗಿದ್ದ ವಿಷವನ್ನು ಅನುಸೂಯ ಸೇವಿಸಿ ಅಸ್ವಸ್ಥಗೊಂಡಿದ್ದು, ಕೂಡಲೇ ಆಕೆಯನ್ನು ಚಾಮರಾಜಪೇಟೆಯ ಬೃಂದಾವನ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಕನಕಪುರ ಮೂಲದ ಕಾರು ಚಾಲಕನಾಗಿದ್ದ ದೇವರಾಜ್‌ನನ್ನು ಅನುಸೂಯ ವಿವಾಹವಾಗಿ ಎನ್‌ಜಿಒ ಕಾಲೋನಿಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ದೇವರಾಜ್ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಆ ಮಹಿಳೆಯ ಜೊತೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ವಿಷಯ ತಿಳಿದ ಅನುಸೂಯ ಪತಿಯ ಜೊತೆ ಜಗಳ ಮಾಡಿ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದರೂ ಆತನ ವರ್ತನೆ ಸರಿಹೋಗಿರಲಿಲ್ಲ. ಇತ್ತೀಚೆಗೆ ಮನೆಗೆ ಬರುವುದನ್ನು ಕಡಿಮೆ ಮಾಡಿದ್ದ ಪತಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಯಲ್ಲಿಯೇ ಹೆಚ್ಚಾಗಿರುತ್ತಿದ್ದು, ಇದರಿಂದ ಅನುಸೂಯ ಆಕ್ರೋಶಗೊಂಡಿದ್ದರು.
ಪತಿಯನ್ನು ಹುಡುಕಿಕೊಂಡು ನಿನ್ನೆ ಬೆಳಿಗ್ಗೆ 11.30ಕ್ಕೆ ಮಲ್ಲಸಂದ್ರಕ್ಕೆ ಬಂದಿದ್ದ ಅನುಸೂಯ ಅವರು ದೇವರಾಜ್ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಯಲ್ಲಿರುವುದನ್ನು ನೋಡಿ ಆಘಾತಗೊಂಡು ಜಗಳ ತೆಗೆದು ಸಂಬಂಧಿಕರ ಜೊತೆ ಮೊಬೈಲ್‌ನಲ್ಲಿ ಮಾತನಾಡಿ ಜೊತೆಯಲ್ಲೇ ತಂದಿದ್ದ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿ ದೇವರಾಜ್‌ನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಲಾಬುರಾಮ್ ಅವರು ತಿಳಿಸಿದ್ದಾರೆ.
ಕರ್ನಾಟಕ
Comments are closed.