ರಾಷ್ಟ್ರೀಯ

ಜೈಲಿನಲ್ಲಿ ಮಾಜಿ ಸಂಸದ ಶಹಾಬುದ್ಧಿನ್ ಸೆಲ್ಫಿ

Pinterest LinkedIn Tumblr


ನವದೆಹಲಿ(ಜ.07): ಹತ್ಯೆಯೊಂದಕ್ಕೆ ಸಂಬಂಧಿಸಿದಂತೆ ಸಿವಾನ್ ಜೈಲು ಸೇರಿರುವ ಮಾಜಿ ಸಂಸದ ಮಹಮ್ಮದ್ ಶಹಾಬುದ್ಧಿನ್ ಸೂಟು ಬೂಟು ಹಾಕಿಕೊಂಡು ಸೆಲ್ಫಿ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಸೆಲ್ಫಿ ವೈರಲ್ ಆಗಿದ್ದು, ತಲೆ ಬೊಳಿಸಿಕೊಂಡು, ಮೀಸೆಯನ್ನು ಟ್ರಿಮ್ ಮಾಡಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಧಿಕಾರಿಗಳಲ್ಲಿ ಗೊಂದಲವನ್ನು ಉಂಟು ಮಾಡಿದೆ.
ಜೈಲಿನ ಹೊರಭಾಗದಲ್ಲಿ ಫೋಟೋವನ್ನು ತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೈಲಿನ ಆವರಣದಲ್ಲಿ 4 ಮೊಬೈಲ್ ಗಳನ್ನು, 4 ಸಿಮ್ ಕಾರ್ಡ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಇದರಲ್ಲಿ ಯಾವುದೂ ಶಹಬುದ್ಧಿನ್ ಗೆ ಸೇರಿದ್ದಲ್ಲ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಾಲ್ವರ ಮೇಲೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.