ರಾಷ್ಟ್ರೀಯ

ಮಗನ ಚಿಕಿತ್ಸೆಗೆ ಅಸ್ತಿ ಮಾರಿ ಬರಿಗೈಯಾದಾಗ ಸಹಾಯ ಮಾಡಿದವರು ಯಾರು ಗೊತ್ತಾ?

Pinterest LinkedIn Tumblr


ನವದೆಹಲಿ : ಅಪರೂಪದಲ್ಲಿ ಅಪರೂಪ ಎಂಬಂತೆ ಈ ಹುಡುಗ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಈತನ ಪೋಷಕರು ಆಸ್ತಿ, ಒಡವೆ, ಸೇವಿಂಗ್ಸ್ ಎಲ್ಲವನ್ನು ಖರ್ಚು ಮಾಡಿದ್ದರು. ಎಲ್ಲವೂ ಖಾಲಿಯಾಗಿ ಬರಿಗೈಯಾದಾಗ ಭರವಸೆಯನ್ನೇ ಕಳೆದುಕೊಂಡರು. ಕೊನೆಗೆ ಈತನ ತಂದೆ ಸಹಾಯ ಕೋರಿ ಪ್ರಧಾನಿಯವರಿಗೇಕೆ ಪತ್ರ ಬರೆಯಬಾರದೆಂದು ಎಂದು ಯೋಚಿಸಿ ಬರದೇ ಬಿಟ್ಟರು. ಆಶ್ಚರ್ಯ ಎಂಬತೆ ಪ್ರಧಾನಿ ಸಚಿವಾಲಯದಿಂದ ಉತ್ತರವೂ ಬಂತು.
ಗುಜರಾತ್ ನ ಅಮ್ರೇಲಿ ಜಿಲ್ಲೆಯ ಪಾರ್ಥ ಎಂಬ ಯುವಕ ಸಬಾಕ್ಯೂಟ್ ಸಲೆರೋಸಿಂಗ್ ಪಾನೆನ್ಸೆಫಾಲಿಟ್ಸ್ ಎನ್ನುವ ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. “ ಕಳೆದ 4 ತಿಂಗಳಿಂದ ಮಗನಿಗೆ ಡಯಾಗ್ನಿಸಿಸ್ ಮಾಡಿಸುತ್ತಿದ್ದೇನೆ. ತಜ್ಞ ವೈದ್ಯರನ್ನು ಭೇಟಿ ಮಾಡಿದ್ದೇನೆ. ಆದರೆ ಅವರ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿಲ್ಲ. ಮಗನಿಗೋಸ್ಕರ ಆಸ್ತಿಯನ್ನು ಮಾರಿದೆ. ಹೆಂಡತಿಯ ಒಡವೆಗಳನ್ನೆಲ್ಲಾ ಮಾರಿದೆ. ಕೊನೆಗೆ ಬೇರೆ ದಾರಿಯಿಲ್ಲದೇ ಸಹಾಯಕೋರಿ ಪ್ರಧಾನಿಯವರಿಗೆ ಪತ್ರ ಬರೆದೆ” ಎಂದು ಆತನ ತಂದೆ ಕಣ್ಣೀರಿಟ್ಟರು.
ಕೆಲವು ದಿನಗಳ ಬಳಿಕ ಪ್ರಧಾನಿ ಸಚಿವಾಲಯದಿಂದ ಪ್ರತಿಕ್ರಿಯೆ ಬಂತು. ಏಮ್ಸ್ ನಲ್ಲಿ ಉಚಿತವಾಗಿ ಸಂಪೂರ್ಣ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು. ಈಗ ಪಾರ್ಥ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಧಾನಿಯವರು ಕೇವಲ ಆರ್ಥಿಕ ಸಹಾಯ ಮಾತ್ರವಲ್ಲ ನೈತಿಕವಾಗಿಯೂ ಬೆಂಬಲ ನೀಡಿದರು ಎಂದು ಬಾಲಕನ ತಂದೆ ಗದ್ಗದಿತರಾದರು.
ದುರಾದೃಷ್ಟವಶಾತ್ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.

Comments are closed.