ಕರ್ನಾಟಕ

ಜಪಾನ್‍: ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಹುಬ್ಬಳ್ಳಿ ಯುವಕ

Pinterest LinkedIn Tumblr

hbl-karate
ಹುಬ್ಬಳ್ಳಿ: ಕರಾಟೆ ಎಂದಾಕ್ಷಣ ನಮಗೆ ನೆನಪಾಗುವುದು ಚೀನಾ, ಜಪಾನ್‍ನಂತಹ ದೇಶಗಳು. ಆದ್ರೆ ಹುಬ್ಬಳ್ಳಿಯ ಅರುಣ್ ಅನ್ನೋ ಬಡ ಯುವಪ್ರತಿಭೆ ಜಪಾನ್‍ನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯದ ಪತಾಕೆಯನ್ನ ಹಾರಿಸಿದ್ದಾರೆ.

ಹುಬ್ಬಳ್ಳಿಯ ಕಾಡು ಸಿದ್ದೇಶ್ವರ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗ ಮಾಡ್ತಿರೋ 21 ವರ್ಷದ ಅರುಣ್ ಕಳೆದ ತಿಂಗಳು ಜಪಾನ್‍ನಲ್ಲಿ ನಡೆದ 65 ಕೆಜಿ ವಿಭಾಗದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದಿದ್ದಾರೆ. ಲೀಗ್ ಹಂತದಿಂದಲೂ ಗಮನ ಸೆಳೆದು ಫೈನಲ್‍ನಲ್ಲಿ ಜಪಾನ್ ದೇಶದವರೇ ಆದ ರಾಬರ್ಟ್‍ಗೆ ಸೋಲುಣಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಹುಬ್ಬಳ್ಳಿಯ ನವನಗರದ ವಿಜಯಲಕ್ಷ್ಮಿ-ರಾಮಮೂರ್ತಿ ದಂಪತಿ ಹಿರಿಯ ಮಗನಾಗಿರೋ ಅರುಣ್, 6 ವರ್ಷಗಳಿಂದ ಕರಾಟೆ ಕಲಿಯುತ್ತಿದ್ದಾರೆ. ತಾನು ಕಲಿತ ವಿದ್ಯೆಯನ್ನು ಚಿಕ್ಕ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ.

ಬಡತನದಲ್ಲಿದ್ದರೂ ಮಗನ ಸಾಧನೆಗೆ ಬಡತನ ತಾಗದಂತೆ ನೀರೆರೆದವರು ಪೋಷಕರು. ಇಂಥ ಸಾಧನೆ ಮಾಡಿದರೂ ಎಲೆಮರೆ ಕಾಯಿಯಂತಿರೋ ಅರುಣ್‍ನಂತಹ ಪ್ರತಿಭೆಗಳನ್ನ ಸರ್ಕಾರ ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ.

Comments are closed.