ಕರ್ನಾಟಕ

ಪಾಕೆಟ್ ಮನಿಯಿಂದ ಸ್ವಚ್ಛ ಭಾರತ್ ಅಭಿಯಾನಕ್ಕೆ 15,000 ಕೊಟ್ಟ ಬಾಲಕ

Pinterest LinkedIn Tumblr

bdr-public-hero
ಬೀದರ್: ಪ್ರಧಾನಮಂತ್ರಿ ನರೇಂದ್ರ ಮೋದಿಯ ಕನಸಿನ ಯೋಜನೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಬಾಲಕನೊಬ್ಬ ಸಾಥ್ ನೀಡಿದ್ದಾನೆ. ಪೋಷಕರು, ಸಂಬಂಧಿಕರು ನೀಡುವ ಪಾಕೆಟ್ ಮನಿಯನ್ನು ಸಂಗ್ರಹಿಸಿ ಪ್ರಧಾನ ಮಂತ್ರಿಯ ಪರಿಹಾರ ನಿಧಿಗೆ ಕಳುಹಿಸಿದ್ದಾನೆ. ಈ ನಿಧಿಯಿಂದ ಒಂದು ಶೌಚಾಲಯವನ್ನ ದೇಶಕ್ಕೆ ಕೊಡುಗೆಯಾಗಿ ನೀಡೋದು ಈ ಪೋರನ ಆಶಯ.

ಬೀದರ್‍ನ ಶಿವನಗರದ ನಿವಾಸಿಯಾದ 15 ವರ್ಷದ ಮಲ್ಲಿಕಾರ್ಜುನ ಸ್ವಾಮಿ ಮನೆಯವರು ಕೊಟ್ಟ ಪುಡಿಗಾಸನ್ನು ಖರ್ಚು ಮಾಡದೇ ಸಂಗ್ರಹಿಸಿಟ್ಟಿದ್ದ. ಕಳೆದ ಮೂರು ವರ್ಷಗಳಿಂದ ಈತ ಹಣ ಸಂಗ್ರಹಿಸಿ ಈಗ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಾಥ್ ನೀಡುವ ಮೂಲಕ ದೇಶದ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

ಮಲ್ಲಿಕಾರ್ಜುನ್ ತನ್ನ ಪೋಷಕರು ಹಾಗೂ ಸಂಬಂಧಿಕರು ಕೊಟ್ಟ 11,880 ರೂಪಾಯಿಗಳ ಜೊತೆ ಪೋಷಕರಿಂದ 3 ಸಾವಿರ ರೂಪಾಯಿ ಪಡೆದು ಒಟ್ಟು 15 ಸಾವಿರ ರೂಪಾಯಿ ಸಂಗ್ರಹಿಸಿದ್ದಾನೆ. ಈ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕಳಿಸಿದ್ದಾನೆ. ಇದೇ ಹಣದಿಂದ ಒಂದು ಶೌಚಾಲಯ ಕಟ್ಟಬೇಕು ಅನ್ನೋದು ಮಲ್ಲಿಕಾರ್ಜುನ ಸ್ವಾಮಿಯ ಆಶಯ.

ತಿಂಡಿ ತಿನ್ನಲು ಪೋಷಕರು ಕೊಟ್ಟ ಹಣವನ್ನು ಪೋಷಕರಿಗೆ ಗೊತ್ತಿಲ್ಲದೇ ಕೂಡಿಟ್ಟು ಸಮಾಜಮುಖಿ ಕಾರ್ಯ ಮಾಡಿರುವುದು ಮಲ್ಲಿಕಾರ್ಜುನ ಸ್ವಾಮಿಯ ಪೋಷಕರಿಗೆ ಸಂತಸ ತಂದಿದೆ.

Comments are closed.