ಕರ್ನಾಟಕ

ಕಿಟಕಿಯಲ್ಲಿ ಇಟ್ಟಿದ್ದ ಕೀ ತೆಗೆದು ಟೆಕ್ಕಿ ಮನೆಯ ಕಳವು

Pinterest LinkedIn Tumblr

key
ಬೆಂಗಳೂರು,ಜ.2-ಮನೆಗೆ ಬೀಗ ಹಾಕಿ ಕಿಟಕಿಯಲ್ಲಿ ಕೀ ಇಟ್ಟು ಹೋಗಿದ್ದ ಸಾಫ್ಟ್‍ವೇರ್ ಇಂಜಿನಿಯರೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಉತ್ತರಹಳ್ಳಿ ಮುಖ್ಯರಸ್ತೆಯ ವಸಂತಪುರದಲ್ಲಿ ನಡೆದಿದೆ.
ಕಾಸಗಿ ಕಂಪನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದ ಆಂಧ್ರದ ನೆಲ್ಲೂರು ಮೂಲದ ಚುಂಚರೆಡ್ಡಿ ವಸಂತಪುರದ ಅಪಾರ್ಟ್‍ಮೆಂಟ್ ವೊಂದರ ಮನೆಗೆ ಬೀಗ ಹಾಕಿ ಕೀಯನ್ನು ಕಿಟಕಿ ಬಳಿ ಇಟ್ಟು ಕುಂಟುಂಬ ಸಮೇತ ಕೇರಳದ ಕಣ್ಣೂರಿಗೆ ಡಿ.25 ರಂದು ಹೋಗಿ ನಿನ್ನೆ ಬೆಳಿಗ್ಗೆ ವಾಪಸಾಗಿದ್ದಾರೆ.
ಮನೆಗೆ ಬಂದು ನೋಡಿದಾಗ ಬಾಗಿಲು ಕಿಟಕಿಯಲ್ಲಿಟ್ಟಿದ್ದ ಕೀ ತೆಗೆದುಕೊಂಡು ಬೀಗ ತೆಗೆದು ಒಳನುಗ್ಗಿದ್ದ ದುಷ್ಕರ್ಮಿಗಳು ನಗದು,ಚಿನ್ನ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಸುಬ್ರಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
10 ಸಾವಿರ ಕಳವು
ಕಗ್ಗದಾಸನಪುರದ ನಾಗಪ್ಪರೆಡ್ಡಿ ಲೇಔಟ್‍ನ ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ಹೋಗಿದ್ದ ರವೀಂದ್ರ ಮನೆಯ ಮುಂಭಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು 10 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.
ರವೀಂದ್ರ ಅವರು ಡಿ.30ರಂದು ಹೋಗಿ ನಿನ್ನೆ ಬೆಳಿಗ್ಗೆ ವಾಪಸಾಗಿ ಬಂದು ನೋಡಿದಾಗ ಕಳ್ಳತನ ನಡೆದಿತ್ತು ಬಯ್ಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲಾರಿಗೆ ಕಾರು ಡಿಕ್ಕಿ.
ಮಹಿಳೆ ಸಾವು
ಕೋಲಾರ,ಜ2-ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದೆ.
ಕಾರಿನಲ್ಲಿದ್ದ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ 75ರ ಪವನ್ ಕಾಲೇಜು ಬಳಿ ಆಂಧ್ರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸ್ಕಾರ್ಪಿಯೋ ಲಾರಿಗೆ ಡಿಕ್ಕಿ ಹೊಡೆದು ಈಅಪಘಾತ ಸಂಭವಿಸಿದೆ.
ಮೃತ ಮಹಿಳೆಯನ್ನ ಷೇಕ್ ಹಪೀಜಾ (28) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕೋಲಾರ ಸಂಚಾರಿ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಬಸ್ ಹರಿದು ಮಹಿಳೆ ಸಾವು
ಬೆಂಗಳೂರು,ಜ.2-ಬಿಎಂಟಿಸಿ ಬಸ್ ಹರಿದು ವೃದ್ಧೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಹಂಪಿನಗರದ ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಹಂಪಿನಗರದ ಸುಲೋಚನಾ(78)ಮೃತಪಟ್ಟವರು,ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉದ್ಯೋಗಿಯಾಗಿರುವ ಸುಲೋಚನಾ ಅವರು ವಿಜಯನಗರದ ವಾಟರ್ ಟ್ಯಾಂಕ್ ಬಳಿಯ ಗಣೇಶ ದೇವಾಲಯದ ನಿರ್ವಹಣಾ ಕೆಲಸವನ್ನು ನೋಡಿಕೊಳ್ಳುತ್ತಿದ್ದರು.
ದೇವಾಲಯಕ್ಕೆ ಹೋಗಲು ಸಂಜೆ 5.15ರ ವೇಳೆ ಮನೆಯಂದ ಹಂಪಿನಗರದ ಬಸ್‍ನಿಲ್ದಾಣಕ್ಕೆ ಬಂದು ಬಸ್ ಹತ್ತಲು ಹೋಗುತ್ತಿದ್ದಾಗ ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿದ್ದಾರೆ ವಿಜಯನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೈಕ್‌ಗಳ ಡಿಕ್ಕಿ: ಬಾಲಕ ಸಾವು
ಗುಬ್ಬಿ, ಜ. ೨- ಎರ‌ಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನೇನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬುವರ ಪುತ್ರ ಸಿ.ಕೆ. ಮನೋಜ್ (15) ಎಂಬಾತನೇ ಮೃತಪಟ್ಟಿರುವ ದುರ್ದೈವಿ. ಈತ ತನ್ನ ತಂದೆ ಜತೆ ದ್ವಿಚಕ್ರ ವಾಹನದಲ್ಲಿ ರಸ್ತೆಬದಿ ಹೋಗುತ್ತಿದ್ದಾಗ ಮತ್ತೊಂದು ದ್ವಿಚಕ್ರ ವಾಹನ ಇವರ ಬೈಕ್‌ಗೆ ಅಪ್ಪಳಿಸಿದ ಪರಿಣಾಮ ಮನೋಜ್‌ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಈತನನ್ನು 108 ತುರ್ತು ವಾಹನದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಈ ಸಂಬಂಧ ಸಿ.ಎಸ್. ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Comments are closed.