ಬೆಂಗಳೂರು(ಜ. 02): ಅದೆಷ್ಟೋ ಯುವ ಮನಸ್ಸುಗಳು ರಾತ್ರಿ ಪಾರ್ಟಿ, ಮೋಜು ಮಸ್ತಿಯ ಗುಂಗಿನಲ್ಲಿದ್ರು. ಹೊಸ ವರ್ಷ ಸ್ವಾಗತಕ್ಕೆ ಎಂಜಿ ರೋಡ್ ಅನ್ನೋ ಮಾಯಾ ಪ್ರಪಂಚದಲ್ಲಿ ಸಜ್ಜಾಗಿ ನಿಂತಿದ್ರು. ಆದ್ರೆ ಲಕ್ಷಾಂತರ ಜನ ಸೇರುವ ಈ ಮಾಯಾ ಪ್ರಪಂಚದಲ್ಲಿ ಯುವತಿಯರಿಗೆ ಸೇಫ್ಟಿಯೇ ಇರಲಿಲ್ಲ. ಕಿಡಿಗೇಡಿಗಳ ಕಾಟದಿಂದ ಯುವತಿಯರ ಸಂಭ್ರಮಾಚರಣೆಗೆ ತಣ್ಣೀರೆರಚಿದ್ದು ಸುಳ್ಳಲ್ಲ..
ಸಂಭ್ರಮಾಚರಣೆಯ ಗುಂಪಲ್ಲಿ ಕುಚೇಷ್ಟೆ ಮಾಡಿದ್ರೆ ಪೊಲೀಸರಿಗೆ ಗೊತ್ತಾಗಲ್ಲ ಅನ್ನೋ ಭಂಡ ಧೈರ್ಯದಿಂದ ಪುಂಡರು ಹೆಣ್ಮಕ್ಕಳನ್ನ ಎಳೆದಾಡಿದ್ದಾರೆ.. ಮೈಕೈ ಮುಟ್ಟಿ ಚಪಲ ತೀರಿಸಿಕೊಂಡಿದ್ದಾರೆ. ಹುಡುಗಿಯರಿಗೆ ಕಣ್ಣೀರು ಹಾಕಿಸಿದ್ದಾರೆ.. ಆದ್ರೆ ಪೊಲಿಸರು ಸರಿಯಾದ ಭದ್ರೆತೆಯೊಂದಿಗೆ ಸಿಸಿಟಿವಿ ಪರಿಶೀಲಿಸಿ ಕೇಸ್ ಜಡಿದಿದ್ರೆ ಅದೆಷ್ಟೋ ಪ್ರಕರಣಗಳು ಬಯಲಿಗೆ ಬರ್ತಿದ್ವು .ಆದ್ರೆ ಇಂತಹ ಘಟನೆಗಳು ನಡೆದರೂ ಸ್ಥಳದಲ್ಲಿದ್ದ ಪೊಲೀಸರು ಮೌನವಹಿಸಿದ್ದರು. ಅಲ್ಲಿದ್ದ ಪೊಲೀಸರು ಮಾತ್ರ ತಲೆ ಕೆಡಿಸಿಕೊಳ್ಳಲೇ ಇಲ್ಲ.
ಲಕ್ಷಾಂತರ ಜನರ ಮಧ್ಯೆಯೇ ಹೆಣ್ಮಕ್ಕಳನ್ನ ಹಿಡಿದು ಎಳೆದಾಡಿದ ಈ ಘಟನೆಗೆ ಎಂಜಿ ರೋಡ್ ಸಾಕ್ಷಿಯಾಯ್ತು ಅಂದ್ರೆ ಅಲ್ಲಿ ಭದ್ರತೆ ವೈಫಲ್ಯವಲ್ಲದೇ ಬೇರೇನೂ ಅಲ್ಲ… ನಿನ್ನೆ ನಡೆದ ಪೊಲೀಸ್ ಇಲಾಖೆಯ ಟ್ರಾನ್ಸ್’ಫರ್, ಆಯುಕ್ತರ ಬದಲಾವಣೆಯಿಂದ ಭದ್ರತಾ ಸಿಬ್ಬಂದಿ ಸರಿಯಾದ ಭದ್ರತೆ ಕೈಗೊಳ್ಳಲಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಭದ್ರತೆಯ ವೈಫಲ್ಯವನ್ನೂ ಪೊಲೀಸರಲ್ಲಿ ಯಾರೂ ಹೊರಲು ಸಿದ್ಧರಿಲ್ಲ. ತಾನು ಇನ್ನೂ ಅಧಿಕಾರ ವಹಿಸಿಕೊಂಡಿರಲಿಲ್ಲ ಎಂದು ನೂತನ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಪ್ರತಿಕ್ರಿಯಿಸಿದ್ದಾರೆ. ಹಿಂದಿನ ಕಮಿಷನರ್ ಮೇಘರಿಕ್ ತಾನು ಕರ್ತವ್ಯದಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ, ವೈಫಲ್ಯದ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ರಾಮರಾಜ್ಯದ ಕನಸು ಹೊತ್ತಿದ್ದ ಮಹಾತ್ಮರು ಮಧ್ಯರಾತ್ರಿಯಲ್ಲೂ ಒಂಟಿ ಮಹಿಳೆ ಒಡಾಡುವಂತಾಗಲಿ ಅನ್ನೋ ಆಶಯ ಇಟ್ಕೊಂಡಿದ್ರು. ಆದ್ರೆ ಲಕ್ಷಾಂತರ ಜನ ಇದ್ದ ಜಾಗದಲ್ಲೇ ಯುವತಿಯರಿಗೆ ರಕ್ಷಣೆ ಇಲ್ಲದಂತೆ ಆಗಿದ್ದು ಮಾತ್ರ ಶೋಚನೀಯ. ಇದು ಪೊಲೀಸರಿಂದಲೇ ಆದ ಕಾನೂನು ಸುವ್ಯವಸ್ಥೆಯ ಸ್ಪಷ್ಟ ಉಲ್ಲಂಘನೆಯಲ್ಲದೇ ಬೇರೇನೂ ಅಲ್ಲ.
ಕರ್ನಾಟಕ
Comments are closed.